ಮಹೇಂದ್ರ ಸಿಂಗ್​ ಧೋನಿ..! ಟೀಮ್​ ಇಂಡಿಯಾ ಕಂಡ ಮೋಸ್ಟ್​​ ಸಕ್ಸಸ್​ಫುಲ್​ ಕ್ರಿಕೆಟರ್​​. 3 ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ಗ್ರೇಟ್​ ಕ್ಯಾಪ್ಟನ್​..! ಯಂಗ್​ಸ್ಟರ್​ಗಳ ಪಾಲಿನ ಗುರು..! ಈಗ ಇಷ್ಟೇಲ್ಲಾ ಆಗಿರುವ ಧೋನಿ ಟೀಮ್​ ಇಂಡಿಯಾ ಸೇರಿದ್ದೇ ರೋಚಕ. ಇನ್​ಫ್ಯಾಕ್ಟ್​ ಅಂದು ಸೆಲೆಕ್ಟರ್​ ಸ್ಟಾನದಲ್ಲಿ ಕಿರಣ್​ ಮೋರೆ ಇಲ್ಲದೇ ಇದ್ದಿದ್ರೆ, ಧೋನಿ ಕರಿಯರ್​ ಜಾರ್ಖಂಡ್​​​ ರಾಜ್ಯ ಕ್ರಿಕೆಟ್​ಗೆ ಸೀಮಿತವಾಗಿಬಿಡುತ್ತಿತ್ತೋ ಏನೋ..?

ಟೀಮ್​ ಇಂಡಿಯಾಗೆ ಧೋನಿ ಎಂಟ್ರಿಯೇ ರೋಚಕ..!
ಮಾಹಿ ಆಯ್ಕೆ​ ಗುಟ್ಟು ಬಿಚ್ಚಿಟ್ಟ ಮಾಜಿ ಸೆಲೆಕ್ಟೆರ್​​​..!
ಅದು 2003-04ರ ದುಲೀಪ್​ ಟ್ರೋಫಿ. ದೇಶಿ ಟೂರ್ನಿಯಲ್ಲಿ ಸಾಲಿಡ್​ ಫರ್ಪಾಮೆನ್ಸ್​ ನೀಡಿದ್ದ ಧೋನಿ ಮೇಲೆ ಸೆಲೆಕ್ಷನ್​ ಕಮಿಟಿಯ ಗಮನವಿತ್ತು. ಅದಕ್ಕೆ ಕಾರಣವೂ ಸ್ಪಷ್ಟವಿತ್ತು. ಪಾರ್ಟ್​​ ಟೈಮ್​ ಕೀಪರ್​ ಆಗಿಯೇ 75 ಏಕದಿನ ಪಂದ್ಯಗಳಲ್ಲಿ ಜವಾಬ್ಧಾರಿ ನಿರ್ವಹಿಸಿದ್ದ ರಾಹುಲ್ ದ್ರಾವಿಡ್​​, 2003ರ ವಿಶ್ವಕಪ್​ ಬಳಿಕ್​ ಗ್ಲೌಸ್​ ಬಿಚ್ಚಿಡಲು ನಿರ್ಧರಿಸಿದ್ರು. ಅತ್ತ ಪಾರ್ಥಿವ್​ ಪಟೇಲ್​, ದಿನೇಶ್​ ಕಾರ್ತಿಕ್​ ಇಂಪ್ರೆಸಿಂಗ್​ ಫರ್ಪಾಮೆನ್ಸ್​ ನೀಡುವಲ್ಲಿ ಎಡವಿದ್ರು. ತಂಡಕ್ಕೆ ಪ್ರತಿಭಾವಂತ ಖಾಯಂ ವಿಕೆಟ್​​ ಕೀಪರ್​ ಹುಡುಕಾಟ ಆರಂಭವಾಗಿದ್ದು ಹೀಗೆ..!

ವಿಕೆಟ್​​ ಕೀಪರ್​​ ಆಯ್ಕೆಯ ಜವಾಬ್ಧಾರಿ ಹೊತ್ತ ಅಂದಿನ ಸೆಲೆಕ್ಷನ್​ ಕಮಿಟಿ ನೇರವಾಗಿ ಕಣ್ಣಿಟ್ಟಿದ್ದು ಧುಲೀಪ್​ ಟ್ರೋಫಿಯ ಮೇಲೆ. 2003-04ರ ದೇಶಿ ಟೂರ್ನಿಯಿಂದಲೇ ಆರಂಭವಾಗಿದ್ದು ಧೋನಿಯನ್ನ ರಾಷ್ಟ್ರೀಯ ತಂಡಕ್ಕೆ ಕರೆಸುವ ಕಸರತ್ತು. ಧೋನಿಯ ಚಾಣಕ್ಷತೆಯನ್ನ ಪರೀಕ್ಷಿಸಬೇಕಿದ್ದ ಸೆಲೆಕ್ಷನ್​ ಕಮಿಟಿ ಫೈನಲ್​ ಪಂದ್ಯದಲ್ಲಿ ಈಸ್ಟ್​ ಜೋನ್​ ಪರ ವಿಕೆಟ್​ ಕೀಪಿಂಗ್ ಮಾಡಬೇಕೆಂಬ ಮಹದಾಸೆ ಹೊಂದಿತ್ತು. ಹಾಗಾಗಬೇಕೆಂದರೇ ಅದಕ್ಕೆ ಅಂದಿನ ನಾಯಕ ಸೌರವ್​ಗಂಗೂಲಿಯ ಒಪ್ಪಿಗೆ ಬೇಕಿತ್ತು…! ಯಾಂಕದ್ರೆ, ಅಂದು ಈಸ್ಟ್​ ಜೋನ್​ ವಿಕೆಟ್​ ಕೀಪರ್​ ಆಗಿದಿದ್ದು ಬಂಗಾಳದ ದೀಪ್​ದಾಸ್​ ಗುಪ್ತಾ..!

ಗಂಗೂಲಿ ಮನವೊಲಿಕೆಗೆ ಹಿಡಿದಿತ್ತು ಬರೋಬ್ಬರಿ10 ದಿನ..!
ಯೆಸ್​​..! ಅಂದು ದೀಪ್​ ದಾಸ್​ ಗುಪ್ತಾ ಬದಲಾಗಿ ಧೋನಿ ವಿಕೆಟ್​​ ಕೀಪಿಂಗ್​ ಹೊಣೆ ನಿಭಾಯಿಸಬೇಕಂದ್ರೆ, ಗಂಗೂಲಿಯ ಒಪ್ಪಿಗೆ ಬೇಕಿತ್ತು. ಬಂಗಾಳದ ದೀಪ್​ದಾಸ್​ ಗುಪ್ತ ಪರ ಒಲವಿದ್ದ ಗಂಗೂಲಿ ಆರಂಭದಲ್ಲಿ ಈ ಪ್ರಸ್ತಾವವನ್ನ ಒಪ್ಪಿಯೇ ಇರಲಿಲ್ಲ. ಇದಕ್ಕಾಗಿ ಅಂದು ಕಿರಣ್​ ಮೋರೆ ಸೌರವ್​ ಗಂಗೂಲಿ ಮನವೊಲಿಸಿದ್ದು ಸತತ 10 ದಿನ. 10 ದಿನಗಳ ಬಳಿಕ ಗಂಗೂಲಿ ಒಪ್ಪಿಗೆ ನೀಡಿದ ಬಳಿಕವಷ್ಟೇ ಧೋನಿ ಆಡಿದ್ದು.

‘10 ದಿನಗಳು ಬೇಕಾದವು’
‘ನಾನು ಮೊದಲ ಬಾರಿ ಧೋನಿಯನ್ನ ನೋಡಿದಾಗ ತಂಡದ ಒಟ್ಟು 170 ರನ್​ಗಳಲ್ಲಿ 130 ರನ್​ಗಳನ್ನ ಆತನೇ ಬಾರಿಸಿದ್ದ. ಆತ ಎಲ್ಲ ಬೌಲರ್​ಗಳ ಮೇಲೆ ಸವಾರಿ ಮಾಡಿದ್ದ. ಹೀಗಾಗಿ ಆತನೇ ಧುಲೀಪ್​ ಟ್ರೋಫಿಯ ಫೈನಲ್​​ನಲ್ಲಿ ಈಸ್ಟ್​ ಜೋನ್​ ಕೀಪರ್​ ಆಗಲಿ ಅನ್ನೋದು ನಮ್ಮ ಆಸೆಯಾಗಿತ್ತು. ಆ ಬಳಿಕ ಆ ತಂಡದ ಖಾಯಂ ವಿಕೆಟ್​ ಕೀಪರ್​ ಬದಲಾಯಿಸಲು ನಾವು ಬರೋಬ್ಬರಿ 10 ದಿನಗಳ ಕಾಲ ಗಂಗೂಲಿಯನ್ನ ಮನವೊಲಿಸಬೇಕಾಯ್ತು’
ಕಿರಣ್​ ಮೋರೆ, ಮಾಜಿ ಸೆಲೆಕ್ಟೆರ್​​

ಅಂದು ದೀಪ್​ದಾಸ್​ ಗುಪ್ತ ಬದಲಾಗಿ ಕಣಕ್ಕಿಳಿದು ಪ್ರಾಮಿಸಿಂಗ್​ ಫರ್ಪಾಮೆನ್ಸ್​ ನೀಡಿದ ಧೋನಿಯ ಸ್ಟಾರ್​ ಚೈಂಜ್​ ಆಯ್ತು. ಇಂಡಿಯಾ ಎ ತಂಡದ ಕೀನ್ಯಾ ಪ್ರವಾಸಕ್ಕೆ ಟಿಕೇಟ್​ ಸಿಗ್ತು. ಪ್ರವಾಸದಲ್ಲಿ ಜಬರ್​​ದಸ್ತ್​​​ ಪ್ರದರ್ಶನ ನೀಡಿದ ಮಾಹಿ 2 ಶತಕ ಸಹಿತ 362 ರನ್​ ಕಲೆ ಹಾಕಿದ್ರು. ಈ ಪ್ರದರ್ಶನದ ಬಳಿಕ ಟೀಮ್​ ಇಂಡಿಯಾ ಬಾಗಿಲು ಮಾಹಿ ಪಾಲಿಗೆ ತೆರೆಯಿತು. ಆ ಬಳಿಕ ಆಗಿದ್ದೇಲ್ಲವೂ ಈಗ ಇತಿಹಾಸ..!

ಅಂದು ಕಿರಣ್​ ಮೋರೆಯ ಸತತ ಪ್ರಯತ್ನದಿಂದ ದೇಶಿ ಕ್ರಿಕೆಟ್​​ಗೆ ಸ್ಥಾನ ಪಡೆದ ಧೋನಿ ಇದೀಗ ಎಷ್ಟೋ ಯುವ ಆಟಗಾರರ ಪಾಲಿನ ಗುರು. ವಿಶ್ವ ಕ್ರಿಕೆಟ್​​ನಲ್ಲಿ ಧೋನಿಗೆ ವಿಶೇಷ ಸ್ಥಾನ. ಭಾರತೀಯ ಕ್ರಿಕೆಟ್​​ನಲ್ಲಂತೂ ಧೋನಿಯದ್ದೂ ವಿಶೇಷ ಅಧ್ಯಾಯವೇ ಸರಿ. ನಾಯಕನಾಗಿ, ಬ್ಯಾಟ್ಸ್​ಮನ್​ ಆಗಿ, ಫಿನಿಷರ್​​ ಆಗಿ ಧೋನಿ ಟೀಮ್​ ಇಂಡಿಯಾಗೆ ನೀಡಿದ ಕೊಡುಗೆ ಅಷ್ಟಿದೆ.

The post ಧೋನಿಯನ್ನ ತಂಡಕ್ಕೆ ಆಯ್ಕೆ ಮಾಡಲು ಗಂಗೂಲಿಗೆ 10 ದಿನ ಬೇಕಾಯ್ತು- ಕಿರಣ್ ಮೊರೆ appeared first on News First Kannada.

Source: newsfirstlive.com

Source link