ಧರ್ಮಶಾಲಾ ಭೇಟಿಯೊಂದಿಗೆ ಪ್ರಧಾನಿ ಮೋದಿಯವರ ಎರಡು ದಿನಗಳ ಹಿಮಾಚಲ ಪ್ರದೇಶ ಪ್ರವಾಸ ಇಂದು ಆರಂಭ | PM Narendra Modi will begin a two day Himachal Pradesh tour today with Dharamshala visit


ಧರ್ಮಶಾಲಾ ಭೇಟಿಯೊಂದಿಗೆ ಪ್ರಧಾನಿ ಮೋದಿಯವರ ಎರಡು ದಿನಗಳ ಹಿಮಾಚಲ ಪ್ರದೇಶ ಪ್ರವಾಸ ಇಂದು ಆರಂಭ

ನರೇಂದ್ರ ಮೋದಿ

ಧರ್ಮಶಾಲಾದ ಪೊಲೀಸ್ ಸ್ಟೇಡಿಯಂನಲ್ಲಿ ವಿಶೇಷವಾಗಿ ರಚಿಸಲಾದ ಹೆಲಿಪ್ಯಾಡ್‌ಗೆ ಪ್ರಧಾನಿ ಆಗಮಿಸಲಿದ್ದು, ಅಲ್ಲಿ ರಾಜ್ಯದ ರಾಜ್ಯಪಾಲರು, ಸಿಎಂ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಸ್ವಾಗತಿಸಲಿದ್ದಾರೆ.

TV9kannada Web Team

| Edited By: Rashmi Kallakatta

Jun 16, 2022 | 10:06 AM
ಶಿಮ್ಲಾ: ಧರ್ಮಶಾಲಾಗೆ ಭೇಟಿ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎರಡು ದಿನಗಳ ಹಿಮಾಚಲ ಪ್ರದೇಶ ಪ್ರವಾಸವನ್ನು(Himachal Pradesh)ಇಂದು (ಗುರುವಾರ, ಜೂನ್ 16) ಪ್ರಾರಂಭಿಸಲಿದ್ದಾರೆ. ಧರ್ಮಶಾಲಾದ (Dharamshala) ಪೊಲೀಸ್ ಸ್ಟೇಡಿಯಂನಲ್ಲಿ ವಿಶೇಷವಾಗಿ ರಚಿಸಲಾದ ಹೆಲಿಪ್ಯಾಡ್‌ಗೆ ಪ್ರಧಾನಿ ಆಗಮಿಸಲಿದ್ದು, ಅಲ್ಲಿ ರಾಜ್ಯದ ರಾಜ್ಯಪಾಲರು, ಸಿಎಂ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಸ್ವಾಗತಿಸಲಿದ್ದಾರೆ. ಶುಕ್ರವಾರ ಸಂಜೆ ಮೋದಿ ದೆಹಲಿಗೆ ತೆರಳಲಿದ್ದಾರೆ. ಪ್ರಧಾನಿ ಭೇಟಿಗೂ ಮುನ್ನ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಬುಧವಾರ ಭೇಟಿಯ ಸಿದ್ಧತೆಗಳನ್ನು ಪರಿಶೀಲಿಸಿದರು. ಮುಖ್ಯಮಂತ್ರಿಗಳು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಶಿಷ್ಟಾಚಾರದ ಪ್ರಕಾರ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)

TV9 Kannada


Leave a Reply

Your email address will not be published.