ಚಿಕ್ಕಮಗಳೂರು: ನವ ವಧು- ವರರು ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ವಿವಾಹವಾಗಿ ಚಿಕ್ಕಮಗಳೂರಿಗೆ ವಾಪಾಸಾಗುತ್ತಿದ್ದ ವೇಳೆ ಟಿಟಿ ವ್ಯಾನ್ ಪಲ್ಟಿಯಾಗಿರುವ ಘಟನೆ ಚಾರ್ಮಾಡಿ ಘಾಟ್ ನಾಲ್ಕನೇ ತಿರುವಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಮೂಲದ ವಧು- ವರರು ಇಂದು ಧರ್ಮಸ್ಥಳ ದಲ್ಲಿ ವಿವಾಹವಾಗಿ ವಾಪಾಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಕಂದಕಕ್ಕೆ ಉರುಳಿದಿದೆ. ಅದೃಷ್ಟವಶಾತ್ ವಾಹನದಲ್ಲಿದ್ದವರು ಪ್ರಾಣ ಹಾನಿಯಿಂದ ಬಚಾವ್ ಆಗಿದ್ದು, ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.