ಧರ್ಮಸ್ಥಳ ಯಾತ್ರೆ ರದ್ದುಗೊಳಿಸಿ ಅಪ್ಪು ಸಮಾಧಿಗೆ ಸೈಕಲ್​ ಯಾತ್ರೆ ಆರಂಭಿಸಿದ ಫ್ಯಾನ್ಸ್​..!


ವಿಜಯನಗರ : ಸ್ಯಾಂಡಲ್​ವುಡ್​ಗೆ ಪವರ್​ ಆಗಿದ್ದ ಅಭಿಮಾನಿಗಳ ಪವರ್​ ಸ್ಟಾರ್​ ಪುನೀತ್​ ರಾಜ್​​ಕುಮಾರ್​ ನಮ್ಮನ್ನಗಲಿ ಸುಮಾರು 2 ತಿಂಗಳು ಕಳೆದಿವೆ. ಆದರೆ ಅಪ್ಪು ಇಲ್ಲ ಅನ್ನೋ ಸತ್ಯವನ್ನು ಮಾತ್ರ ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ನಮ್ಮ ಮಧ್ಯೆಯೇ ಇದ್ದಾರೆ ಎಂದು ಬದುಕುತ್ತಿದ್ದಾರೆ ಅಪ್ಪು ಅಭಿಮಾನಿಗಳು. ಹೌದು ಅಪ್ಪು ಅಭಿಮಾನಿಗಳು ದೂರದ ವಿಜಯನಗರದಿಂದ ಪುನೀತ್​ ಸಮಾಧಿ ದರ್ಶನಕ್ಕೆ ಸೈಕಲ್​ ಯಾತ್ರೆ ಆರಂಭಿಸಿದ್ದಾರೆ.

ವಿಜಯನಗರದದಿಂದ ಸಿಲಿಕಾನ್​ ಸಿಟಿಗೆ ಸುಮಾರ 280 ಕಿಮೀಗಳ ಅಂತರವಿದ್ದು ಅಪ್ಪು ಮೇಲಿನ ಅಭಿಮಾನಕ್ಕಾಗಿ ಫ್ಯಾನ್ಸ್​ ಸೈಕಲ್​ ಯಾತ್ರೆ ಆರಂಭಿಸಿದ್ದಾರೆ. ಹೊಸಪೇಟೆಯ 13 ಜನ ಯುವಕರ ತಂಡದಿಂದ ಈ ಯಾತ್ರೆ ಶುರುಗೊಂಡಿದ್ದು ನಗರದ ಪುನೀತ್ ರಾಜ್‍ಕುಮಾರ್ ಸರ್ಕಲ್‌ನಿಂದ ಯಾತ್ರೆ ಆರಂಭವಾಗಿದೆ.

ಇನ್ನು ವಿಶೇಷ ಎಂಬಂತೆ ಪುನೀತ್ ರಾಜ್‍ಕುಮಾರ್ ಕಟ್ಟಾಭಿಮಾನಿಗಳಾಗಿರುವ ಈ ಯುವಕರು ಪ್ರತಿ ವರ್ಷ ಈ ಸಮಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ, ಶ್ರೀಶೈಲಕ್ಕೆ ಸೈಕಲ್ ಯಾತ್ರೆ ಮಾಡ್ತಿದ್ದರಂತೆ. ಆದರೆ ಹೋದ ವರ್ಷ ತಮ್ಮ ನೆಚ್ಚಿನ ನಟ ಬಾರದೂರಿಗೆ ತೆರಳಿದ್ದು ಅವರ ಸಮಾಧಿ ದರ್ಶನ ಪಡೆಯಲು ಬೆಂಗಳೂರಿಗೆ ಯಾತ್ರೆಯನ್ನು ಕೈಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

 

News First Live Kannada


Leave a Reply

Your email address will not be published. Required fields are marked *