ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ 1,662 ಮತಗಳ ಅಂತರದಿಂದ ಗೆದ್ದಿದ್ದಾರೆ.

ಟಿಎಂಸಿಯಿಂದ ಹೊರ ಬಂದು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ ಮಧ್ಯೆ ಭಾರೀ ಸ್ಪರ್ಧೆ ನಡೆದಿತ್ತು. ಮತಿ ಎಣಿಕೆಯ ಆರಂಭದಿಂದ ಕೊನೆಯವರೆಗೂ ಈ ಕ್ಷೇತ್ರ ಬಾರಿ ಕುತೂಹಲ ಮೂಡಿಸಿತ್ತು. ಒಮ್ಮೆ ಮಮತಾ ಮುನ್ನಡೆ ಪಡೆದರೆ ಮತ್ತೊಂದು ಸುತ್ತಿನಲ್ಲಿ ಸುವೇಂದು ಅಧಿಕಾರಿ ಮುನ್ನಡೆ ಪಡೆಯುತ್ತಿದ್ದರು.

ಸುವೇಂದು ಅಧಿಕಾರಿಯನ್ನು ನಾನು ನಂದಿಗ್ರಾಮದಿಂದ ಸೋಲಿಸುತ್ತೇನೆ ಎಂದು ಮಮತಾ ಪ್ರತಿಜ್ಞೆ ಮಾಡಿದ್ದರು.

ಸದ್ಯದ ಟ್ರೆಂಡ್ ಪ್ರಕಾರ 213 ಕ್ಷೇತ್ರಗಳಲ್ಲಿ ಟಿಎಂಸಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 78 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ.

The post ನಂದಿ ಗ್ರಾಮದಲ್ಲಿ ಮಮತಾಗೆ ಸೋಲು – ಸುವೇಂದು ಅಧಿಕಾರಿಗೆ ಜಯ appeared first on Public TV.

Source: publictv.in

Source link