ಧ್ರುವ ಸರ್ಜಾ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಹೊರಬಿದ್ದಿದೆ. ಅದರ ಜೊತೆಗೆ ನಿರಾಶೆಯ ವಿಷಯವೂ ಇದೆ. ಧ್ರುವ ಸರ್ಜಾ ಅಭಿನಯದ ಉದಯ್ ಕೆ. ಮೆಹ್ತಾ ನಿರ್ಮಾಣದ ದುಬಾರಿ ಚಿತ್ರ ಸದ್ಯಕ್ಕೆ ಸೆಟ್ಟೇರಲ್ಲ ಅಂತ ತಿಳಿದುಬಂದಿದೆ. ದುಬಾರಿ ಚಿತ್ರವನ್ನ ಸದ್ಯಕ್ಕೆ ಮಾಡ್ತಿಲ್ಲ. ಅದಕ್ಕೂ ಮುಂಚೆ ಧ್ರುವ ಜೊತೆ ಬೇರೆ ಸಿನಿಮಾ ಮಾಡ್ತಿದ್ದೀನಿ ಅಂತ ಸ್ವತಃ  ನಿರ್ಮಾಪಕ ಉದಯ್  ಮೆಹ್ತಾ ನ್ಯೂಸ್ ಫಸ್ಟ್​​ಗೆ ಮಾಹಿತಿ ನೀಡಿದ್ದಾರೆ.

ದುಬಾರಿ ಚಿತ್ರಕ್ಕೂ ಮೊದಲೆ ಉದಯ್ ಮೆಹ್ತಾ ಬೇರೆ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಹೊಸ ಕತೆ, ಹೊಸ ನಿರ್ದೇಶಕ, ಹೊಸ ಟೈಟಲ್​ನ ಚಿತ್ರಕ್ಕೆ ಧ್ರುವ ಸರ್ಜಾ ನಾಯಕರಾಗ್ತಿದ್ದಾರೆ. ಜುಲೈನಲ್ಲಿ ಈ ಚಿತ್ರವನ್ನು ಉದಯ್  ಅನೌನ್ಸ್ ಮಾಡಲಿದ್ದಾರಂತೆ. ಈಗಾಗಲೇ ಈ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ ಅಂತ ತಿಳಿಸಿದ್ದಾರೆ.

ಧ್ರುವ ಸರ್ಜಾ ಸದ್ಯ ಚೆನ್ನೈ ನಲ್ಲಿದ್ದು ಜುಲೈ 3ಕ್ಕೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ಬರ್ತಿದಂತೆ  ಹೊಸ ಚಿತ್ರವನ್ನು ಅನೌನ್ಸ್ ಮಾಡಲಿದ್ದಾರೆ ಅಂತ ಹೇಳಲಾಗ್ತಿದೆ.

The post ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಜೊತೆಗೆ ನಿರಾಶೆ.. ಹಿಂಗ್ಯಾಕಾಯ್ತು? appeared first on News First Kannada.

Source: newsfirstlive.com

Source link