ಕೊಲ್ಕತ್ತಾ: ವಿಧಾನಸಭಾ ಚುನಾವಣೆ ನಡೆದ ಪಂಚರಾಜ್ಯಗಳ ಪೈಕಿ ಒಂದಾದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಇದೀಗ ತಮ್ಮ ಹಳೆಯ ಕ್ಷೇತ್ರ ಭವಾನಿಪುರಕ್ಕೆ ಮರಳಲು ಸಜ್ಜಾಗಿದ್ದಾರೆ. ನಂದೀಗ್ರಾಮದಲ್ಲಿ ತನ್ನದೇ ಶಿಷ್ಯನಾಗಿದ್ದ ಸುವೇಂದು ಅಧಿಕಾರ ವಿರುದ್ಧ ನಿಂತು ಸ್ಪರ್ಧಿಸಿ ಸೋಲುಂಡ ಮಮತಾ ಬ್ಯಾನರ್ಜಿ ಇದೀಗ ತಮ್ಮ ಹಳೆಯ ಕ್ಷೇತ್ರ ಭವಾನಿಪುರದತ್ತ ಮುಖ ಮಾಡಿದ್ದಾರೆ.

ಇನ್ನು ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಟಿಎಂಸಿ ಶಾಸಕ ಸೋವಾಂಡೇಬ್ ಚಟರ್ಜಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು.. ನಾನು ಯಾವುದೇ ಒತ್ತಡದಿಂದ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ. ಈ ಆಸನ ಮಮತಾ ಬ್ಯಾನರ್ಜಿಯವರದು ಅವರಿಗಾಗಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಯೋಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಸೋವಾಂಡೇಬ್ ಚಟರ್ಜಿ ಹೇಳಿದ್ದಾರೆ.

ಇನ್ನು ಸೋವಾಂಡೇಬ್ ಚಟರ್ಜಿ ಸ್ವಯಂಪ್ರೇರಿತರಾಗಿ ಈ ನಿರ್ಧಾರ ತೆಗೆದುಕೊಂಡಿರುವುದರಿಂದ ಅವರ ರಾಜೀನಾಮೆಯನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಹೇಳಿದ್ದಾರೆ.

The post ನಂದಿಗ್ರಾಮದಲ್ಲಿ ಸೋಲುಂಡ ಮಮತಾ ಬ್ಯಾನರ್ಜಿ ‘ಘರ್ ವಾಪ್ಸಿ’ appeared first on News First Kannada.

Source: newsfirstlive.com

Source link