ಸಲ್ಮಾನ್ ಖಾನ್ ಧರ್ಮದ ವಿಚಾರದ ಬಗ್ಗೆ ಮಾತನಾಡಿದ ಅವರ ಪಕ್ಕದ ಮನೆಯ ವ್ಯಕ್ತಿ ವಿರುದ್ಧ ಸಲ್ಲು ಕೇಸ್ ದಾಖಲಿಸಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಆವರು ಮುಂಬೈನ ಹೊರ ವಲಯದಲ್ಲಿರುವ ಪನ್ವೆಲ್ನಲ್ಲಿ ಫಾರ್ಮ್ಹೌಸ್ ಹೊಂದಿದ್ದಾರೆ. ಬಿಡುವಿನ ಸಮಯದಲ್ಲಿ ಹೆಚ್ಚಾಗಿ ಇದೇ ಜಾಗದಲ್ಲಿ ಕಾಲ ಕಳೆಯುವ ಸಲ್ಲು ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಕೂಡ ಇದೇ ಫಾರ್ಮ್ ಹೌಸ್ನಲ್ಲಿ ಆಚರಿಸಿಕೊಳ್ಳುತ್ತಾರೆ.
ಸಲ್ಲು ಫಾರ್ಮ್ ಹೌಸ್ ಪಕ್ಕದಲ್ಲಿ ಕೇತನ್ ಕಕ್ಕಡ್ ಎಂಬ ವ್ಯಕ್ತಿ ಆಸ್ತಿಯನ್ನು ಹೊಂದಿದ್ದಾರೆ. ಸಲ್ಮಾನ್ ಹಾಗೂ ಕೇತನ್ ನಡುವೆ ಆಗಾಗ ಏನಾದರೂ ಸಣ್ಣ ಪುಟ್ಟ ವಿಚಾರದ ಬಗ್ಗೆ ಜಗಳ ನಡಿಯುತ್ತಿತ್ತು. ಆದರೆ ಈ ಬಾರಿ ಜಗಳ ನಡೆಯುವ ವೇಳೆ ಕೇತನ್ ಕಕ್ಕಡ್ ,ಸಲ್ಮಾನ್ ಅವರ ಧರ್ಮದ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರವಾಗಿ ಸಲ್ಲು ಕೇತನ್ ಕಕ್ಕಡ್ ವಿರುದ್ಧ ಗರಂ ಆಗಿದ್ದರು.
ಸಲ್ಮಾನ್ ಜೊತೆ ಜಗಳವಾಡಿದ ನಂತರ ಕೇತನ್ ಈ ವಿಚಾರವಾಗಿ ಯೂಟ್ಯೂಬ್ ಚಾನೆಲ್ಗಳಿಗೆ ಸಂದರ್ಶನ ನೀಡಲು ಆರಂಭಿಸಿ ಸಲ್ಲು ವಿರುದ್ದ ಅನೇಕ ಆರೋಪಗಳನ್ನು ಮಾಡಿದ್ದಾರೆ. ಈ ಕಾರಣಕ್ಕಾಗಿ ಕೇತನ್ ವಿರುದ್ದ ಸಲ್ಲು ಮಾನನಷ್ಟ ಮೊಕದ್ದಮೆ ದಾಖಲಿಸಿ ಫೇಸ್ಬುಕ್, ಟ್ವಿಟರ್, ಯೂಟ್ಯೂಬ್, ಗೂಗಲ್ ಮುಂತಾದ ಕಡೆಗಳಲ್ಲಿ ತಮ್ಮ ಬಗ್ಗೆ ಇರುವ ಮಾನಹಾನಿಕಾರಕ ಮಾಹಿತಿಯನ್ನು ತೆಗೆದು ಹಾಕುವಂತೆ ಸಲ್ಲು ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ಆಸ್ತಿ ವಿಚಾರಕ್ಕಾಗಿ ನನ್ನ ವೈಯಕ್ತಿಕ ಘನತೆಗೆ ಯಾಕೆ ಧಕ್ಕೆ ಉಂಟು ಮಾಡುತ್ತಿದ್ದೀರಿ? ನನ್ನ ಧರ್ಮವನ್ನು ಯಾಕೆ ಎಳೆದು ತರುತ್ತಿದ್ದೀರಿ ಅಂತ ಸಲ್ಲು ಪ್ರಶ್ನಿಸಿದ್ದಾರೆ. ನನ್ನ ತಂದೆ ಮುಸ್ಲಿಂ, ತಾಯಿ ಹಿಂದೂ. ನನ್ನ ಸಹೋದರರು ಹಿಂದೂಗಳನ್ನು ಮದುವೆ ಆಗಿದ್ದಾರೆ. ಹೀಗಾಗಿ ನಾವು ಎಲ್ಲಾ ಹಬ್ಬಗಳನ್ನು ಆಚರಿಸುತ್ತೇವೆ ಅಂತ ಸಲ್ಲು ಕೇತನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.