ನವದೆಹಲಿ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ 2020ರಲ್ಲಿ ಧ್ವಂಸಗೊಳಿಸಲಾಗಿದ್ದ ಶ್ರೀ ಪರಮಹಂಸ ಜಿ ಮಹಾರಾಜ್ ದೇವಾಲಯವನ್ನು ಪುನರ್ ನಿರ್ಮಿಸಲಾಗಿದೆ. ಅಚ್ಚರಿ ಎಂಬಂತೆ ದೇವಾಲಯವನ್ನು ಖುದ್ದು ಪಾಕಿಸ್ತಾನದ ಚೀಫ್ ಜಸ್ಟೀಸ್ ಗುಲ್ಜಾರ್ ಅಹ್ಮದ್ ಲೋಕಾರ್ಪಣೆ ಮಾಡಿದ್ದಾರೆ.
100 ವರ್ಷಗಳಷ್ಟು ಹಳೆಯದಾದ ಈ ದೇವಾಲಯದ ಮೇಲೆ ಡಿಸೆಂಬರ್ 2020ರಲ್ಲಿ ದಾಳಿ ನಡೆಸಲಾಗಿತ್ತು. ಧ್ವಂಸಗೊಂಡಿರುವ ಮಂದಿರವನ್ನು ಪುನರ್ ನಿರ್ಮಾಣ ಮಾಡುವ ಬಗ್ಗೆ ಸ್ಥಳೀಯ ಆಡಳಿತ ಭರವಸೆ ಕೂಡ ನೀಡಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ದೇವಾಲಯದಲ್ಲಿ ಮೊನ್ನೆ ಅದ್ಧೂರಿಯಾಗಿ ದೀಪಾವಳಿಯನ್ನು ಕೂಡ ಪಾಕಿಸ್ತಾನ್ ಹಿಂದೂ ಕೌನ್ಸಿಲ್ ಆಚರಿಸಿತ್ತು.
ಲೋಕಾರ್ಪಣೆ ಬಳಿಕ ಮಾತನಾಡಿದ ಅವರು, ಪಾಕ್ ಸಂವಿಧಾನದ ಪ್ರಕಾರ, ಎಲ್ಲ ಧರ್ಮದ ಜನರಂತೆಯ ಹಿಂದೂಗಳಿಗೂ ಸಮಾನ ಹಕ್ಕುಗಳಿವೆ ಎಂದಿದ್ದಾರೆ.