ಧಾರಾಕಾರ ಮಳೆಗೆ ಮನೆ ಮೇಲೆ ಗೋಡೆ ಕುಸಿದು ಅಣ್ಣ-ತಂಗಿ ಬಲಿ

ನೆಲಮಂಗಲ: ತಾಲೂಕಿನಾದ್ಯಂತ ತಡರಾತ್ರಿವರೆಗೂ ಧಾರಾಕಾರ ಸುರಿದ ಮಳೆಗೆ ಅಣ್ಣ-ತಂಗಿ ಬಲಿಯಾಗಿದ್ದಾರೆ.

ಬೆಂಗಳೂರು ಹೊರವಲಯದ ನೆಲಮಂಗಲ ನಗರದಲ್ಲಿ ರಾತ್ರಿ ಸುರಿದ ಮಳೆಗೆ ಬಿನ್ನಮಂಗಲದಲ್ಲಿ ಖಾಲಿ ನಿವೇಶನದ ಗೋಡೆ ಮನೆಯ ಮೇಲೆ ಕುಸಿದು ಇಬ್ಬರು ಮೃತಪಟ್ಟು, ಒಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ತುಮಕೂರು ಮೂಲದ ಕಾವ್ಯ(19) ಹಾಗೂ ವೇಣುಗೋಪಾಲ್ (22) ಎಂದು ಗುರುತಿಸಲಾಗಿದೆ. ಬಿನ್ನಮಂಗಲದ ಕೃಷ್ಣಪ್ಪ ಎಂಬ ವ್ಯಕ್ತಿಗೆ ಸೇರಿದ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡ್ ಗೋಡೆ, ಪಕ್ಕದಲ್ಲಿ ಇದ್ದ ಮನೆಯ ಮೇಲೆ ಕುಸಿದಿದೆ. ಅಲ್ಲದೆ ಮನೆಯಲ್ಲಿ ಮಲಗಿದ್ದ ಕಾವ್ಯ ಹಾಗೂ ವೇಣುಗೋಪಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗಂಭೀರ ಗಾಯಗೊಂಡ ಸಂಪ್ರಥ್ (22) ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ನೆಲಮಂಗಲ ಅಗ್ನಿಶಾಮಕ ದಳ ಸಿಬ್ಬಂದಿ ಮೃತ ದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ನೆಲಮಂಗಲ ಟೌನ್ ಇನ್ಸ್ ಪೆಕ್ಟರ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಮೀನು ಮಾಲೀಕನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

The post ಧಾರಾಕಾರ ಮಳೆಗೆ ಮನೆ ಮೇಲೆ ಗೋಡೆ ಕುಸಿದು ಅಣ್ಣ-ತಂಗಿ ಬಲಿ appeared first on Public TV.

Source: publictv.in

Source link