ವಿಶ್ವ ಟೆಸ್ಟ್​‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಗೆಲ್ಲುವುದಾಗಿ, ಇಂಗ್ಲೆಂಡ್ ಪರಿಸ್ಥಿತಿಗಳು ನ್ಯೂಜಿಲೆಂಡ್‌ಗೆ ಹೆಚ್ಚು ಅನುಕೂಲ ಮಾಡುವುದಾಗಿ ಕ್ರಿಕೆಟ್ ಪರಿಣಿತರು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ.

ಆದ್ರೆ, ಈ ಕುರಿತು ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ರಿತೀಂದರ್ ಸಿಂಗ್ ಸೋಧಿ, ವಿಶ್ವ ಕ್ರಿಕೆಟ್​​ ಅನ್ನು ಟೀಮ್‌ ಇಂಡಿಯಾ ಆಳುತ್ತಿದೆ ಎಂಬುವುದನ್ನ ಕೊಹ್ಲಿ ಫ್ರೂವ್ ಮಾಡಲಿದ್ದಾರೆ ಅಂತ ತಿಳಿಸಿದದ್ದಾರೆ.

ವಿರಾಟ್​ಗೆ ಕೋಪ ಎಂದು ನೀವು ಹೇಳಿದ್ದೀರಿ. ನಾನು ಮತ್ತೊಂದು ಪದವನ್ನು ಸೇರಿಸುತ್ತೇನೆ. ಕೋಪದಲ್ಲಿರುವ ಸಕಾರಾತ್ಮಕ ವ್ಯಕ್ತಿ ಎಂದು ನಾನು ಹೇಳಲು ಬಯಸುತ್ತೇನೆ. ಇಡೀ ವಿಶ್ವದಲ್ಲಿಯೇ ಟೀಮ್ ಇಂಡಿಯಾ ನಂ.1 ತಂಡವೆಂದು ಏಕೆ ಕರೆಯುತ್ತಾರೆಂದು ಕೊಹ್ಲಿ ಸಾಬೀತುಪಡಿಸಲು ಅಗತ್ಯವಿದೆ. ತಂಡದಲ್ಲಿ ಹೋರಾಟದ ಮನೋಭಾವವನ್ನ ವಿರಾಟ್​, ಶಾಸ್ತ್ರಿ ಹುಟ್ಟುಹಾಕಿದ್ದಾರೆ.

ಕಳೆದ ಆಸ್ಟ್ರೇಲಿಯಾ ಸರಣಿಯಲ್ಲಿ ಟೀಮ್ ಇಂಡಿಯಾ ಆರಂಭಿಕ ಪಂದ್ಯ ಸೋತಿದ್ದರೂ ಮನೋಸ್ಥೈರ್ಯ ಕುಗ್ಗಿರಲಿಲ್ಲ. ಎಂತಹ ಸನ್ನಿವೇಶ ಎದುರಾಗಿದ್ದರೂ ಕೂಡ ಕಠಿಣ ಹೋರಾಟ ನಡೆಸಿ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಈಗಲೂ ಅಷ್ಟೇ, ಇಂಗ್ಲೆಂಡ್‌ ಪ್ರವಾಸದಲ್ಲಿ ಕೊಹ್ಲಿ ಬಳಗ ಪ್ರಾಬಲ್ಯ ಸಾಧಿಸುವ ಎಲ್ಲಾ ಅವಕಾಶಗಳು ಎದ್ದು ಕಾಣುತ್ತಿವೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

The post ನಂ.1 ತಂಡ ಅಂತ ಯಾಕೆ ಕರೀತಾರೆ..?- ಕೊಹ್ಲಿಗೆ ಉತ್ತರಿಸೋ ಸಮಯ ಬಂದಿದೆ appeared first on News First Kannada.

Source: newsfirstlive.com

Source link