ಧಾರವಾಡ: ಭೂಸ್ವಾಧೀನ ಹಣ ನೀಡದ ಹಿನ್ನೆಲೆ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್ ಕಚೇರಿ ಜಪ್ತಿ | Dharwad Zilla Panchayat Raj Engineer’s office was confiscated


ಧಾರವಾಡದ 2ನೇ ಹೆಚ್ಚುವರಿ ಜಿಲ್ಲಾ ಕೋರ್ಟ್ ಆದೇಶನ್ವಯ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್​​ ಕಚೇರಿಯನ್ನು ಜಪ್ತಿ ಮಾಡಲಾಗಿದೆ.

ಧಾರವಾಡ: ಭೂಸ್ವಾಧೀನ ಹಣ ನೀಡದ ಹಿನ್ನೆಲೆ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್ ಕಚೇರಿ ಜಪ್ತಿ

ಧಾರವಾಡ ಜಿಲ್ಲಾ ಪಂಚಾಯತ್​

ಧಾರವಾಡ: ಧಾರವಾಡದ 2ನೇ ಹೆಚ್ಚುವರಿ ಜಿಲ್ಲಾ ಕೋರ್ಟ್ ಆದೇಶನ್ವಯ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್​​ ಕಚೇರಿಯನ್ನು ಜಪ್ತಿ ಮಾಡಲಾಗಿದೆ. ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ವಿರೂಪಾಕ್ಷಪ್ಪ ಎಂಬ ರೈತನ ಜಮೀನನ್ನು ಕುಡಿಯುವ ನೀರಿನ ಯೋಜನೆ ಸಲುವಾಗಿ ಸ್ವಾಧೀನ ಮಾಡಿಕೊಳ್ಳಲಾಗಿತ್ತು. 2012-13ರಲ್ಲಿ 6 ಎಕರೆ, 30 ಗುಂಟೆ ಜಮೀನನ್ನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಸರ್ಕಾರ 78 ಲಕ್ಷ ರೂ. ಪರಿಹಾರ ಮೊತ್ತ ನಿಗದಿ ಮಾಡಿತ್ತು.

ಆದರೆ ರೈತ ವಿರೂಪಾಕ್ಷಪ್ಪ ಹೆಚ್ಚುವರಿ ಪರಿಹಾರಕ್ಕಾಗಿ ಕೋರ್ಟ್​ ಮೊರೆ ಹೋಗಿದ್ದರು. ಆಗ ನ್ಯಾಯಾಲಯ 2.64 ಕೋಟಿ ಪರಿಹಾರ ನೀಡುವಂತೆ ​ ಆದೇಶಿಸಿತ್ತು. ಆದರೆ ಆದೇಶ ನೀಡಿ 1 ವರ್ಷವಾದರೂ ಪರಿಹಾರ ನೀಡದ ಹಿನ್ನೆಲೆ ಇಂಜಿನಿಯರ್​ ಕಚೇರಿ ಜಪ್ತಿ ಮಾಡಲು ಕೋರ್ಟ್​ ಆದೇಶ ನೀಡಿದೆ. ಕಚೇರಿಯ ಕಂಪ್ಯೂಟರ್, ಪ್ರಿಂಟರ್, ಪೀಠೋಪಕರಣ ಜಪ್ತಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ

TV9 Kannada


Leave a Reply

Your email address will not be published.