ಧವನ್ ಕೊಳಲು ವಾದನಕ್ಕೆ ಪ್ರುಥ್ವಿ ಶಾ ಅದ್ಭುತ ಗಾಯನ; ಇದನ್ನ ನೀವು ಕೇಳಲೇಬೇಕು!

ಧವನ್ ಕೊಳಲು ವಾದನಕ್ಕೆ ಪ್ರುಥ್ವಿ ಶಾ ಅದ್ಭುತ ಗಾಯನ; ಇದನ್ನ ನೀವು ಕೇಳಲೇಬೇಕು!

ಶಿಖರ್ ಧವನ್ ನಾಯಕತ್ವದಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಭಾರತ ಏಕದಿನ ಮತ್ತು ಟಿ 20 ಪಂದ್ಯಗಳನ್ನು ಆಡಬೇಕಾಗಿದೆ. ಇದಕ್ಕೂ ಮೊದಲು ನಾಯಕ ಶಿಖರ್ ಧವನ್ ವಿಶ್ರಾಂತಿ ಮೂಡ್​ನಲ್ಲಿದ್ದಾರೆ. ಪೃಥ್ವಿ ಶಾ ಜೊತೆಗೆ ಧವನ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿರುವ ವಿಡಿಯೋವೊಂದು ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಧವನ್ ‘ಚೈನ್ ಕಿ ಬನ್ಸಿ’ ನುಡಿಸುತ್ತಿದ್ದರೆ, ಪೃಥ್ವಿ ಶಾ ತಮ್ಮ ಗಾಯನ ಕೌಶಲ್ಯವನ್ನು ತೋರಿಸುತ್ತಿದ್ದಾರೆ. ಶಿಖರ್ ಧವನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ನಾವು ರಾಗದಲ್ಲಿ ಒಟ್ಟಿಗೆ ಸೇರಿದ್ದೇವೆ, ನಮ್ಮ ಸೂಪರ್ ಸ್ಟಾರ್ ಗಾಯಕ ಪೃಥ್ವಿ ಶಾ ಅಂತಾ ಧವನ್ ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ: T20 World Cup 2021​​; ಒಂದೇ ಗ್ರೂಪ್​​ನಲ್ಲಿ ಕಾದಾಡಲಿವೆ ಭಾರತ-ಪಾಕಿಸ್ತಾನ ಟೀಮ್

 

View this post on Instagram

 

A post shared by Shikhar Dhawan (@shikhardofficial)

The post ಧವನ್ ಕೊಳಲು ವಾದನಕ್ಕೆ ಪ್ರುಥ್ವಿ ಶಾ ಅದ್ಭುತ ಗಾಯನ; ಇದನ್ನ ನೀವು ಕೇಳಲೇಬೇಕು! appeared first on News First Kannada.

Source: newsfirstlive.com

Source link