ಧಾರವಾಡ: ತಾಲ್ಲೂಕಿನ ಮಾರಡಗಿ ಗ್ರಾಮದ ಯುವ ಕಲಾವಿದ ಸಚಿನ್ ಬಳ್ಳಾರಿ ಅವರ ಚಿತ್ರಕಲೆಯನ್ನು ಮೆಚ್ಚಿ, ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿ ಪ್ರಶಂಸಾ ಪತ್ರ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿರುವ ಸಚಿವ ಜಗದೀಶ್ ಶೆಟ್ಟರ್.. ನಮ್ಮ ಧಾರವಾಡ ತಾಲ್ಲೂಕಿನ ಮಾರಡಗಿ ಗ್ರಾಮದ ಯುವ ಕಲಾವಿದ ಸಚಿನ ಬಳ್ಳಾರಿ ಅವರ ಚಿತ್ರಕಲೆಯನ್ನು ಮೆಚ್ಚಿ, ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿ, ಪ್ರಶಂಸಾ ಪತ್ರ ನೀಡಿದ್ದಾರೆ. ಇದು ಆತನ ಕಲಾಸಕ್ತಿಯನ್ನು ಹೆಚ್ಚಿಸಿ, ಇನ್ನೂ ಹೆಚ್ಚಿನ ಸಾಧನೆಗೆ ಸ್ಪೂರ್ತಿಯಾಗಲಿ ಎಂದು ಹಾರೈಸುತ್ತೇನೆ. ತಮ್ಮ ಒತ್ತಡದ ಕೆಲಸಗಳ ನಡುವೆಯೂ ಬಾಲ ಪ್ರತಿಭೆಗಳಿಗೆ ಬೆನ್ನು ತಟ್ಟಿ, ಪ್ರೋತ್ಸಾಹಿಸುತ್ತಿರುವ ಪ್ರಧಾನಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ.

ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ ಮನಸ್ಸು ಮಾಡಿದ್ದ ಸಚಿನ್, ಬಾಲ್ಯದಲ್ಲಿ ಗೋಡೆಗಳಲ್ಲಿ ಗೀಚುತ್ತಿದ್ದ. ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದರು, ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಗಣ್ಯರ ಭಾವಚಿತ್ರಗಳನ್ನ ಬಿಡಿಸಿ ಸೈ ಎನಿಸಿಕೊಂಡಿದ್ದಾನೆ.

The post ಧಾರವಾಡ ಯುವಕನ ಚಿತ್ರಕಲೆಗೆ ಪ್ರಧಾನಿ ಮೋದಿ ಫಿದಾ appeared first on News First Kannada.

Source: newsfirstlive.com

Source link