ಬಹುನಿರೀಕ್ಷಿತ ಚಿತ್ರ ಏಕ್ ಲವ್ ಯಾ ಇನ್ನಷ್ಟೇ ತೆರೆಗೆ ಬರಬೇಕಿದೆ. ಈ ಚಿತ್ರದಲ್ಲಿ ನಟಿಸಿದ್ದ ನಟಿ ರೇಷ್ಮಾ ನಾಣಯ್ಯ ತಮ್ಮ ಮೂರನೇ ಸಿನಿಮಾ ನಟನೆಗಾಗಿ ತಯಾರಾಗುತ್ತಿದ್ದಾರೆ.
  
ಪೊಗರು ಯಶಸ್ಸಿನಲ್ಲಿರುವ ನಂದ ಕಿಶೋರ್ ಅವರ ಮುಂದಿನ ಸಿನಿಮಾದಲ್ಲಿ ನಟಿ ರೇಷ್ಮಾ ನಾಣಯ್ಯ ಶ್ರೇಯಸ್ ಮಂಜುಗೆ ನಾಯಕ ನಟಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. 

ಬಾಲ್ಯದಿಂದಲೂ ನಟಿಯಾಗಬೇಕೆಂಬ ರೇಷ್ಮಾ ನಾಣಯ್ಯ ಅವರ ಕನಸು ಪ್ರೇಮ್ ನಿರ್ದೇಶನದಲ್ಲಿ ಅಭಿನಯಿಸುವ ಮೂಲಕ ನನಸಾಗಿತ್ತು. ಏಕ್ ಲವ್ ಯಾ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಎರಡನೇ ಸಿನಿಮಾ ''ಮಾರ್ಗ''ದಲ್ಲಿ ಚೇತನ್ ಜೊತೆಗೆ ರೇಷ್ಮಾ ನಟಿಸಿದ್ದು ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಲಿದೆ.
 
ಇದೇ ವೇಳೆ ನಂದ ಕಿಶೋರ್ ಅವರ ಸಿನಿಮಾ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಕೆ ಮಂಜು ಅರ್ಪಿಸುತ್ತಿರುವ ಗುಜ್ಜಾಲ್ ಪುರುಷೋತ್ತಮ್ ಅವರ ಗುಜ್ಜಾಲ್ ಟಾಕೀಸ್ ಬ್ಯಾನರ್ ನಡಿ ಸಿನಿಮಾ ತಯಾರಾಗುತ್ತಿದೆ. 

ಈ ತಿಂಗಳಲ್ಲಿ ಸಿನಿಮಾದ ಮುಹೂರ್ತ ನಡೆಯಲಿದ್ದು, ತಾಂತ್ರಿಕ ವಿಭಾಗದಲ್ಲಿ ಕೆಎಂ ಪ್ರಕಾಶ್ ಎಡಿಟಿಂಗ್, ಸಿನಿಮೆಟೋಗ್ರಾಫರ್ ಆಗಿ ಶೇಖರ್ ಚಂದ್ರು ಇದ್ದಾರೆ, ಸಂಗೀತ ನಿರ್ದೇಶಕರನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. 

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More