ರಣಜಿ ಆಟಗಾರರ ನೆರವಿಗೆ ನಿಂತರಾ ಬಿಗ್​ಬಾಸ್​ಗಳು..? ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ನಿರ್ಮಾಣಕ್ಕೆ, ಬಿಸಿಸಿಐ ಕೊಡ್ತಿರೋ ಅನುದಾನ ಎಷ್ಟು..? ರಣಜಿ ಟೂರ್ನಿ ಆಯೋಜಿಸೋಕೆ ಒಪ್ಪಿಗೆ ನೀಡಿದ ಶ್ರೀಮಂತ ಮಂಡಳಿ. ಧೋನಿ ಬಗ್ಗೆ ಕನ್ನಡಿಗ ರಾಹುಲ್​ ಹೇಳಿದ್ದೇನು…? ಹೀಗೆ ಕ್ರಿಕೆಟ್​ ವಲಯದ ಆಗು – ಹೋಗುಗಳ ಕಂಪ್ಲೀಟ್ ಡಿಟೇಲ್ಸ್​ ನೋಡೋಣ, ಕ್ರಿಕೆಟ್​ನ ಇಂಟ್ರಸ್ಟಿಂಗ್ ಸ್ಟೋರಿಸ್​​ನಲ್ಲಿ!

1) ರಣಜಿ ಪಂದ್ಯದ ಶುಲ್ಕ ಹೆಚ್ಚಿಸಲು ಬಿಸಿಸಿಐ ನಿರ್ಧಾರ?


ಶೀಘ್ರದಲ್ಲೇ ದೇಸಿ ಕ್ರಿಕೆಟಿಗರಿಗೆ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐನಿಂದ, ಸಿಹಿ ಸುದ್ದಿಯೊಂದು ಹೊರ ಬೀಳುವ ಸಾಧ್ಯತೆ ಇದೆ. ದೇಸಿ ಆಟಗಾರರಿಗೆ ಪಂದ್ಯದ ಶುಲ್ಕ ಹೆಚ್ಚಿಸುವ ಪ್ರಸ್ತಾಪವನ್ನ ಬಿಸಿಸಿಐ ಸ್ವೀಕರಿಸಿದೆ. ರಣಜಿ, ವಿಜಯ್​ ಹಜಾರೆ ಮತ್ತು ಸಯ್ಯದ್​​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಭಾಗವಹಿಸುವ ಕ್ರಿಕೆಟಿಗರಿಗೆ, ಇದು ಅನುಕೂಲವಾಗಲಿದೆ. ಮುಂಬೈನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್​​ ಗಂಗೂಲಿ, ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ರು. ಸಭೆಯಲ್ಲಿ ಅಧಿಕಾರಿಯೊಬ್ಬರು ಸಲ್ಲಿಸಿದ ವರದಿ ಪ್ರಕಾರ, ಆಟಗಾರರಿಗೆ ಪಂದ್ಯದ ಶುಲ್ಕ ಹೆಚ್ಚಿಸುವಂತೆ ಕೇಳಿದ್ದಾರೆ. ಮುಂದಿನ ಆವೃತ್ತಿಯಿಂದ 20ಕ್ಕೂ ಹೆಚ್ಚಿನ ದೇಸಿ ಪಂದ್ಯಗಳನ್ನಾಡಿದ ಕ್ರಿಕೆಟಿಗರಿಗೆ 35 ಸಾವಿರಕ್ಕೆ ಬದಲಾಗಿ 60 ಸಾವಿರ ನೀಡಬೇಕು ಎಂದು ಮನವಿ ಮಾಡಿದ್ರು. ಸದ್ಯ ಈ ಮನವಿಯನ್ನ ಬಿಸಿಸಿಐ ಅಧ್ಯಕ್ಷರು ಸ್ವೀಕರಿಸಿದ್ದು, ಅಂಗೀಕಾರ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗ್ತಿದೆ.

2) ಮೂರನೇ ದೊಡ್ಡ ಸ್ಟೇಡಿಯಂಗೆ 100 ಕೋಟಿ ರೂಪಾಯಿ ಅನುದಾನ!
ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ರಾಜಸ್ಥಾನದ ಜೈಪುರದಲ್ಲಿ ನಿರ್ಮಾಣವಾಗ್ತಿದೆ. ಅಭಿಮಾನಿಗಳನ್ನ ಉತ್ತೇಜಿಸುವಂತ ಗುಣಮಟ್ಟ, ವಿನೂತನ ಮೂಲ ಸೌಕರ್ಯಗಳನ್ನು ಒದಗಿದಲು ಬಿಸಿಸಿಐ ಮುಂದಾಗಿದೆ. ಅದಕ್ಕಾಗಿ ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್‌ಗೆ, 100 ಕೋಟಿ ರೂಪಾಯಿ ಅನುದಾನ ನೀಡಲು ಮಂಡಳಿ ಸಿದ್ಧವಾಗಿದೆ. ವರದಿಗಳ ಪ್ರಕಾರ, ಹೊಸ ಕ್ರೀಡಾಂಗಣವು 75 ಸಾವಿರ ಆಸನಗಳ ಸಾಮರ್ಥ್ಯ ಹೊಂದುವ ಸಾಧ್ಯತೆ ಹೆಚ್ಚಿದೆ. ಇದು ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್​ ಕ್ರೀಡಾಂಗಣವಾಗಲಿದೆ. ಅಹ್ಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ನಮೋ ಕ್ರೀಡಾಂಗಣ ಮೊದಲ ಸ್ಥಾನದಲ್ಲಿದ್ರೆ, ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಮೈದಾನದ ಎರಡನೇ ದೊಡ್ಡ ಮೈದಾನವಾಗಿದೆ.

3) ಡೊಮೆಸ್ಟಿಕ್​ ಕಿಂಗ್​​ ರಣಜಿ ಟ್ರೋಫಿ ಈಸ್​ ಬ್ಯಾಕ್​!


ದೇಶೀಯ ಕ್ರಿಕೆಟ್​ನ ರಾಜ ಎಂದೇ ಕರೆಯಲಾಗುವ ರಣಜಿ ಟ್ರೋಫಿ ಆಯೋಜನೆಗೆ, ಬಿಸಿಸಿಐ ಗ್ರೀನ್​ ಸಿಗ್ನಲ್​ ನೀಡಿದೆ. ಕೊರೊನಾ ಕಾರಣದಿಂದ ರದ್ದಾಗಿದ್ದ ರಣಜಿ ಟ್ರೋಫಿ ನಡೆಸೋದಕ್ಕೆ, ಬಿಸಿಸಿಐ ಒಪ್ಪಿಗೆ ನೀಡಿದ್ದು, ವೇಳಾಪಟ್ಟಿಯನ್ನ ಪ್ರಕಟಿಸಿದೆ. ರಣಜಿ ಟ್ರೋಫಿಯನ್ನ 2021ರ ನವೆಂಬರ್ 16 ರಿಂದ 2022ರ ಫೆಬ್ರವರಿ 19 ರವರೆಗೆ ನಡೆಯಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು ರಣಜಿ ಮುಗಿದ ವಾರದ ಅಂತರದಲ್ಲಿ ವಿಜಯ್​​ ಹಜಾರೆ ಟ್ರೋಫಿ ಆರಂಭಗೊಳ್ಳಲಿದೆ. ಫೆಬ್ರವರಿ 23ರಿಂದ ಮಾರ್ಚ್ 26ರವರೆಗೆ ನಡೆಯುತ್ತೆ ಎಂದು ಹೇಳಿದ್ದಾರೆ.

5) ಕ್ಯಾಪ್ಟನ್ ಅಂದ್ರೆ ಮೊದಲು ಬರೋ ಹೆಸರೇ ಧೋನಿ​​..!


ಪ್ರಸ್ತುತ ಇಂಗ್ಲೆಂಡ್​ ಪ್ರವಾಸದಲ್ಲಿರುವ ಕೆ.ಎಲ್​.ರಾಹುಲ್ ಕೂಡ ಧೋನಿಯನ್ನ ನೆನೆದು, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಾಯಕತ್ವದ ವಿಷಯಕ್ಕೆ ಬಂದರೆ, ಎಂ.ಎಸ್​.ಧೋನಿ ಅವರಿಗೆ ಸಾಟಿ ಯಾರೂ ಇಲ್ಲ ಎಂದು ಗುಣಗಾನ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡಿದ ರಾಹುಲ್​, ನಾವು ಧೋನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ. ಅವರ ಬುಲೆಟ್​​​ಗಾಗಿ ನಾವು ಎದೆಯೊಡ್ಡಲು ಕೂಡ ರೆಡಿ ಎಂದು ಧೋನಿ ಮೇಲಿರುವ ಗೌರವವನ್ನ ಹೊರಹಾಕಿದ್ದಾರೆ. ಯಾರೇ ಆಗಲಿ​ ಕ್ಯಾಪ್ಟನ್​ ಎಂದು​ ಕೇಳಿದರೂ, ನಮ್ಮ ಮನಸ್ಸಿಗೆ ಬರುವ ಮೊದಲ ಉತ್ತರ ಒಂದೇ, ಅದು ಧೋನಿ ಆಗಿರುತ್ತೆ ಎಂದು ರಾಹುಲ್​​ ಹೇಳಿದ್ದಾರೆ. ಸಹ ಆಟಗಾರರಿಗೆ ನೀಡುತ್ತಿದ್ದ ಕಾಳಜಿಯೇ ಧೋನಿ ಮೇಲೆ ಗೌರವ, ಪ್ರೀತಿ ಹೆಚ್ಚಾಗಲು ಕಾರಣ. ದೇಶಕ್ಕಾಗಿ ಧೋನಿ ಸಲ್ಲಿಸಿದ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಕೊಂಡಾಡಿದ್ದಾರೆ.

6) ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಮರಳಲಿದ್ದಾರೆ ರಾಬಿನ್ಸನ್​!
ಅಂತರಾಷ್ಟ್ರೀಯ ಕ್ರಿಕೆಟ್​​ನಿಂದ ಅಮಾನತಾಗಿದ್ದ ಇಂಗ್ಲೆಂಡ್​​ನ ​​ಪ್ರತಿಭಾನ್ವಿತ ಬೌಲರ್​​ ಒಲಿ ರಾಬಿನ್​ಸನ್​​​, ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ರಾಬಿನ್​ಸನ್​ ಅಂತರಾಷ್ಟ್ರೀಯ ಕ್ರಿಕೆಟ್​ ಪುನರ್​ ಆರಂಭಿಸಲು, ಇಂಗ್ಲೆಂಡ್​​​ ಕ್ರಿಕೆಟ್​ ಮಂಡಳಿ ಅನುಮತಿ ನೀಡಿದೆ. 9 ವರ್ಷಗಳ ಹಿಂದೆ ರಾಬಿನ್​ಸನ್​​ ಮಾಡಿದ್ದ ಜನಾಂಗೀಯ ನಿಂದನೆ ಮತ್ತು ಲಿಂಗ ತಾರತಮ್ಯ ಕುರಿತ ಟ್ವೀಟ್​ನಿಂದಾಗಿ, ಕ್ರಿಕೆಟ್​​​ನಿಂದ​ ಅಮಾನತುಗೊಳಿಸಿ ತನಿಖೆಗೆ ಒಳಗಾಗಿದ್ರು. ಇದೀಗ ತನಿಖೆ ಮುಕ್ತಾಯಗೊಂಡಿದ್ದು, ರಾಬಿನ್​ಸನ್​​ಗೆ ಮಂಡಳಿ ಕ್ಲೀನ್​ಚಿಟ್​ ನೀಡಿದೆ.

7) ದುಡ್ಡಿಗಾಗಿ ಐಪಿಎಲ್​ ಆಡ್ತಿದ್ದೆ ಎಂದ ಡೇಲ್​​ ಸ್ಟೇನ್​!


ಸೌತ್​ ಆಫ್ರಿಕಾ ಸ್ಟಾರ್​ ವೇಗಿ ಡೇಲ್​ ಸ್ಟೈನ್ ಅತ್ಯುತ್ತಮ ಬೌಲರ್​​ಗಳಲ್ಲಿ ಒಬ್ಬರು. ಐಪಿಎಲ್​​ನಲ್ಲೂ ಮಿಂಚಿದ್ದ ಸ್ಟೇನ್​, ತಾನು ಐಪಿಎಲ್​​ನಲ್ಲಿ ಬ್ಯಾಟಿಂಗ್​​ಗೆ ಹೆಚ್ಚು ಗಮನ ನೀಡದೇ ಇದ್ದದ್ದು ಯಾಕೆ ಅನ್ನೋದನ್ನ ಬಹಿರಂಗಪಡಿಸಿದ್ದಾರೆ. ಹೆಚ್ಚಿನ ಹಣ ಗಳಿಸುವ ಸಲುವಾಗಿಯೇ ಐಪಿಎಲ್​ ಆಡ್ತಿದ್ದೆ. ಆದರೆ ಬ್ಯಾಟಿಂಗ್​​ ಆಡೋದ್ರ ಬಗ್ಗೆ ಗಮನವೇ ಹರಿಸುತ್ತಿರಲಿಲ್ಲ. ಅದಕ್ಕಾಗಿ ನಾನು ವಿಷಾಧ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ. ಒಂದು ವೇಳೆ ನಾನು ಬ್ಯಾಟಿಂಗ್​​ ಕಡೆ ಗಮನ ನೀಡಿದ್ರೆ, ಕ್ರಿಸ್​ ಮಾರಿಸ್​ರಂತೆ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗ್ತಿದ್ದೆ ಅಂತ ತಮಾಷೆ ಮಾಡಿದ್ದಾರೆ.

8) ಐಪಿಎಲ್​​​ನಲ್ಲಿ ಸ್ಟೀವ್​ ಸ್ಮಿತ್​ ಆಡೋದು ಡೌಟ್​?


ಐಪಿಎಲ್ ಫೇಸ್-2​ ಆರಂಭಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್​ಗೆ ಆಘಾತ ಎದುರಾಗಿದೆ. ಐಪಿಎಲ್​​​ನ 2ನೇ ಹಂತದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್ ಫಾಲ್ಗೊಳ್ಳುತ್ತಿಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ. ಇಂಜುರಿಗೆ ತುತ್ತಾಗಿರುವ ಸ್ಮಿತ್, ಐಪಿಎಲ್​​​ ಸೇರಿ ಹಲವು ಸರಣಿಗಳನ್ನ ಮಿಸ್ ಮಾಡಿಕೊಳ್ಳಲಿದ್ದಾರೆ. 2020ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕರಾಗಿದ್ದ ಸ್ಮಿತ್, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿಕೊಂಡಿದ್ರು. ಆದರೆ ಸ್ಮಿತ್, ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ರು. ಐಪಿಎಲ್ ಅಲ್ಲದೆ, ಟಿ20 ವಿಶ್ವಕಪ್‌ನಲ್ಲೂ ಭಾಗವಹಿಸುವುದು ಅನಮಾನ ಎನ್ನಲಾಗ್ತಿದೆ.

The post ಧೋನಿ ಬಗ್ಗೆ ಕನ್ನಡಿಗ ರಾಹುಲ್​ ಹೇಳಿದ್ದೇನು?- ಕ್ರಿಕೆಟ್​ ಜಗತ್ತಿನ ಟಾಪ್ ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link