ನಂಗೆ ತೊಂದರೆ ಕೊಟ್ಟವರನ್ನ ಸುಮ್ಮನೇ ಬಿಡಲ್ಲ- ಗುಡುಗಿದ ರಮೇಶ್ ಜಾರಕಿಹೋಳಿ

ನಂಗೆ ತೊಂದರೆ ಕೊಟ್ಟವರನ್ನ ಸುಮ್ಮನೇ ಬಿಡಲ್ಲ- ಗುಡುಗಿದ ರಮೇಶ್ ಜಾರಕಿಹೋಳಿ

ಬೆಳಗಾವಿ: ರಾಜೀನಾಮೆ ಕೊಡುವ ಬಗ್ಗೆ ನಾನು ಮಿತ್ರಾಮಂಡಳಿಯೊಂದಿಗೆ ಗೌಪ್ಯವಾಗಿ ಮಾತನಾಡಿದ್ದೆ. ಆದರೆ ಅದು ಹೇಗೆ ಮಾಧ್ಯಮಗಳಿಗೆ ಲಿಕ್​ ಆಯ್ತು ಗೊತ್ತಿಲ್ಲ. 7-8 ದಿನ ಬಿಟ್ಟು ಈ ಬಗ್ಗೆ ಮಾತನಾಡುತ್ತೇನೆ ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.

ಸುತ್ತೂರು ಮಠಕ್ಕೆ ಭೇಟಿ ನೀಡಿದ ಬಳಿಕ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್​ ಜಾರಕಿಹೊಳಿ ಅವರು, ರಾಜೀನಾಮೆ ವಿಚಾರದ ಬಗ್ಗೆ ನನ್ನ ಹಿತೈಶಿಗಳು ಹಾಗೂ ಆಪ್ತರು ಹಲವು ಸಲಹೆಗಳನ್ನು ನೀಡಿದ್ದಾರೆ. ಆದ್ದರಿಂದ 7-8 ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ. ಪಕ್ಷ ಹಾಗೂ ದೆಹಲಿಯ ನಾಯಕರು ನನ್ನನ್ನು ಪ್ರೀತಿಯಿಂದ ನಡೆಸಿಕೊಂಡಿದ್ದಾರೆ. ಕೆಲವೊಂದು ಜನ ನೋವುಂಟು ಮಾಡಿದ್ದಾರೆ. ಆ ಬಗ್ಗೆ ಶೀಘ್ರ ಮಾತನಾಡುತ್ತೇನೆ.

ಶಾಸಕ ಸ್ಥಾನಕ್ಕೆ ನನ್ನ ಮನೆಯಲ್ಲಿ ಸಹೋದರರು ಇದ್ದಾರೆ. ಇನ್ನು ರಗಡ್​​ ಹುಲಿ ಇದ್ದಾವಾ.. ರಮೇಶ್​ ಜಾರಕಿಹೊಳಿ ಅವರನ್ನು ಮೂಲೆ ಗುಂಪು ಮಾಡಿದ್ದೇವೆ ಎಂದು ತಿಳಿದುಕೊಂಡಿದ್ದರೆ ಅದರ 10 ಪಟ್ಟು ಹುಲಿಗಳು ಇವೆ. ಕಳೆದ ನಾಲ್ಕೇದು ದಿನಗಳಿಂದ ಸುದ್ದಿ ನೋಡಿದ್ದೇನೆ.. ಮಂತ್ರಿ ಮಾಡಿ ಅಂತಾ ಹೋಗೋವಷ್ಟು ಸಣ್ಣ ಮನುಷ್ಯ ನಾನಲ್ಲ.

ಸೆ.7 ರಂತೆ ನಾನು ಸರ್ಕಾರ ತೆಗೆಯಬೇಕು ಎಂದು ತೀರ್ಮಾನ ಮಾಡಿ ಹೇಳಿದ್ದೆ. ಅದರಂತೆ ಎಲ್ಲವೂ ನಡೆಯಿತು. ಈಗಲೂ ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದೇನೆ. ನನಗೆ ತೊಂದರೆ ಕೊಟ್ಟವರನ್ನ ಸುಮ್ಮನೇ ಬಿಡೋದಿಲ್ಲ, ಅವರನ್ನ ಮನೆಗೆ ಕಳಿಸ್ತೀನಿ ಸುಮ್ನೆ ಬಿಡಲ್ಲ ಎಂದು ವಿರೋಧಿಗಳ ವಿರುದ್ಧ ಗುಡುಗಿದರು.

The post ನಂಗೆ ತೊಂದರೆ ಕೊಟ್ಟವರನ್ನ ಸುಮ್ಮನೇ ಬಿಡಲ್ಲ- ಗುಡುಗಿದ ರಮೇಶ್ ಜಾರಕಿಹೋಳಿ appeared first on News First Kannada.

Source: newsfirstlive.com

Source link