ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡ್ತಿದ್ದ ಆರೋಪಿ ಅರೆಸ್ಟ್​, 6 ಬೈಕ್ ಜಪ್ತಿ

ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡ್ತಿದ್ದ ಆರೋಪಿ ಅರೆಸ್ಟ್​, 6 ಬೈಕ್ ಜಪ್ತಿ

ಬೆಂಗಳೂರು: ಕೆ.ಪಿ ಅಗ್ರಹಾರ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳನೊಬ್ಬನನ್ನು ಸೆರೆಹಿಡಿದಿದ್ದಾರೆ. ಸೈಯ್ಯದ್ ಅಹ್ಮದ್ (21) ಬಂಧಿತ ಆರೋಪಿ.

ಈತ ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಬಂಧಿತನಿಂದ 2.60 ಲಕ್ಷ ಮೌಲ್ಯದ 6 ದ್ವಿಚಕ್ರ ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಬಂಧನದಿಂದ ಮಾಗಡಿರೋಡ್, ತಲಘಟ್ಟಪುರ, ಸುಬ್ರಹ್ಮಣ್ಯ ನಗರ ಹಾಗೂ ಕೆ.ಪಿ ಅಗ್ರಹಾರ ಠಾಣೆಯ 6 ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.

The post ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡ್ತಿದ್ದ ಆರೋಪಿ ಅರೆಸ್ಟ್​, 6 ಬೈಕ್ ಜಪ್ತಿ appeared first on News First Kannada.

Source: newsfirstlive.com

Source link