ಧಾರವಾಡ: ಜಿಲ್ಲಾ ಆಸ್ಪತ್ರೆ ವೈದ್ಯರಿಗೂ ಕೊರೊನಾ ಕಂಟಕ ಆರಂಭವಾಗಿದೆ. ಆಸ್ಪತ್ರೆಯ 6 ವೈದ್ಯರಿಗೆ ಕೊರೊನಾ ಸೋಂಕು ತಗುಲಿದ್ದು, ಈ ವೈದ್ಯರ ಜೊತೆಗೆ ಒಟ್ಟು  34 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

6 ವೈದ್ಯರು, 15 ಸ್ಟಾಫ್ ನರ್ಸ್, 3 ಡಾಟಾ ಎಂಟ್ರಿ ಆಪರೇಟರ್, 4 ಲ್ಯಾಬ್ ತಂತ್ರಜ್ಞರು, 2 ಫಿಸಿಯೋಥೆರಪಿಸ್ಟ್, 2 ಕೌನ್ಸಿಲರ್ ಹಾಗೂ 2 ಡಿ ಗ್ರುಪ್ ನೌಕರರಿಗೆ ಈಗಾಗಲೇ ಸೋಂಕುದೃಢ ಪಟ್ಟಿದೆ. ಹೀಗಾಗಿ ಇವರೆಲ್ಲಿ ಕೆಲವರು ಹೊಂ ಐಸೋಲೆಷನ್ ನಲ್ಲಿದ್ದಾರೆ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ನರ್ಸಗಳ ಕೊರತೆ ಕೂಡ ಆಗಿದೆ. ಹೀಗಾಗಿ ಇದ್ದ ನರ್ಸಗಳನ್ನ ಬಳಸಿಕೊಂಡು ಜಿಲ್ಲಾ ಆಸ್ಪತ್ರೆ ಕೆಲಸ ಮುಂದುವರೆಸಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,11,170 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 4,077 ಜನ ಸಾವನ್ನಪ್ಪಿದ್ದಾರೆ. ಖುಷಿಯ ವಿಚಾರವೆಂದರೆ 3,62,437 ಜನ ಗುಣುಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

The post ಧಾರವಾಡದಲ್ಲಿ ಕೊರೊನಾ ಕಂಟಕ- 6 ವೈದ್ಯರು ಸೇರಿ 36 ಸಿಬ್ಬಂದಿಗೆ ಸೋಂಕು appeared first on Public TV.

Source: publictv.in

Source link