ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ತಮ್ಮ ಆಟದಿಂದ ಸುದ್ದಿ ಮಾಡದಂತೆ ತಮ್ಮ ಇತರೆ ಹವ್ಯಾಸದಿಂದಲೇ ಸದ್ದು ಮಾಡುತ್ತಾರೆ. ಅದರಲ್ಲೂ ಕಾರ್ ಮತ್ತು ಬೈಕ್ ಕಲೆಕ್ಷನ್ ವಿಚಾರದಲ್ಲಿ ಹೆಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಧೋನಿ ಹೊಸ ಕಾರನ್ನ ತಮ್ಮ ಕಲೆಕ್ಷನ್ಗೆ ಸೇರಿಸಿಕೊಂಡಿದ್ದಾರೆ.
ಕಳೆದ ತಿಂಗಳು ನಡೆದ ಬಿಗ್ ಬಾಯ್ ಟಾಯ್ಜ್ ಹರಾಜಿನಲ್ಲಿ ಭಾಗಿಯಾಗಿದ್ದ ಧೋನಿ, ಲ್ಯಾಂಡ್ ರೋವರ್ ವಿಂಟೇಜ್ ಕಾರನ್ನು ಖರೀದಿಸಿದ್ದಾರೆ. ಗುರುಗ್ರಾಮದ ಬಿಗ್ ಬಾಯ್ ಟಾಯ್ಜ್ ಹರಾಜಿನಲ್ಲಿ ವಿಂಟೇಜ್ ಕಾರುಗಳ ಮಾಡೆಲ್ಗಳನ್ನ ಬಿಡ್ಡಿಂಗ್ಗೆ ಇಡಲಾಗಿತ್ತು. ಅಲ್ಲಿದ್ದ ವಿಂಟೇಜ್ ಲ್ಯಾಂಡ್ ರೋವರ್ 3 ಮೇಲೆ ಧೋನಿ ಆಸಕ್ತಿ ತೋರಿ, ಕೊನೆಗೆ ಬಿಡ್ನಲ್ಲಿ ಗೆದ್ದಿದ್ದಾರೆ.
ತಮ್ಮ ವೈಯಕ್ತಿಕ ಕಲೆಕ್ಷನ್ನಲ್ಲಿ ಧೋನಿ ಸಾಕಷ್ಟು ಕಾರುಗಳು ಮತ್ತು ಬೈಕ್ಗಳನ್ನ ಹೊಂದಿದ್ದಾರೆ. ಆಡಿ ಕ್ಯೂ7, ಮರ್ಸಿಡಿಸ್-ಬೆಂಜ್ JLE ಮತ್ತು ಜೀಪ್ ಗ್ರ್ಯಾಂಡ್ ಚೆರೋಕಿ ಸೇರಿದಂತೆ ಹಲವು ಸೂಪರ್ ಕಾರುಗಳನ್ನು ಹೊಂದಿದ್ದಾರೆ. ಇನ್ನು ಧೋನಿ ಬಳಿ, ಯಮಹಾ RD350, ಕಾನ್ಫೆಡರೇಟ್ ಹೆಲ್ಕ್ಯಾಟ್ X32, BSA ಗೋಲ್ಡ್ಸ್ಟಾರ್, ಹಾರ್ಲೆ-ಡೇವಿಡ್ಸನ್ ಫ್ಯಾಟ್ಬಾಯ್, ಕಾವಾಸಾಕಿ ನಿಂಜಾ ಸೇರಿದಂತೆ ಹಲ ಬೈಕ್ಗಳು ಸಹ ಇವೆ.