ಧಾರವಾಡದಲ್ಲಿ 3 ಸಾವಿರ ಮಕ್ಕಳನ್ನ ಕಾಡಿದ ಕೊರೊನಾ; 3ನೇ ಅಲೆ ಎದುರಿಸಲು ಜಿಲ್ಲಾಡಳಿತ ರೆಡಿ

ಧಾರವಾಡದಲ್ಲಿ 3 ಸಾವಿರ ಮಕ್ಕಳನ್ನ ಕಾಡಿದ ಕೊರೊನಾ; 3ನೇ ಅಲೆ ಎದುರಿಸಲು ಜಿಲ್ಲಾಡಳಿತ ರೆಡಿ

ಹುಬ್ಬಳ್ಳಿ: ಕೊರೊನಾದ ಮೂರನೇ ಅಲೆ ಎದುರಿಸಲು ಧಾರವಾಡ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ. ಅದರಲ್ಲೂ ಮೂರನೇ ಅಲೆ ಮಕ್ಕಳ ಮೇಲೆ ಅಟ್ಯಾಕ್ ಮಾಡುತ್ತೆ ಅನ್ನೋ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ವಿಶೇಷವಾದ ವ್ಯವಸ್ಥೆಗಳನ್ನ ಮಾಡಿಕೊಳ್ಳಲಾಗುತ್ತಿದೆ.

ಇನ್ನು  ಮೊದಲ ಮತ್ತು ಎರಡನೇ ಅಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 3 ಸಾವಿರ ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದುವರೆಗೆ ಜಿಲ್ಲೆಯಲ್ಲಿ 1.03 ಲಕ್ಷ ಮಕ್ಕಳಿಗೆ ಆರ್​ಟಿಪಿಸಿಆರ್ ಟೆಸ್ಟ್​ ನಡೆಸಲಾಗಿದೆ. ಇದೀಗ..  3ನೆ ಅಲೆ ಮಕ್ಕಳನ್ನ ಟಾರ್ಗೆಟ್ ಮಾಡಬಹುದು ಅನ್ನೋ ಆತಂಕ ಶುರುವಾಗಿದೆ.

ಹೀಗಾಗಿ ಜಿಲ್ಲಾಡಳಿತ ಮಕ್ಕಳಿಗಾಗಿ ಸೂಕ್ತ ಬೆಡ್ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿಯ ಕಿಮ್ಸ್ ಸೇರಿದಂತೆ ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಲಾಗಿದೆ. 6 ವರ್ಷದ ಒಳಗಿನ 1,43,902ಮಕ್ಕಳು ಸೇರಿದಂತೆ, 6 ರಿಂದ16 ವರ್ಷದ 3,36,510 ಮಕ್ಕಳ ಸುರಕ್ಷತೆಗೆ ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತಿದೆ. ಹೀಗಾಗಿ ಒಟ್ಟು 300ಕ್ಕೂ ಹೆಚ್ಚು ಬೆಡ್​ಗಳನ್ನ ಜಿಲ್ಲಾಡಳಿತ ಮಕ್ಕಳಿಗಾಗಿ ಮೀಸಲಿಟ್ಟಿದೆ.

The post ಧಾರವಾಡದಲ್ಲಿ 3 ಸಾವಿರ ಮಕ್ಕಳನ್ನ ಕಾಡಿದ ಕೊರೊನಾ; 3ನೇ ಅಲೆ ಎದುರಿಸಲು ಜಿಲ್ಲಾಡಳಿತ ರೆಡಿ appeared first on News First Kannada.

Source: newsfirstlive.com

Source link