ಬೆಂಗಳೂರು: ನಟ ಧ್ರುವ ಸರ್ಜಾರನ್ನು ನೋಡಲು ಬಂದ ಅಭಿಮಾನಿಯ ಬೈಕ್ ಏಕಾಏಕಿ ಮಾಯವಾದ ಘಟನೆ ಕೆ.ಆರ್.ರೋಡ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಆರ್.ಆರ್.ನಗರದ ನಿವಾಸಿಯಾದ ಸುನೀಲ್​ ಎಂಬಾತ ಜುಲೈ 2 ರಂದು ಬೆಳಗ್ಗೆ ಧ್ರುವ ಸರ್ಜಾರನ್ನ ನೋಡಲು ಅವರ ಮನೆಗೆ ಹೋಗಿದ್ದರು. ಬೈಕ್​ ಹೊರಗಡೆ ನಿಲ್ಲಿಸಿ ಧ್ರುವರನ್ನ ಮಾತನಾಡಿಸಿ ಹೊರಬರುವ ವೇಳೆಗೆ ಬೈಕ್​ ಮಾಯವಾಗಿದೆ. ಇದರಿಂದ ಗಲಿಬಿಲಿಗೊಂಡ ಸುನೀಲ್ ಎಲ್ಲೆಡೆ ಹುಡುಕಾಡಿದ್ದಾರೆ.

ನಂತರ ಬನಶಂಕರಿ ಠಾಣೆಯಲ್ಲಿ ತಮ್ಮ ಹೊಂಡಾ ಸಿಬಿ ಶೈನ್ ಬೈಕ್ ಕಳುವಾಗಿದೆ ಎಂದು ದೂರು ದಾಖಲಿಸಿದ್ದಾರೆ.

The post ಧ್ರುವ ಸರ್ಜಾರನ್ನ ನೋಡಲು ಬಂದು ಬೈಕ್​ ಕಳೆದುಕೊಂಡ ಅಭಿಮಾನಿ appeared first on News First Kannada.

Source: newsfirstlive.com

Source link