ಚಿಕ್ಕಬಳ್ಳಾಪುರ: ಅನ್‍ಲಾಕ್ ಆದ ಕಾರಣ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಬಳಿಯ ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ಪ್ರವಾಸಿಗರು ಲಗ್ಗೆಯಿಟ್ಟಿದ್ದಾರೆ. ಇದೇ ವೇಳೆ ಜೋಡಿಯೊಂದು ಕೊರೊನಾ ರೂಲ್ಸ್ ಬ್ರೇಕ್ ಮಾಡಿ ಸಾರ್ವಜನಿಕವಾಗಿ ಚುಂಬಿಸಿದ್ದಾರೆ.

ಬೆಳ್ಳಂ ಬೆಳ್ಳಗ್ಗೆ ಕಾರು ಹಾಗೂ ಬೈಕ್ ಗಳಲ್ಲಿ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿದ್ದು, ಮುಂಜಾನೆ ಚುಮು ಚುಮು ಚಳಿ ನಡುವೆ ಮೋಡಗಳ ಮಂಜಿನಾಟದ ಜೊತೆ ಪ್ರವಾಸಿಗರು ನಂದಿ ಗಿರಿಧಾಮದ ಸೌಂದರ್ಯ ಕಣ್ಣುತುಂಬಿಕೊಂಡಿದ್ದಾರೆ. ಕೊರೊನಾ ಅನ್ ಲಾಕ್ ಆದ ನಂತರ ಇದೇ ಮೊದಲ ಬಾರಿಗೆ ವೀಕೆಂಡ್ ಶನಿವಾರವಾದ್ದರಿಂದ ಇಂದು ಸಾವಿರಾರು ಮಂದಿ ನಂದಿಬೆಟ್ಟಕ್ಕೆ ಆಗಮಿಸಿದ್ದರು. ಇನ್ನೂ ನಮ್ಮ ನಡುವೆಯೇ ಕೊರೊನಾ ಮಹಾಮಾರಿ ಇದ್ದರೂ ಬಹುತೇಕ ಪ್ರವಾಸಿಗರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದರು.

ಮಾಸ್ಕ್ ಮರೆತ ಪ್ರವಾಸಿಗರು ನಂದಿಬೆಟ್ಟದಲ್ಲಿ ಮನಸ್ಸೋ ಇಚ್ಛೆ ಒಡಾಡಿದ್ದಾರೆ. ಹೇಳೋರು ಇಲ್ಲ, ಕೇಳೋರು ಇಲ್ಲ ಅಂತ ನಂದಿ ಬೆಟ್ಟದಲ್ಲೆಲ್ಲಾ ಅಲೆದಾಡಿ ಎಂಜಾಯ್ ಮಾಡಿದ್ದಾರೆ. ಇದೇ ವೇಳೆ ಜೋಡಿಯೊಂದು ಸಾರ್ವಜನಿಕ ಸ್ಥಳದಲ್ಲೇ ಚುಂಬನ ಮಾಡಿ ಅಸಭ್ಯ ವರ್ತನೆ ತೋರಿದೆ. ಮಾಸ್ಕ್ ಧರಿಸದೇ ನಂದಿಬೆಟ್ಟದಲ್ಲಿ ಅಲೆದಾಡಿ ಚುಂಬನ ಮಾಡಿದ ಜೋಡಿ ಕೊರೊನಾ ಬಗ್ಗೆ ತಾತ್ಸಾರ ತೋರಿದ್ದಾರೆ.

ಪ್ರವಾಸಿ ತಾಣಗಳು ಕೊರೊನಾ ಹರಡುವ ತಾಣಗಳಾಗಿ ಮಾರ್ಪಾಡಾಗುವ ಆತಂಕ ಕಾಡುತ್ತಿದ್ದು, ಪ್ರವಾಸಿಗರು ಮೈ ಮೆರಯಬೇಡಿ. ಮಾಸ್ಕ್ ಧಾರಣೆ ಮಾಡಿ ಎಚ್ಚರಿಕೆ ವಹಿಸಿ ಅಂತ ಸರ್ಕಾರ ಅಧಿಕಾರಿಗಳು ಹೇಳಿದ್ದರೂ ಪ್ರವಾಸಿಗರು ಮಾತ್ರ ಜಿದ್ದಿಗೆ ಬಿದ್ದವರಂತೆ ತಾವಾಯ್ತು, ತಮ್ಮ ಖುಷಿ ಆಯ್ತು ಅಂತ ಲೋಕದ ಕೊರೊನಾದ ಪರಿವೇ ಇಲ್ಲದಂತೆ ಒಡಾಡುತ್ತಿದ್ದಾರೆ. 800ಕ್ಕೂ ಹೆಚ್ಚು ಕಾರು ಹಾಗೂ ಸಾವಿರಕ್ಕೂ ಹೆಚ್ಚು ಬೈಕ್ ಗಳಲ್ಲಿ ಪ್ರವಾಸಿಗರ ಆಗಮಿಸಿದ್ದರು. ಇದನ್ನೂ ಓದಿ: ಕೊನೆಗೂ ಪೆಟ್ರೋಲ್ ನೂರರ ಗಡಿ ಕ್ರಾಸ್ ಮಾಡ್ತು – ಸೈಕಲ್ ಏರಿದ ಸನ್ನಿ ಲಿಯೋನ್

The post ನಂದಿಗಿರಿಧಾಮದಲ್ಲಿ ಪ್ರೇಮಿಗಳಿಂದ ಚುಂಬನ – ಕೊರೊನಾ ರೂಲ್ಸ್ ಬ್ರೇಕ್ appeared first on Public TV.

Source: publictv.in

Source link