ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಚಲಾಯಿಸುತಿದ್ದ ಯುವಕ ಪತ್ತೆ; ತನ್ನದಲ್ಲದ ತಪ್ಪಿಗೆ ಸಾವಿರಾರು ರೂಪಾಯಿ ದಂಡ ಕಟ್ಟುತ್ತಿದ್ದ ಅಸಲಿ ಮಾಲಿಕ | Police found Young boy who has driving a bike using a fake number plate in Bengaluru


ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಚಲಾಯಿಸುತಿದ್ದ ಯುವಕನನ್ನು ಮಾಗಡಿ ರಸ್ತೆ ಸಂಚಾರಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಚಲಾಯಿಸುತಿದ್ದ ಯುವಕ ಪತ್ತೆ; ತನ್ನದಲ್ಲದ ತಪ್ಪಿಗೆ ಸಾವಿರಾರು ರೂಪಾಯಿ ದಂಡ ಕಟ್ಟುತ್ತಿದ್ದ ಅಸಲಿ ಮಾಲಿಕ

ಸಾಂಧರ್ಬಿಕ ಚಿತ್ರ

ಬೆಂಗಳೂರು: ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಚಲಾಯಿಸುತಿದ್ದ ಯುವಕನನ್ನು ಮಾಗಡಿ ರಸ್ತೆ ಸಂಚಾರಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಯುವಕ ರಾಮ್ ಗೋಪಾಲ್ ಎಂಬಾತ ನಾಲ್ಕು ವರ್ಷ ನಕಲಿ ನಂಬರ್ ಬಳಕೆ ಮಾಡುತ್ತಿದ್ದನು. ಆರೋಪಿ ಒಂದೇ ಕಂಪನಿಯ, ಒಂದೇ ಬಣ್ಣದ ಬೈಕ್ ನಂಬರ್ ನಕಲು ಮಾಡಿದ್ದನು. 2018ರಿಂದ ಈವರೆಗೂ ಅದೇ ನಂಬರ್ ಬಳಸಿ ಈಗ ಸಿಕ್ಕಿಬಿದ್ದಿದ್ದಾನೆ.

ಆರೋಪಿ ಸುಮಾರು 11 ಸಾವಿರ ಮೊತ್ತದಷ್ಟು ನಿಯಮ ಉಲ್ಲಂಘನೆ ಮಾಡಿದ್ದಾನೆ. ಇದರಿಂದ ಅಸಲಿ ನಂಬರ್ ಮಾಲೀಕ ತನಗೆ ಅರಿವಿಲ್ಲದೆ ದಂಡ ಪಾವತಿಸಿದ್ದನು. ಆದರೆ ಇಂದು ಆಗಸ್ಟ್ 12 ನಕಲಿ ನಂಬರ್​ನ ಈ ಗಾಡಿ ಸಂಚಾರದ ಬಗ್ಗೆ ಮಾಗಡಿ ರಸ್ತೆ ಸಂಚಾರಿ ಪೊಲೀಸರಿಗೆ ಮಾಹಿತಿ ದೊರೆತಿತ್ತು.

ಮಾಹಿತಿ ಆಧರಿಸಿ ಮಾಗಡಿ ರಸ್ತೆ ಸಂಚಾರಿ ಪೊಲೀಸರಾದ ಸಬ್ ಇನ್ಸ್ ಪೆಕ್ಟರ್ ನಾಗನಗೌಡ, ಪಿಸಿ ಮಹೇಶ್ ಕಾಂಬ್ಳೆ ಗಾಡಿ ಪತ್ತೆ ಮಾಡಿದ್ದಾರೆ. ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಗಾಡಿ ಸಂಚಾರಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಆರೋಪಿ ರಾಮ್ ಗೊಪಾಲ್ ವಿರುದ್ದ ಕೆಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಸಲಿಗೆ ಆರೋಪಿ ರಾಮ್ ಗೋಪಾಲ್ 2016ರಲ್ಲಿ ತನ್ನ ಬೈಕ್ ಕಳೆದೋಗಿದೆ ಎಂದು ಸ್ಥಳೀಯ ಠಾಣೆಗೆ ದೂರು ನೀಡಿದ್ದನು. ಈ ವೇಳೆ ಆರೋಪಿ ಬೈಕ್ ಇನ್ಸುರೆನ್ಸ್ ಕ್ಲೈಮ್ ಸಹ ಮಾಡಿಕೊಂಡಿದ್ದನು. ಬಳಿಕ 2018ರಲ್ಲಿ ಕಳುವಾಗಿದ್ದ ಬೈಕ್ ಸಿಕ್ಕಿತ್ತು.

ಈ ಕುರಿತು ಯಾರಿಗೂ ಮಾಹಿತಿ ನೀಡದೇ ಆ ಗಾಡಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೆಪಿ ಅಗ್ರಹಾರ ಪೊಲೀಸರು ನೋಟಿಸ್ ನೀಡಿದ್ದಾರೆ.

ಅಕ್ಕಿ ತುಂಬಿದ ಲಾರಿ ಹಾಗೂ ಟಿಪ್ಪರ್ ನಡುವೆ ಅಪಘಾತ
ಉತ್ತರ ಕನ್ನಡ: ಅಕ್ಕಿ ತುಂಬಿದ ಲಾರಿ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿರುವ ಘಟನೆ ಹೊನ್ನಾವರ ತಾಲೂಕಿನ ಅಗ್ರಹಾರ ಬಳಿ ನಡೆದಿದೆ.

ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮೂವರಿಗೆ ಗಾಯವಾಗಿದೆ. ಬಲಿಯಾ ಸುಕ್ರು ಗೌಡ ಮೃತ ಕಾರ್ಮಿಕ. ಹೊನ್ನಾವರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅನೇಕಲ್‌ನ ಚಿನ್ನಯ್ಯಪಾಳ್ಯದಲ್ಲಿ ಕೆರೆಗೆ ಬಿದ್ದ ಕಾರು; 2 ನಾಪತ್ತೆ
ಆನೇಕಲ್: ಅನೇಕಲ್‌ನ ಚಿನ್ನಯ್ಯಪಾಳ್ಯದಲ್ಲಿ ಕಾರವೊಂದು ಕೆರೆಗೆ ಬಿದ್ದಿದ್ದು, ಕಾರಿನಲ್ಲಿದ್ದ 5 ವಿದ್ಯಾರ್ಥಿಗಳು ಈಜಿ ದಡ ಸೇರಿದ್ದಾರೆ. 2 ನಾಪತ್ತೆಯಾಗಿದ್ದಾರೆ.

ಹುಲ್ಲಹಳ್ಳಿಯ ಕ್ರೈಸ್ಟ್ ಕಾಲೇಜ್​ನ 7 ಜನ ಡಿಗ್ರಿ ವಿದ್ಯಾರ್ಥಿಗಳು ಕುಡಿದು ವಾಹನ ಚಾಲನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೋಜು ಮಸ್ತಿಯಲ್ಲಿ ಅತಿವೇಗವಾಗಿ ಕಾರು ಚಲಾಯಿಸಿದ್ದಾರೆ. ಇದರಿಂದ ಕಾರು ನಿಯಂತ್ರಣ ತಪ್ಪಿ ಚಿನ್ನಯ್ಯನಪಾಳ್ಯದ ಭುಜಂಗ ದಾಸಯ್ಯನ ಕೆರೆಯಲ್ಲಿ ಉರುಳಿ ಬಿದ್ದಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *