ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲೀಗ ಭೂಮಿಗೆ ಭಾರೀ ಬೆಲೆ. ತುಂಡು ಭೂಮಿ ಸಿಕ್ಕರೂ ಸಾಕಪ್ಪ ಜೀವನ ಸೆಟಲ್​ ಆಗೋಗುತ್ತಂತೆ ಎಂದು ಎಷ್ಟೋ ಜನ ಸೈಟು, ಜಮೀನು ಮಾಡಲು ಮುಂದಾಗ್ತಾರೆ. ಹೀಗೆ ಹೊರಟ ಎಷ್ಟೋ ಜನ ಶಾರ್ಟ್​ಕಟ್​​ ಹುಡುಕ್ತಾರೆ. ಅಂಥವರು ನಕಲಿ ದಾಖಲೆ ಸೃಷ್ಟಿ ನಿಮ್ಮ ಸೈಟ್ ಮತ್ತು ಖಾಲಿ ಜಮೀನನ್ನೇ ಲಪಟಾಯಿಸಿಬಿಡುತ್ತಾರೆ ಹುಷಾರ್.

ಹೌದು, ನಗರದಲ್ಲಿ ಯಾರದ್ದೋ ಜಮೀನು ಖಾಲಿಯಿದ್ದರೂ, ಖಾಲಿ ಮನೆ ಮತ್ತು ನಿವೇಶನಗಳು ಕಂಡರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ರಿಜಿಸ್ಟ್ರಾರ್ ಮಾಡಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ನಿಮ್ಮ ಸೈಟ್​​ ಬೆಂಗಳೂರಿನಲ್ಲೇ ಇದ್ರೆ ಖಂಡಿತಾ ನೀವು ಸುದ್ದಿ ಓದಲೇಬೇಕು. ಸೈಟ್‌ ಮಾತ್ರವಲ್ಲ ಹಳೆಯ ಮನೆಗಳಿದ್ದರೂ ಎಚ್ಚರವಹಿಸಲೇಬೇಕು.

50-60 ವರ್ಷಗಳ ಹಿಂದಿನ ಮನೆಗಳು ನಿಮ್ಮ ಹಿರಿಕರ ಹೆಸರಿನಲ್ಲಿದ್ಯಾ? ಈ ಮನೆಗಳಲ್ಲಿ ಯಾರೂ ವಾಸವಿಲ್ಲವೇ? ಯಾವುದೇ ರಾಜ್ಯದಲ್ಲಿ ನಿಮ್ಮ ಸೈಟ್ ಇದೆಯೇ? ಜಮೀನು ಖರೀದಿಸಿ ಬೇರೆ ಎಲ್ಲಾದರೂ ವಾಸಿಸುತ್ತಿದ್ದೀರಾ? ಹಾಗಾದರೇ ಈ ಕೂಡಲೇ ಈ ಕೆಲಸ ಮಾಡಿ.

ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ, ನಿಮ್ಮ ಜಮೀನು ಸೇಫ್​ ಮಾಡಿ. ಇಂತಹ ಖಾಲಿ ಜಾಗಗಳೇ ಇವರ ಟಾರ್ಗೆಟ್​​. ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ಆಸ್ತಿಗೆ ಮಾಲೀಕರಾಗುತ್ತಾರೆ. ನಕಲಿ ದಾಖಲೆ ಸೃಷ್ಟಿಸಿ ಇದು ನಮ್ಮದೇ ಆಸ್ತಿ ಎಂದು ಕೋರ್ಟ್​ ಮೆಟ್ಟಿಲೇರುತ್ತಾರೆ. ಆಗ ಕೇಸ್​ ವಿಚಾರಣೆಯಲ್ಲಿ ಅವರು ಗೆದ್ದರೆ ಅವರದ್ದೇ ಜಮೀನು. ಇಂತಹ 70ಕ್ಕೂ ಹೆಚ್ಚು ಪ್ರಕರಣಗಳು ಈಗ ಬಯಲಿಗೆ ಬಂದಿವೆ. ಹಲಸೂರು ಪೊಲೀಸ್​ ಠಾಣೆಯಲ್ಲಿ ಇಂತಹದೊಂದು ಪ್ರಕರಣ ದಾಖಲಾಗಿದೆ. ಕೋರ್ಟ್​ ಆದೇಶದ ಮೇರೆಗೆ ಪೊಲೀಸರು ನಡೆಸಿದ ತನಿಖೆಯಲ್ಲಿ ಈ 70 ಪ್ರಕರಣಗಳು ಕಂಡು ಬಂದಿವೆ.

The post ನಕಲಿ ದಾಖಲೆ ಸೃಷ್ಟಿಸಿ ನಿಮ್ಮ ಮನೆ, ಸೈಟು, ಜಮೀನನ್ನೇ ಲಪಟಾಯಿಸ್ತಾರೆ.. ಎಚ್ಚರ.. ಎಚ್ಚರ.. appeared first on News First Kannada.

Source: newsfirstlive.com

Source link