ಧಾರವಾಡ: ರಷ್ಯಾದ ಸ್ಪುಟ್ನಿಕ್ ವಿ ವ್ಯಾಕ್ಸಿನ್ ಇನ್ಮುಂದೆ ಧಾರವಾಡದಲ್ಲಿ ತಯಾರಾಗಲಿದೆ. ಧಾರವಾಡದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರೊ ಶಿಲ್ಪಾ ಬಯೋಲಾಜಿಕಲ್ಸ್ ಪ್ರೈವೇಟ್ ಲಿಮಿಟೆಡ್‌ ಯೂನಿಟ್​​ನಲ್ಲಿ ಲಸಿಕೆಯನ್ನ ತಯಾರಿ ಮಾಡಲಾಗುತ್ತದೆ.

ಸ್ಪುಟ್ನಿಕ್ ಲಸಿಕೆಯ ಭಾರತೀಯ ಭಾಗಿದಾರ ಡಾ. ರೆಡ್ಡಿಸ್ ಲ್ಯಾಬರೋಟರಿ ಒಟ್ಟು 6 ದೇಶಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅದರಲ್ಲಿ ರಾಯಚೂರು ಮೂಲದ ಶಿಲ್ಪಾ ಮೆಡಿಕೆರ್ ಕೂಡ ಒಂದಾಗಿದೆ. ಇದರ ಯೂನಿಟ್​​ ಧಾರವಾಡದಲ್ಲಿದೆ.

ಒಟ್ಟು ಐನೂರು ಸಿಬ್ಬಂದಿ ಕಾರ್ಯನಿರ್ವಹಿಸ್ತಾಯಿರೋ ಈ ಯೂನಿಟ್​ನಲ್ಲಿ, ಮೂರು ಶಿಫ್ಟ್‌ನಲ್ಲಿ ಸಮರೋಪಾದಿಯಲ್ಲಿ ವ್ಯಾಕ್ಸಿನ್ ತಯಾರಿ ನಡೆಯಲಿದೆ. ವರ್ಷಕ್ಕೆ 100 ರಿಂದ 200 ಮಿಲಿಯನ್ ಡೋಸ್ ತಯಾರಿ ಮಾಡಲು ಸಿದ್ಧತೆ ನಡೆಸಲಾಗ್ತಿದೆ.

ಈಗಾಗಲೇ ಎರಡು ಬ್ಯಾಚ್​​ ಸ್ಪುಟ್ನಿಕ್ ಲಸಿಕೆ ಭಾರತಕ್ಕೆ ಬಂದಿಳಿದಿದ್ದು, ಒಂದು ಡೋಸ್​ಗೆ 995 ರೂಪಾಯಿ ರೇಟ್ ಫಿಕ್ಸ್ ಮಾಡಲಾಗಿದೆ. ದೇಸಿ ಕಂಪನಿಗಳಲ್ಲಿ ಲಸಿಕೆ ತಯಾರಿಕೆಯಿಂದ ಮುಂದಿನ ದಿನಗಳಲ್ಲಿ ಕಡಿಮೆ ಬೆಲೆಗೆ ವ್ಯಾಕ್ಸಿನ್ ಸಿಗುವ ನಿರೀಕ್ಷೆ ಇದೆ.

The post ಧಾರವಾಡದಲ್ಲಿ ತಯಾರಾಗಲಿದೆ ರಷ್ಯಾದ ಸ್ಪುಟ್ನಿಕ್​-ವಿ ಲಸಿಕೆ appeared first on News First Kannada.

Source: newsfirstlive.com

Source link