ನ್ಯೂಜಿಲೆಂಡ್ ವಿರುದ್ಧ ಫಸ್ಟ್ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ವಿಕೆಟ್ ಕೀಪಿಂಗ್ ಪ್ರದರ್ಶನ ತೋರಿದ್ದಾರೆ ಕೆ. ಎಸ್ ಭರತ್. ಈಗ ಉತ್ತಮ ಕೀಪಿಂಗ್ ಮಾಡಿದ ಕೆ.ಎಸ್ ಭರತನನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಗುಣಗಾನ ಮಾಡಿದ್ದಾರೆ.
ಕೆ.ಎಸ್ ಭರತ್, ವಿಕೆಟ್ ಕೀಪಿಂಗ್ ಕೌಶಲ್ಯದ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದ ಮಾತು ನನಗೆ ಈಗಲೂ ನೆನಪಿದೆ. ಭರತ್ ಅವರಲ್ಲಿ ಉತ್ತಮ ವಿಕೆಟ್ ಕೀಪಿಂಗ್ ಕೌಶಲ್ಯವಿದೆ. ಎಂಎಸ್, ಧೋನಿ, ವೃದ್ದಿಮಾನ್ ಸಾಹಾ ಬಳಿಕ ಭಾರತೀಯ ಕ್ರಿಕೆಟ್ಗೆ ಈತನೇ ಮುಖ್ಯ ವಿಕೆಟ್ ಕೀಪರ್ ಎಂದು ಹೇಳಿದ್ದರು.
ಮೊದಲ ಅವಕಾಶದಲ್ಲಿ ಇದನ್ನು ಫ್ರೂವ್ ಮಾಡಿದ್ದಾರೆ. ಇಂಥಾ ಗುಣಮಟ್ಟದ ಸ್ಪಿನ್ ಪಿಚ್ಗಳಲ್ಲಿ ನೀವು ಉತ್ತಮ ವಿಕೆಟ್ ಕೀಪರ್ಗಳನ್ನು ಹೊಂದಿಲ್ಲವಾದರೆ, ಸಿಕ್ಕ ಬಹುತೇಕ ಅವಕಾಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.