ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2022 ಮೆಗಾ ಆಕ್ಷನ್ ಮುಗಿದಿದೆ. ಕಳೆದ ಮೂರು ಆವೃತ್ತಿಗಳಲ್ಲೂ ಸೋತ ಪಂಜಾಬ್ ಕಿಂಗ್ಸ್ ಈ ಬಾರಿಯಾದ್ರೂ ಟ್ರೋಫಿ ಗೆಲ್ಲಲೇಬೇಕು ಎಂದು ಪಣತೊಟ್ಟಿದೆ. ಆದರೀಗ, ತಂಡವನ್ನು ಮುನ್ನಡೆಸೋದು ಯಾರು ಎಂಬುದೇ ಯಕ್ಷಪ್ರಶ್ನೆ. ಈ ನಡುವೆ ಸುನಿಲ್ ಗವಾಸ್ಕರ್, ಪಂಜಾಬ್ ಕಿಂಗ್ಸ್ ತಂಡವನ್ನು ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಮುನ್ನಡೆಸಬೇಕು ಎಂದಿದ್ದಾರೆ.
ನನಗೆ ಪಂಜಾಬ್ ಕಿಂಗ್ಸ್ ತಂಡದ ಭವಿಷ್ಯ ಮುಖ್ಯ. ಹೀಗಾಗಿ ಕ್ಯಾಪ್ಟನ್ ಆಗಿ ಮಯಾಂಕ್ ಅಗರ್ವಾಲ್ ಆಯ್ಕೆಯಾಗಲಿ ಎಂಬುದು ನನ್ನ ಅಭಿಪ್ರಾಯ. ಖಂಡಿತಾ ಮಯಾಂಕ್ ಅವರಲ್ಲಿ ನಾಯಕನ ಗುಣಗಳಿವೆ ಎಂಬುದನ್ನು ನಂಬಿದ್ದೇವೆ ಎಂದರು.
ಮಯಾಂಕ್ ಸದಾ ಉತ್ತಮ ಆಟಗಾರನಾಗಿ ಹೊರಹೊಮ್ಮುವ ಪ್ರಯತ್ನ ಮಾಡುತ್ತಾರೆ. ಬಹಳ ಉತ್ಸಾಹ ಅವರಲ್ಲಿದೆ. ಭಾರತ ತಂಡದ ಪರ ಆಡುವಾಗ ಈ ಗುಣಗಳನ್ನು ನಾನು ಕಂಡಿದ್ದೇನೆ. ಧವನ್ ಬೇಡ, ಕನ್ನಡಿಗ ಮಯಾಂಕ್ ಅಗರ್ವಾಲ್ಗೆ ತಂಡ ಮುನ್ನಡೆಸುವ ಅವಕಾಶ ಸಿಗಲಿ ಎಂದು ಆಶಯ ವ್ಯಕ್ತಪಡಿಸಿದರು.