3 ಐಸಿಸಿ ಟ್ರೊಫಿ, 3 ಐಪಿಎಲ್​ ಟ್ರೋಫಿ ಇದು ನಾಯಕನಾಗಿ ಧೋನಿಯ ಸಾಧನೆಗೆ ಹಿಡಿದ ಕನ್ನಡಿ. ವಿಭಿನ್ನ ಶೈಲಿಯ ನಾಯಕತ್ವದಿಂದಲೇ ವಿಶ್ವ ಕ್ರಿಕೆಟ್​​ನಲ್ಲಿ ಧೋನಿಯದ್ದೇ ವಿಶಿಷ್ಠ ಛಾಪು ಮೂಡಿದೆ. ಆದ್ರೂ, ಕಳೆದ ಆವೃತ್ತಿಯ ಐಪಿಎಲ್​ನ ಬಳಿಕ ಧೋನಿ ನಾಯಕತ್ವವನ್ನ ಯುವ ಆಟಗಾರರಿಗೆ ಹಸ್ತಾಂತರಿಸಬೇಕು ಅನ್ನೋ ಕೂಗು ಜೋರಾಗಿತ್ತು. ಆದ್ರೂ, 13ನೇ ಆವೃತ್ತಿಯ ಪಂದ್ಯವೊಂದರ ಬಳಿಕ ಮಾತನಾಡಿದ್ದ ಧೋನಿ, ಯುವ ಆಟಗಾರ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡ್ತಾ ಇಲ್ಲ. ಸಿಕ್ಕ ಅವಕಾಶವನ್ನ ಕೈ ಚೆಲ್ಲುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ರು. ಇದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಈ ಬಗ್ಗೆ ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ಯುವ ಆಟಗಾರ ಎನ್​. ಜಗದೀಶನ್​ ಮಾತನಾಡಿದ್ದು, ಅಂದು ಧೋನಿ ಹೇಳಿದ ಮಾತನ್ನ ಸಂಪೂರ್ಣವಾಗಿ ಅಪಾರ್ಥಗೊಳಿಸಲಾಯ್ತು. ಧೋನಿ ಎಂದಿಗೂ ಯುವ ಆಟಗಾರರ ಪಾಲಿನ ಗುರುವಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

The post ಧೋನಿ ಹೇಳಿದ ಮಾತನ್ನ ಅಪಾರ್ಥಗೊಳಿಸಲಾಯ್ತು..!- ಎನ್​.ಜಗದೀಶನ್​ appeared first on News First Kannada.

Source: newsfirstlive.com

Source link