ಧಾರವಾಡ: ಇಲ್ಲಿನ ಸಿದ್ದೇಶ್ವರ ನಗರದ ಲಕಮನಹಳ್ಳಿ ಪ್ರದೇಶದಲ್ಲಿರುವ ಬಡಾವಣೆಯಲ್ಲಿನ 62 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸುಡುಗಾಡ ಸಿದ್ಧರ ಆದಿ ಜನಾಂಗ ವಾಸವಿರುವ ಪ್ರದೇಶ ಇದಾಗಿದೆ. 62 ಮಂದಿಯಲ್ಲಿ ಕೇವಲ 20 ಸೋಂಕಿತರು ಕೋವಿಡ್ ಕೇರ್ ಸೆಂಟರ್​ಗೆ ದಾಖಲಾಗಿದ್ದಾರೆ. ಇನ್ನುಳಿದವರು ಕೋವಿಡ್ ಸೆಂಟರ್​ಗೆ ಹೋಗಲು ಹಿಂದೇಟು ಹಾಕಿದ್ದಾರೆ.

ಈ ಬಡಾವಣೆ ಕೊರೊನಾ ಹಾಟ್​ಸ್ಪಾಟ್ ಕೇಂದ್ರವಾಗಿ ಬದಲಾಗುತ್ತಿದ್ದರೂ ಸ್ಥಳೀಯರು ಎಚ್ಚೆತ್ತುಕೊಂಡಿಲ್ಲ. ಮಾಸ್ಕ್ ಧರಿಸದೇ ಜನರು ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಅಲ್ಲದೇ ನಗರದ ಮಾರುಕಟ್ಟೆಗೆ ಎಂದಿನಂತೆ ಹೋಗುತ್ತಿದ್ದಾರೆ ಅನ್ನೋ ದೂರುಗಳು ಕೇಳಿಬಂದಿವೆ. ಇದರಿಂದಾಗಿ ಸುತ್ತಮುತ್ತ ಪ್ರದೇಶಗಳ ಜನರಲ್ಲಿ ಆತಂಕ ಹೆಚ್ಚಾಗಿದೆ.

The post ಧಾರವಾಡದ ಒಂದೇ ಬಡಾವಣೆಯಲ್ಲಿ 62 ಮಂದಿಗೆ ಸೋಂಕು; ಸ್ಥಳೀಯರಲ್ಲಿ ಆತಂಕ appeared first on News First Kannada.

Source: newsfirstlive.com

Source link