ಧೋನಿ Vs ಪಾಂಟಿಂಗ್​, ಯಾರಾಗ್ತಾರೆ ಪಾಸ್​? ಫೈನಲ್​ಗೇರಲು ಪಂಟರ್​ ಪಾಂಟಿಂಗ್​ ರಣತಂತ್ರ

ಸೂಪರ್​ ಸಂಡೆಯ ಇಂದಿನ ಪಂದ್ಯ ಕ್ವಾಲಿಫೈಯರ್​​​ ಅನ್ನೋ ಕಾರಣದಿಂದ ಮಾತ್ರ ಎಲ್ಲರ ಗಮನ ಸೆಳೆದಿಲ್ಲ. ಬದಲಾಗಿ ಗುರು ಶಿಷ್ಯರ ಕದನ ಅನ್ನೋ ಕಾರಣಕ್ಕೂ, ತೀವ್ರ ಕುತೂಹಲ ಹುಟ್ಟು ಹಾಕಿದೆ. ಅದೆಲ್ಲದರ ಜೊತೆ ಇದು ವಿಶ್ವ ಕ್ರಿಕೆಟ್​​ ಕಂಡ ಚಾಣಾಕ್ಷ ನಾಯಕರ ಮುಖಾಮುಖಿಗೂ ಸಾಕ್ಷಿಯಾಗಲಿದೆ.

ದುಬೈ ಅಂಗಳದಲ್ಲಿ ಇಂದು ನಡೆಯೋ ಹಂಗಾಮ ಗುರು ಶಿಷ್ಯರ ಕದನ ಎಂಬ ಕಾರಣಕ್ಕೆ, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹುಟ್ಟುಹಾಕಿದೆ. ಯಾರಿಂದ ಕ್ರಿಕೆಟ್​​ ಪಟ್ಟುಗಳನ್ನ ಕಲಿತನೂ ಆ ಗುರುವಿಗೆ ಇಂದು, ಶಿಷ್ಯ ಸವಾಲಾಗಿ ನಿಂತಿದ್ದಾನೆ. ಇಂದಿನ ಪಂದ್ಯವನ್ನ ಗೆಲ್ಲಬೇಕಂದ್ರೆ ಮಾಸ್ಟರ್​​ ಧೋನಿ, ತನ್ನ ಶಿಷ್ಯ ರಿಷಭ್​ ಪಡೆಯನ್ನ ಸೋಲಿಸಲು ವಿಶೇಷ ತಂತ್ರಗಾರಿಕೆಯನ್ನೇ ಹೆಣೆಯಬೇಕಿದೆ.

ಎರಡೂ ಲೀಗ್ ಫೈಟ್​​ನಲ್ಲಿ ಗುರು ಧೋನಿಗೆ ಶಿಷ್ಯನ ಶಾಕ್​
ರಿಷಭ್​ ಪಂತ್​ ಯಶಸ್ಸಿನ ಬಹುಪಾಲು ಕ್ರೆಡಿಟ್​​ ನಿಸ್ಸಂಶಯವಾಗಿ ಮೆಂಟರ್​ ಧೋನಿಗೆ ಸಲ್ಲಬೇಕು ಅಂದ್ರೆ ತಪ್ಪಾಗಲ್ಲ. ಕೀಪಿಂಗ್​​, ನಾಯಕತ್ವ ಈ ಜವಾಬ್ಧಾರಿಯನ್ನ ರಿಷಭ್​ ಪಂತ್​ ಸಮರ್ಥವಾಗಿ ನಿಭಾಯಿಸುತ್ತಿರುವುದರಲ್ಲಿ, ಧೋನಿಯ ಮಾರ್ಗದರ್ಶನವೂ ಒಂದು ಕಾರಣವಾಗಿದೆ. ಸದ್ಯ ಶಿಷ್ಯ ಪಂತ್​ ಈಗ ಮಾಸ್ಟರ್​ ಧೋನಿಗೆ, ಸವಾಲಾಗಿ ಪರಿಣಮಿಸಿದ್ದಾರೆ. ಲೀಗ್​ ಹಂತದ ಎರಡೂ ಪಂದ್ಯಗಳಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ – ಡೆಲ್ಲಿಗೆ ಶರಣಾಗಿರೋದೆ ಇದಕ್ಕೆ ಸಾಕ್ಷಿಯಾಗಿದೆ.

ರಿಷಭ್​ ಪಂತ್​ ಸಕ್ಸಸ್​ ಹಿಂದಿದ್ದಾರೆ ಪಂಟರ್​ ಪಾಂಟಿಂಗ್​
ಯೆಸ್​..! ನಾಯಕನಾಗಿ ಸಕ್ಸಸ್​ ಕಂಡಿರೋ ಪಂತ್​ ಹಿಂದೆ ಹೇಗೆ ಧೋನಿ ಪಾತ್ರವಿದೆಯೋ, ಅಷ್ಟೇ ಮುಖ್ಯ ಪಾತ್ರವನ್ನ ರಿಕಿ ಪಾಂಟಿಂಗ್​ ಕೂಡ ನಿರ್ವಹಿಸಿದ್ದಾರೆ. ಕೋಚ್​ ಆದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್​​ ಬೆಳವಣಿಗೆಯ ಜೊತೆ ಜೊತೆಗೆ, ವೈಯಕ್ತಿಕವಾಗಿ ರಿಷಭ್​ ಪಂತ್​ ಬೆಳವಣಿಗೆಯ ಮೇಲೂ ಪಾಂಟಿಂಗ್​ ಪ್ರಭಾವ ಬೀರಿದೆ. ಮೈದಾನದಲ್ಲಿ ಬೌಲಿಂಗ್​ ರೊಟೆಷನ್​, ಫೀಲ್ಡ್​​​ ಸೆಟ್ಟಿಂಗ್​ನಂತ ನಿರ್ಧಾರಗಳನ್ನ ಪಂತ್​ ಸಲೀಸಾಗಿ ತೆಗೆದುಕೊಳ್ತಿರೋದೆ, ಇದಕ್ಕೆ ನಿದರ್ಶನವಾಗಿದೆ.

ವಿಶ್ವ ಕ್ರಿಕೆಟ್​ ಕಂಡ ಶ್ರೇಷ್ಠ ನಾಯಕ ಮುಖಾಮುಖಿಗೂ ವೇದಿಕೆ
​3 ಐಸಿಸಿ ಟ್ರೋಫಿಗಳನ್ನ ಗೆದ್ದಿರುವ ಎಮ್.​ಎಸ್​ ಧೋನಿ, ಇನ್ನೊಂದೆಡೆ ಸತತವಾಗಿ 2 ಬಾರಿ ಏಕದಿನ ವಿಶ್ವಕಪ್​ ಜಯಿಸಿದ ರಿಕಿ ಪಾಂಟಿಂಗ್​.. ಈ ಇಬ್ಬರು ದಿಗ್ಗಜರ ಮುಖಾಮುಖಿಗೂ ಇಂದಿನ ಪಂದ್ಯ ವೇದಿಕೆಯಾಗಲಿದೆ. ಧೋನಿ ಮೈದಾನದಲ್ಲಿದ್ದು ತಂಡವನ್ನ ಲೀಡ್​ ಮಾಡ್ತಿದ್ರೆ, ಡಗೌಟ್​ನಲ್ಲೇ ಕೂತು ರಣತಂತ್ರ ಹೆಣೆಯೋದ್ರಲ್ಲಿ ಪಾಂಟಿಂಗ್,​ ಪಂಟರ್​ ಆಗಿದ್ದಾರೆ. ಈ ಇಬ್ಬರ ಪಾಲಿಗೆ ಇದು ಪ್ರತಿಷ್ಠೆಯ ಕದನವೂ ಆಗಿದೆ. ಹೀಗಾಗಿ ಈ ಅಂಶವೂ ಪಂದ್ಯಕ್ಕೆ ಹೈವೋಲ್ಟೆಜ್​ ಟಚ್​ ನೀಡಿದೆ.

News First Live Kannada

Leave a comment

Your email address will not be published. Required fields are marked *