ನಕಲಿ ಛಾಪಾ ಕಾಗದ ಅಷ್ಟೇ ಅಲ್ಲ ನ್ಯಾಯಾಲಯದ ಸೀಲ್ ಸಹ ನಕಲಿ; ವಿಚಾರಣೆ ವೇಳೆ ಭಯಾನಕ ಮಾಹಿತಿ ಬಿಚ್ಚಿಟ್ಟ ಆರೋಪಿಗಳು | Stamp paper case Accused also involved in fake court seal in bengaluru


ನಕಲಿ ಛಾಪಾ ಕಾಗದ ಅಷ್ಟೇ ಅಲ್ಲ ನ್ಯಾಯಾಲಯದ ಸೀಲ್ ಸಹ ನಕಲಿ; ವಿಚಾರಣೆ ವೇಳೆ ಭಯಾನಕ ಮಾಹಿತಿ ಬಿಚ್ಚಿಟ್ಟ ಆರೋಪಿಗಳು

ಹುಸೇನ್ ಮೋದಿ ಬಾಬು ಮತ್ತು ಸೀಮಾ

ಬೆಂಗಳೂರು: ನಕಲಿ ಛಾಪಾ ಕಾಗದ (Stamp paper) ಮಾರಾಟದಿಂದ ಕೋಟಿ ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಗೋವಿಂದಪುರ ಪೊಲೀಸರ ವಿಚಾರಣೆ ವೇಳೆ ಭಯಾನಕ ಮಾಹಿತಿ ಬಿಚ್ಚಿಟ್ಟ ಆರೋಪಿಗಳು, ಛಾಪಾ ಕಾಗದ ಅಷ್ಟೇ ಅಲ್ಲ ನ್ಯಾಯಾಲಯದ ಸೀಲ್ ಸಹ ನಕಲಿ ಮಾಡಿರುವುದಾಗಿ ತಿಳಿಸಿದ್ದಾರೆ. ಇದೇ ಕಾರಣಕ್ಕೆ ಎಸ್​ಐಟಿ (SIT) ರಚನೆ ಮಾಡಿ ತನಿಖೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ.

ಹೈಕೋರ್ಟ್ ಆದೇಶದಂತೆ ಎಸ್​ಐಟಿ ರಚನೆ ಮಾಡಿದ್ದ ಪೂರ್ವ ವಿಭಾಗದ ಪೊಲೀಸರು, ನವೆಂಬರ್ 19 ರಂದು ನಕಲಿ ಛಾಪಾ ಕಾಗದ ಮಾರಾಟ ಮಾಡುತ್ತಿದ್ದ ಗುಂಪನ್ನು ಬಂಧಿಸಿದ್ದಾರೆ. ಈ ವೇಳೆ ಛಾಪ ಕಾಗದ ಅಷ್ಟೇ ಅಲ್ಲ ನ್ಯಾಯಾಲಯದ ಸೀಲ್​ಗಳನ್ನೇ ನಕಲು ಮಾಡಿರುವುದು ಬೆಳಕಿಗೆ ಬಂದಿದೆ. ಜಮೀನೊಂದರ ಜಡ್ಜ್ ಮೆಂಟ್ ಅನ್ನು ನಕಲು ಮಾಡಿ ಮಾರಾಟ ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಆರೋಪಿಗಳು ತಮಗೆ ಬೇಕಾದವರ ಹೆಸರಿಗೆ ತೀರ್ಪು ಬರೆದು ನ್ಯಾಯಾಲಯದ ಸೀಲ್‌ ನಕಲು ಮಾಡಿದ್ದಾರೆ. ತನಿಖೆಯಲ್ಲಿ ಈ ನಕಲಿ ಸೀಲ್ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಕೋಲಾರ‌ ಮತ್ತು ಬೆಂಗಳೂರು ಹೊರವಲಯದ ಸಬ್ ರಿಜಿಸ್ಟಾರ್​ನಲ್ಲಿ  ಅತಿ ಹೆಚ್ಚು ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ಕಾಲ್ ಲಿಸ್ಟ್​ನಲ್ಲಿ ಕೋಲಾರದ ಸಬ್ ರಿಜಿಸ್ಟಾರ್​ನ ಬ್ರೋಕರ್ ಜೊತೆ ಹುಸೇನ್ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ.

ಸದ್ಯ ಬೆಂಗಳೂರು ಹೊರವಲಯದ ಸಬ್ ರಿಜಿಸ್ಟರ್​ನ ಹಲವು ಬ್ರೋಕರ್​ಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹುಸೇನ್ ನಕಲಿ ಛಾಪಾ ಕಾಗದ ಕೋಲಾರ ಸಬ್ ರಿಜಿಸ್ಟರ್​ನಲ್ಲಿ ಬಳಕೆ ಮಾಡಲಾಗಿದೆ. ಅಲ್ಲದೇ ಸೂಕ್ತ ಮಾಹಿತಿ, ಬ್ರೋಕರ್​ಗಳ ವಿಚಾರಣೆ ಬಳಿಕ ಹಲವರ ಬಂಧನವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:
ನಕಲಿ ಛಾಪಾ ಕಾಗದ ಮಾರುತ್ತಿದ್ದ ಆರೋಪಿಗಳ ಬಂಧನ; ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದಲೇ ಡೀಲ್

ಬೆಂಗಳೂರು: ಎಸ್‌ಐಟಿ ತಂಡದಿಂದ 63 ಲಕ್ಷ ರೂ. ಮೌಲ್ಯದ ನಕಲಿ ಛಾಪಾ ಕಾಗದ ವಶ; ಐವರು ಆರೋಪಿಗಳ ಬಂಧನ

TV9 Kannada


Leave a Reply

Your email address will not be published. Required fields are marked *