ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ ಆರೋಪ; ಪ್ರಕರಣದ ತನಿಖೆ ಎಸಿಬಿಗೆ ವಹಿಸಿದ ಕಂದಾಯ ಸಚಿವ | R Ashok handovers Land Acquisition Case SC ST Land in Bengaluru Rural to ACB


ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ ಆರೋಪ; ಪ್ರಕರಣದ ತನಿಖೆ ಎಸಿಬಿಗೆ ವಹಿಸಿದ ಕಂದಾಯ ಸಚಿವ

ಸಚಿವ ಆರ್ ಅಶೋಕ್

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಭೂಕಬಳಿಕೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಹೊಸಕೋಟೆ ತಾಲೂಕಿನ ಸರ್ವೆ ನಂಬರ್ 9 ರಲ್ಲಿ ಭೂಮಿ ಕಬಳಿಕೆ ಮಾಡಲಾಗಿದೆ. 261 ಎಕರೆ ಸರ್ಕಾರಿ ಭೂಮಿ ಪೈಕಿ 200 ಎಕರೆ ಜಮೀನು ಹಂಚಿಕೆಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪ ಕೇಳಿಬಂದಿದೆ. ಎಸ್​ಸಿ, ಎಸ್​ಟಿ ಸಮುದಾಯದವರಿಗೆ ಹಂಚಿಕೆಮಾಡಿದ್ದ ಭೂಮಿಯಲ್ಲಿ ಭೂಮಾಲೀಕರನ್ನು ಹೊರಹಾಕಿ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಆರೋಪ ಕೇಳಿಬಂದಿದೆ.

ಪರಿಷತ್​ನಲ್ಲಿ ಬಿಜೆಪಿ ಸದಸ್ಯ ರಘುನಾಥ್ ಮಲ್ಕಾಪುರೆ ಹೇಳಿಕೆ ನೀಡಿದ್ದಾರೆ. ಭೂಕಬಳಿಕೆ ಆಗಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಬಂದಿದೆ. ವಿಧಾನಪರಿಷತ್​ನಲ್ಲಿ ಕಂದಾಯ ಸಚಿವ ಆರ್.ಅಶೋಕ್​ ಹೇಳಿಕೆ ನೀಡಿದ್ದಾರೆ. ಎಸ್​ಸಿ, ಎಸ್​ಟಿಯವರಿಗೆ ಸರ್ಕಾರ ನೀಡಿದ್ದ ಭೂಮಿ ಕಬಳಿಸಿದ್ದಾರೆ. ಭೂಕಬಳಿಕೆ ಪ್ರಕರಣವನ್ನು ಎಸಿಬಿ ತನಿಖೆಗೆ ವಹಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *