ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ಕಲ್ಯಾಣ ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರೈ ಸೀಮಂತ ಫೋಟೋವನ್ನು ಇನ್‍ಸ್ಟಾಗ್ರಾಮನ್‍ನಲ್ಲಿ ಶೇರ್ ಮಾಡಿದ್ದಾರೆ.

ನಟಿ ಚೈತ್ರಾ ರೈ ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಚೈತ್ರಾ ರೈ ಹಾಗೂ ಪ್ರಸನ್ನ ಶೆಟ್ಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಟಿಗೆ ಇತ್ತೀಚೆಗಷ್ಟೆ ಸೀಮಂತ ಮಾಡಲಾಗಿದೆ. ಕೋವಿಡ್‍ನಿಂದಾಗಿ ಚೈತ್ರಾ ರೈ ಅವರ ಸೀಮಂತಕ್ಕೆ ಕೆಲವೇ ಕೆಲವು ಆಪ್ತರನ್ನು ಆಹ್ವಾನಿಸಲಾಗಿತ್ತಂತೆ. ಕಡಿಮೆ ಜನರಿದ್ದರೂ ಅವರ ಸಂಪ್ರದಾಯದ ಪ್ರಕಾರವೇ ಸೀಮಂತ ಮಾಡಲಾಗಿದೆಯಂತೆ.  ಇದನ್ನೂ ಓದಿ:  1.31 ಲಕ್ಷ ಬೆಲೆ ವೈನ್- ಪ್ರಿಯಾಂಕಾಗೆ ಪತಿಯಿಂದ ವಿಶೇಷ ಗಿಫ್ಟ್

 

View this post on Instagram

 

A post shared by Chaithra Rai (@chaithrarai17)

ಕುಟುಂಬ ಮೊದಲು ವೃತ್ತಿ ಬದುಕಿನ ಬಗ್ಗೆ ಚಿಂತಿಸುವುದಕ್ಕೆ ಬಹಳ ಸಮಯ ಇರುತ್ತದೆ. ನಾನು ಹಾಗೂ ಪ್ರಸನ್ನ ಶೆಟ್ಟಿ ಈ ವಿಷಯ ಹೇಳಲು ತುಂಬ ಖುಷಿಪಡುತ್ತೇವೆ. ನಮ್ಮ ಈ ಹೊಸ ಅಧ್ಯಾಯಕ್ಕೆ ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ, ಪ್ರೀತಿ ಇರಲಿ. ನನ್ನ ಜೀವನದ ಸುಂದರವಾದ ಹಂತವನ್ನು ಅನುಭವಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಈ ಹಿಂದೆ ಚೈತ್ರಾ ರೈ ತಮ್ಮ ಪ್ರೆಗ್ನೆನ್ಸಿಯ ವಿಷಯವನ್ನು ಬಹಿರಂಗ ಮಾಡಿದ್ದರು. ಇದೀಗ ಸೀಮಂತದ ಫೋಟೋವನ್ನು ಅಭಿಮಾನಿಗಳೋಂದಿಗೆ ಹಂಚಿಕೊಂಡು ಸಂತೋಷವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Chaithra Rai (@chaithrarai17)

ಚೈತ್ರಾ ಅವರು ಪ್ರಸನ್ನ ಶೆಟ್ಟಿ ಜೊತೆ ಮದುವೆಯಾಗಿದ್ದಾರೆ. ಪ್ರಸನ್ನ ಕತಾರ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಬ್ಬರದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಮಂಗಳೂರಿನಲ್ಲಿಯೇ ಈ ಜೋಡಿ ಮದುವೆ ನಡೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು ಸಾಕಷ್ಟು ಫೋಟೋ, ಇನ್‍ಸ್ಟಾಗ್ರಾಮ್ ರೀಲ್ಸ್ ಮಾಡಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಾಯಿ ಆಗುತ್ತಿರುವುನ್ನು ಹಂಚಿಕೊಂಡಿದ್ಧಾರೆ. ಚೈತ್ರಾ ರೈ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಶುಭಾಶಯ ತಿಳಿಸಿದ್ದಾರೆ. ನಟಿ ಚೈತ್ರಾ ರೈ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನದಲ್ಲಿ ಇಂದಿಗೂ ಹಸಿರಾಗಿ ಉಳಿದಿದ್ದಾರೆ.

 

View this post on Instagram

 

A post shared by Chaithra Rai (@chaithrarai17)

The post ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರೈ ಸೀಮಂತ appeared first on Public TV.

Source: publictv.in

Source link