ಹಾಸನ: ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಕೊರತೆ ಹಿನ್ನೆಲೆ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ನಾಳೆ ಬೆಳಗ್ಗೆ ಸಿಎಂ ಮನೆ ಮುಂದೆ ಧರಣಿ ಕೂರ್ತೇನೆ ಅಂತಾ ಮಾಜಿ ಸಚಿವ ಹೆಚ್​​.ಡಿ. ರೇವಣ್ಣ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಹೆಚ್ ಡಿ ರೇವಣ್ಣ.. ನಾಳೆ ಬೆಳಗ್ಗೆ 9 ಗಂಟೆಯಿಂದ ಸಿಎಂ ಮನೆ ಮುಂದೆ ಧರಣಿ ಕೂರ್ತೇನೆ. ಕೊರೊನಾ ಇರೋದರಿಂದ ನಾನೊಬ್ಬನೇ ಧರಣಿ ಮಾಡ್ತೇನೆ. ನಂಗೆ ಕೊರೊನಾ ಬಂದ್ರೂ ಪರವಾಗಿಲ್ಲ.. ನಾನು ಈ ವಿಚಾರದಲ್ಲಿ ತಂದೆಯ ಮಾತನ್ನೂ ಕೇಳಲ್ಲ ಎಂದಿದ್ದಾರೆ.

ನನಗೆ ಜಿಲ್ಲೆಯ ಜನರ ಹಿತವೇ ಮುಖ್ಯ

ಮುಂದುವರೆದು.. ನನಗೆ ಜಿಲ್ಲೆಯ ಜನರ ಹಿತವೇ ಮುಖ್ಯ. ಜಿಲ್ಲೆಯಲ್ಲಿ ಜನರು ತೊಂದರೆ ಪಡುತ್ತಿದ್ದಾರೆ. ಇಲ್ಲಿ ಹೇಳೋರಿಲ್ಲ, ಕೇಳೋರಿಲ್ಲ, ಜಿಲ್ಲೆಗೆ ರೆಮಿಡಿಸಿವರ್ ಪೂರೈಸಬೇಕು.. ಆದರೂ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ನಾನು, ದೇವೇಗೌಡರು ಪತ್ರ ಬರೆದಿದ್ದರೂ ಸ್ಪಂದನೆ ಸಿಕ್ಕಿಲ್ಲ.

ಆರೋಗ್ಯ ಸಚಿವರು ಕರೆ ಮಾಡಿದ್ರೆ ಸ್ಚೀಕರಿಸಿಲ್ಲ. ಜಿಲ್ಲಾಧಿಕಾರಿಗೆ ಅನುಭವದ ಕೊರತೆ ಇದೆ.. ಜಿಲ್ಲೆಯ ಹಿರಿಯ ಶಾಸಕರ ಸಭೆ ಕರೆದಿಲ್ಲ, ಕೂಡಲೇ ಸಭೆ ಕರೆಯಬೇಕು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ಏಕಾಏಕಿ ವರ್ಗ ಮಾಡಲಾಗಿದೆ ಎಂದು ಇದೇ ವೇಳೆ ಕಿಡಿ ಕಾರಿರುವ ರೇವಣ್ಣ.. ಕೂಡಲೇ ಅವರ ವರ್ಗಾವಣೆ ರದ್ದುಪಡಿಸಬೇಕು ಎಂದು ಆಗ್ರಹಪಡಿಸಿದ್ದಾರೆ.

ಸಂಜೆಯೊಳಗೆ ಜಿಲ್ಲೆಗೆ ರೆಮ್ಡಿಸಿವಿರ್ ಇಂಜೆಕ್ಷನ್ ಪೂರೈಸಬೇಕು

ಇಂದು ಸಂಜೆಯೊಳಗೆ ಜಿಲ್ಲೆಗೆ ರೆಮ್ಡಿಸಿವಿರ್ ಇಂಜೆಕ್ಷನ್ ಪೂರೈಸಬೇಕು. ಜಿಲ್ಲೆಗೆ ಹಣ ನೀಡಿದ್ದರೆ ಎಷ್ಟು ಎಂದು ಬಹಿರಂಗ ಪಡಿಸಲಿ.. ಕೊರೊನಾ ಪಾಸಿಟಿವ್ ಮತ್ತು ಸಾವಿನ ವಿಷಯ ಮುಚ್ಚಿಡಲಾಗುತ್ತಿದೆ. ಬಡ ವ್ಯಾಪಾರಿಗಳು, ಬಡವರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಖಾಸಗಿ‌ ಆಸ್ಪತ್ರೆಗಳಲ್ಲಿ ಕೇವಲ ಶ್ರೀಮಂತರಿಗೆ ಚಿಕಿತ್ಸೆ ಸಿಗುತ್ತಿದೆ. ರಾಜ್ಯದಲ್ಲಿ ಪತ್ರಕರ್ತರ ಹಿತ ಕಾಯುವಂತೆ ಒತ್ತಾಯ, ವಿಮೆ ಮಾಡಿಸಲು ಆಗ್ರಹ ಮಾಡುತ್ತೇನೆ.

ಸಿಎಂ, ಸಂಬಂಧಪಟ್ಟ ಮಂತ್ರಿಗಳಿಗೆ ಕೈ ಮುಗಿಯುತ್ತೇನೆ.. ಕೂಡಲೇ‌ ರೆಮ್ಡಿಸಿವಿರ್ ‌ಇಂಜೆಕ್ಷನ್ ಕೊಡಿ ಎಂದು ಹೆಚ್ ಡಿ ರೇವಣ್ಣ ಮನವಿ ಮಾಡಿದ್ದಾರೆ.

The post ನಂಗೆ ಕೊರೊನಾ ಬಂದ್ರೂ ಪರವಾಗಿಲ್ಲ.. ಈ ವಿಚಾರದಲ್ಲಿ ತಂದೆ ಮಾತೂ ಕೇಳಲ್ಲ- ರೇವಣ್ಣ ಹೀಗಂದಿದ್ಯಾಕೆ..? appeared first on News First Kannada.

Source: newsfirstlive.com

Source link