ಮುಂಬಯಿ: ಬಿಗ್‌ ಚೇಸಿಂಗ್‌ಗೆ ಹೆಸರು ವಾಸಿಯಾದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು 45 ರನ್ನುಗಳಿಂದ ಮಣಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ಎರಡನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದಿದೆ.

ಸೋಮವಾರದ ಐಪಿಎಲ್‌ ಮುಖಾಮುಖೀಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ 9 ವಿಕೆಟಿಗೆ 188 ರನ್‌ ಪೇರಿಸಿದರೆ, ಸ್ಯಾಮ್ಸನ್‌ ಪಡೆ 9 ವಿಕೆಟಿಗೆ 143 ರನ್‌ ಗಳಿಸಲಷ್ಟೇ ಶಕ್ತವಾಯಿತು. ಒಂದೂ ಅರ್ಧ ಶತಕ ಕಂಡುಬರದಿದ್ದುದು ಈ ಪಂದ್ಯದ ವಿಶೇಷ.

ರಾಜಸ್ಥಾನ್‌ ಪರ ಆರಂಭಕಾರ ಜಾಸ್‌ ಬಟ್ಲರ್‌ ಸರ್ವಾಧಿಕ 49 ರನ್‌ ಬಾರಿಸಿದರು (35 ಎಸೆತ, 5 ಫೋರ್‌, 2 ಸಿಕ್ಸರ್‌). ಇವರನ್ನು ಹೊರತುಪಡಿಸಿದರೆ 24 ರನ್‌ ಮಾಡಿದ ಜೈದೇವ್‌ ಉನಾದ್ಕತ್‌ ಅವರದೇ ಹೆಚ್ಚಿನ ಗಳಿಕೆ. ಬಿಗ್‌ ಹಿಟ್ಟರ್‌ಗಳಾದ ಸ್ಯಾಮ್ಸನ್‌, ಮಿಲ್ಲರ್‌, ಪರಾಗ್‌, ಮಾರಿಸ್‌ ಅವರ ವೈಫಲ್ಯ ರಾಜಸ್ಥಾನ್‌ಗೆ ಮುಳುವಾಯಿತು. ರಾಹುಲ್‌ ತೇವಟಿಯಾ ಕೂಡ ಯಶಸ್ಸು ಕಾಣಲಿಲ್ಲ.

ಚೆನ್ನೈ ಪರ ಆಲ್‌ರೌಂಡ್‌ ಪ್ರದರ್ಶನ ನೀಡಿದ ಮೊಯಿನ್‌ ಅಲಿ ಕೇವಲ 7 ರನ್ನಿತ್ತು 3 ವಿಕೆಟ್‌ ಉಡಾಯಿಸಿದರು.

Mumbai: Jos Buttler of Rajasthan Royals bats during match 12 of the Indian Premier League 2021 between the Chennai Super Kings and the Rajasthan Royals, at the Wankhede Stadium in Mumbai, Monday, April 19, 2021. (PTI Photo/ Sportzpics for IPL)(PTI04_19_2021_000281A)

ಚೆನ್ನೈ ಸವಾಲಿನ ಮೊತ್ತ
33 ರನ್‌ ಮಾಡಿದ ಡು ಪ್ಲೆಸಿಸ್‌ ಅವರದೇ ಚೆನ್ನೈ ಸರದಿಯ ಗರಿಷ್ಠ ವೈಯಕ್ತಿಕ ಮೊತ್ತ. ರಾಯುಡು 27, ಅಲಿ 26 ರನ್‌ ಹೊಡೆದರು. ಅಂತಿಮ 3 ಓವರ್‌ಗಳಲ್ಲಿ ಚೆನ್ನೈ ಮೊತ್ತದಲ್ಲಿ ದಿಢೀರ್‌ ಏರಿಕೆ ಕಂಡುಬಂತು.

ಋತುರಾಜ್‌ ಗಾಯಕ್ವಾಡ್‌ ಪಂದ್ಯದ ಮೊದಲ ಎಸೆತವನ್ನೇ ಬೌಂಡರಿಗೆ ರವಾನಿಸಿ ಚೆನ್ನೈಗೆ ಶುಭಾರಂಭ ಒದಗಿಸಿದರು. ಆದರೆ ಪವರ್‌ ಪ್ಲೇ ಅವಧಿಯೊಳಗೆ ಆರಂಭಿಕರಿಬ್ಬರ ಆಟವೂ ಮುಗಿಯಿತು. 10 ರನ್‌ ಮಾಡಿದ ಗಾಯಕ್ವಾಡ್‌ ಅವರನ್ನು ಔಟ್‌ ಮಾಡುವ ಮೂಲಕ ಮುಸ್ತಫಿಜುರ್‌ ರಾಜಸ್ಥಾನ್‌ಗೆ ಮೊದಲ ಯಶಸ್ಸು ತಂದಿತ್ತರು.

ಮತ್ತೋರ್ವ ಓಪನರ್‌ ಫಾ ಡು ಪ್ಲೆಸಿಸ್‌ ಸಿಡಿದು ನಿಲ್ಲುವ ಸೂಚನೆ ನೀಡಿದರು. ಉನಾದ್ಕತ್‌ ಮೇಲೆರಗಿ ಹೋಗಿ ಬೌಂಡರಿ, ಸಿಕ್ಸರ್‌ ಸುರಿಮಳೆಗೈದರು. ಆದರೆ 6ನೇ ಓವರ್‌ನ “ಸೌತ್‌ ಆಫ್ರಿಕನ್‌ ಬ್ಯಾಟಲ್‌’ನಲ್ಲಿ ಕ್ರಿಸ್‌ ಮಾರಿಸ್‌ ಗೆದ್ದು ಬಂದರು. 17 ಎಸೆತಗಳಿಂದ 33 ರನ್‌ (4 ಬೌಂಡರಿ, 2 ಸಿಕ್ಸರ್‌) ಬಾರಿಸಿದ ಡು ಪ್ಲೆಸಿಸ್‌ ಅವರನ್ನು ಪೆವಿಲಿಯನ್ನಿಗೆ ಕಳುಹಿಸಿದರು. ಪವರ್‌ ಪ್ಲೇ ಅಂತ್ಯಕ್ಕೆ ಚೆನ್ನೈ 2 ವಿಕೆಟಿಗೆ 46 ರನ್‌ ಗಳಿಸಿತು.

ಮುಂದಿನದು ಮೊಯಿನ್‌ ಅಲಿ ಅವರ ಅಬ್ಬರದ ಆಟ. ಸುರೇಶ್‌ ರೈನಾ ಜತೆಯಲ್ಲಿದ್ದರೂ ಹೆಚ್ಚಿನ ಸ್ಟ್ರೈಕ್‌ ಪಡೆದುಕೊಳ್ಳುತ್ತ ಹೋದ ಅಲಿ ಚೆನ್ನೈಗೆ ಹೊಸ ಭರವಸೆ ಮೂಡಿಸಿದರು; 20 ಎಸೆತಗಳಿಂದ 26 ರನ್‌ ಬಾರಿಸಿದರು (1 ಬೌಂಡರಿ, 2 ಸಿಕ್ಸರ್‌). ರಾಹುಲ್‌ ತೇವಟಿಯಾ ಮೊದಲ ಓವರ್‌ನಲ್ಲೇ ಈ ಬಿಗ್‌ ವಿಕೆಟ್‌ ಹಾರಿಸಿದರು. ಅಲಿ ಸಾಹಸದಿಂದ ಚೆನ್ನೈ ಮೊದಲ 10 ಓವರ್‌ಗಳಲ್ಲಿ 3 ವಿಕೆಟಿಗೆ 82 ರನ್‌ ಪೇರಿಸುವಲ್ಲಿ ಯಶಸ್ವಿಯಾಯಿತು.

ಅಂತಿಮ 3 ಓವರ್‌ನಲ್ಲಿ 44 ರನ್‌
ಆದರೆ 14ನೇ ಓವರ್‌ನಲ್ಲಿ ಚೇತನ್‌ ಸಕಾರಿಯಾ ಅವಳಿ ಆಘಾತ ನೀಡುವುದರೊಂದಿಗೆ ರಾಜಸ್ಥಾನ್‌ ಮೇಲುಗೈ ಸಾಧಿಸಿತು. ಅಂಬಾಟಿ ರಾಯುಡು (27) ಮತ್ತು ಸುರೇಶ್‌ ರೈನಾ (18) ವಿಕೆಟ್‌ ಪತನ ಚೆನ್ನೈಗೆ ಹಿನ್ನಡೆಯಾಗಿ ಪರಿಣಮಿಸಿತು. 15 ಓವರ್‌ ಅಂತ್ಯಕ್ಕೆ ಧೋನಿ ಪಡೆ 5 ವಿಕೆಟ್‌ ನಷ್ಟಕ್ಕೆ 127 ರನ್‌ ಮಾಡಿತ್ತು.

ಡೆತ್‌ ಓವರ್‌ಗಳಲ್ಲಿ ಒಟ್ಟುಗೂಡಿದ ನಾಯಕ ಧೋನಿ ಮತ್ತು ರವೀಂದ್ರ ಜಡೇಜ ಸಿಡಿಯಲು ವಿಫ‌ಲರಾದರು.

ಸ್ಕೋರ್‌ ಪಟ್ಟಿ
ಚೆನ್ನೈ ಸೂಪರ್‌ಕಿಂಗ್ಸ್‌
ಗಾಯಕ್ವಾಡ್‌ ಸಿ ದುಬೆ ಬಿ ಮುಸ್ತಫಿಜುರ್‌ 10
ಫಾ ಡು ಪ್ಲೆಸಿಸ್‌ ಸಿ ಪರಾಗ್‌ ಬಿ ಮಾರಿಸ್‌ 33
ಮೊಯಿನ್‌ ಅಲಿ ಸಿ ಪರಾಗ್‌ ಬಿ ತೇವಟಿಯಾ 26
ಸುರೇಶ್‌ ರೈನಾ ಸಿ ಮಾರಿಸ್‌ ಬಿ ಸಕಾರಿಯಾ 18
ರಾಯುಡು ಸಿ ಪರಾಗ್‌ ಬಿ ಸಕಾರಿಯಾ 27
ರವೀಂದ್ರ ಜಡೇಜ ಸಿ ಸಂಜು ಬಿ ಮಾರಿಸ್‌ 8
ಎಂ. ಎಸ್‌. ಧೋನಿ ಸಿ ಬಟ್ಲರ್‌ ಬಿ ಸಕಾರಿಯಾ 18
ಸ್ಯಾಮ್‌ ಕರನ್‌ ರನೌಟ್‌ 13
ಡ್ವೇನ್‌ ಬ್ರಾವೊ ಔಟಾಗದೆ 20
ಶಾದೂìಲ್‌ ಠಾಕೂರ್‌ ರನೌಟ್‌ 1
ದೀಪಕ್‌ ಚಹರ್‌ ಔಟಾಗದೆ 0
ಇತರ 14
ಒಟ್ಟು (9 ವಿಕೆಟಿಗೆ) 188
ವಿಕೆಟ್‌ ಪತನ: 1-25, 2-45, 3-78, 4-123, 5-125, 6-147, 7-163, 8-174, 9-180.
ಬೌಲಿಂಗ್‌;
ಜೈದೇವ್‌ ಉನಾದ್ಕತ್‌ 4-0-40-0
ಚೇತನ್‌ ಸಕಾರಿಯಾ 4-0-36-3
ಮುಸ್ತಫಿಜುರ್‌ ರೆಹಮಾನ್‌ 4-0-37-1
ಕ್ರಿಸ್‌ ಮಾರಿಸ್‌ 4-0-33-2
ರಾಹುಲ್‌ ತೇವಟಿಯಾ 3-0-21-1
ರಿಯಾನ್‌ ಪರಾಗ್‌ 1-0-16-0

ರಾಜಸ್ಥಾನ್‌ ರಾಯಲ್ಸ್‌
ಜಾಸ್‌ ಬಟ್ಲರ್‌ ಬಿ ಜಡೇಜ 49
ಮನ್‌ ವೋಹ್ರಾ ಸಿ ಜಡೇಜ ಬಿ ಕರನ್‌ 14
ಸಂಜು ಸ್ಯಾಮ್ಸನ್‌ ಸಿ ಬ್ರಾವೊ ಬಿ ಕರನ್‌ 1
ಶಿವಂ ದುಬೆ ಎಲ್‌ಬಿಡಬ್ಲ್ಯು ಬಿ ಜಡೇಜ 17
ಡೇವಿಡ್‌ ಮಿಲ್ಲರ್‌ ಎಲ್‌ಬಿಡಬ್ಲ್ಯು ಬಿ ಅಲಿ 2
ರಿಯಾನ್‌ ಪರಾಗ್‌ ಸಿ ಜಡೇಜ ಬಿ ಅಲಿ 3
ತೇವಟಿಯಾ ಸಿ ಗಾಯಕ್ವಾಡ್‌ ಬಿ ಬ್ರಾವೊ 20
ಕ್ರಿಸ್‌ ಮಾರಿಸ್‌ ಸಿ ಜಡೇಜ ಬಿ ಅಲಿ 0
ಉನಾದ್ಕತ್‌ ಸಿ ಜಡೇಜ ಬಿ ಠಾಕೂರ್‌ 24
ಚೇತನ್‌ ಸಕಾರಿಯಾ ಔಟಾಗದೆ 0
ಮುಸ್ತಫಿಜುರ್‌ ಔಟಾಗದೆ 0
ಇತರ 13
ಒಟ್ಟು (9 ವಿಕೆಟಿಗೆ) 143
ವಿಕೆಟ್‌ ಪತನ: 1-30, 2-45, 3-87, 4-90, 5-92, 6-95, 7-95, 8-137, 9-143.
ಬೌಲಿಂಗ್‌;
ದೀಪಕ್‌ ಚಹರ್‌ 3-0-32-0
ಸ್ಯಾಮ್‌ ಕರನ್‌ 4-0-24-2
ಶಾರ್ದೂಲ್‌ ಠಾಕೂರ್‌ 3-0-20-1
ರವೀಂದ್ರ ಜಡೇಜ 4-0-28-2
ಡ್ವೇನ್‌ ಬ್ರಾವೊ 3-0-28-1
ಮೊಯಿನ್‌ ಅಲಿ 3-0-7-3

ಕ್ರೀಡೆ – Udayavani – ಉದಯವಾಣಿ
Read More