ಪುನೀತ್​ ರಾಜ್​ಕುಮಾರ್​ಗೆ ಲೂಸಿಯಾ ಪವನ್ ಆ್ಯಕ್ಷನ್ ಕಟ್ ಹೇಳ್ತಾರೆ ಅಂದಾಗಲೇ ದೊಡ್ಡ ಹಲ್​ ಚಲ್ ಶುರುವಾಗಿತ್ತು.. ವಿಭಿನ್ನಾತಿವಿಭಿನ್ನ ಚಿತ್ರಗಳನ್ನ ನಿರ್ದೇಶಿಸುತ್ತಾ ಬಂದಿರೋ ಲೂಸಿಯಾ ಪವನ್​​, ಯೂ ಟರ್ನ್ ಚಿತ್ರದ ಬಳಿಕ ಯಾವ ಫಿಲ್ಮ್ ಮಾಡ್ತಾರೆ ಅನ್ನೋ ಕುತೂಹಲವಿತ್ತು.

ಈ ನಡುವೆ ಹೊಂಬಾಳೆ ಫಿಲ್ಮ್ಸ್​​ನವರು ನಿರ್ಮಾಣ ಮಾಡಲಿರೋ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​ಗೆ ಪವನ್ ನಿರ್ದೇಶನ ಮಾಡಲಿದ್ದಾರೆ ಅನ್ನೋ ಸುದ್ದಿ ಬಂದ ಬಳಿಕವಂತೂ ಇಡೀ ಗಾಂಧಿನಗರ ಒಮ್ಮೆ ಮಗ್ಗಲು ಬದಲಿಸಿ ಕುಳಿತಿತ್ತು. ಸಾಮಾನ್ಯವಾಗಿ ಪ್ರಯೋಗಾತ್ಮಕ ಚಿತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳದ ಪುನೀತ್​​​ರನ್ನು ಪವನ್ ಹೇಗೆ ತೋರಿಸಲಿದ್ದಾರೆ? ಅನ್ನೋ ಪ್ರಶ್ನೆ ಪವರ್​ ಸ್ಟಾರ್ ಅಭಿಮಾನಿಗಳಿಗೆ ಮೂಡಿತ್ತು..

ಇದೆಲ್ಲಕ್ಕೂ ಉತ್ತರ ಅನ್ನೋ ಹಾಗೆ ದ್ವಿತ್ವ ಅನ್ನೋ ವಿಭಿನ್ನ ಹೆಸರಿನ ಜೊತೆಗೆ ಪುನೀತ್​ ಪಾತ್ರದ ವಿಭಿನ್ನ ಪರ್ಸನಾಲಿಟಿ ತೋರಿಸುವಂತಿರೋ ಪೋಸ್ಟರ್​ ಅನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ದ್ವಿತ್ವ ಅಂದ್ರೆ ಸಾಮಾನ್ಯವಾಗಿ ಎರಡು.. ಅಂತ ಅರ್ಥೈಸಬಹುದು.. ಅಂದ್ರೆ ಇದ್ರಲ್ಲಿ ಪುನೀತ್​ ಡುವಲ್​​ ಪರ್ಸನಾಲಿಟಿ ಇರೋವಂಥ ಕ್ಯಾರೆಕ್ಟರ್​​ನಲ್ಲಿ ನಟಿಸ್ತಿದ್ದಾರಾ? ಅಥವಾ ಅವರ ಪಾತ್ರದ ವಿಭಿನ್ನ ಮುಖವನ್ನ ತೋರಿಸಲಾಗುತ್ತಾ? ಅನ್ನೋ ಹಲವು ಪ್ರಶ್ನೆಗಳ ಜೊತೆಗೆ ಈ ಪೋಸ್ಟರ್ ಕುತೂಹಲವನ್ನೂ ಹುಟ್ಟುಹಾಕಿದೆ..!

The post ಧೂಳೆಬ್ಬಿಸಿದ ಪೋಸ್ಟರ್; ಲೂಸಿಯಾ ಪವನ್ ಕಲ್ಪನೆಯಲ್ಲಿ ದ್ವಿತ್ವ ಅವತಾರ ಎತ್ತಿದ ಪುನೀತ್ ರಾಜ್​ಕುಮಾರ್ appeared first on News First Kannada.

Source: newsfirstlive.com

Source link