ಅಲಿಘರ್: ಉತ್ತರ ಪ್ರದೇಶದ ಅಲಿಘರ್​ನಲ್ಲಿ ನಕಲಿ ಮದ್ಯ ಸೇವಿಸಿ 8 ಮಂದಿ ದುರ್ಮರಣವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ ಐವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಅಲಿಘರ್​ನ ಕಾರ್ಸಿಯ ಎಂಬಲ್ಲಿ ವ್ಯಾಪಾರಿಯೋರ್ವನಿಂದ ನಕಲಿ ಮದ್ಯವನ್ನು ಖರೀದಿಸಿ ಸೇವಿಸಿದ್ದರು ಎನ್ನಲಾಗಿದೆ. ಇನ್ನು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರು ಹಾಗೂ ಆಸ್ಪತ್ರೆಗೆ ದಾಖಲಾದವರೆಲ್ಲರೂ ಟ್ರಕ್​ಡ್ರೈವರ್​ಗಳು ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಬೆಳಗ್ಗೆ ಇಬ್ಬರು ಸಾವನ್ನಪ್ಪಿದ ವಿಚಾರ ಲುಧಿಯಾನ ಪೊಲೀಸ್ ಸ್ಟೇಷನ್​ಗೆ ಲಭ್ಯವಾಗಿದ್ದು ನಂತರ ಮತ್ತೆ 6 ಮಂದಿ ಸಾವನ್ನಪ್ಪಿದ ವಿಚಾರ ಬೆಳಕಿಗೆ ಬಂದಿದೆ ಎಂದು ಸ್ಥಳೀಯ ಡಿಐಜಿ ದೀಪಕ್ ಕುಮಾರ್ ಮಾಹಿತಿ ನೀಡಿದ್ದಾರೆ.

The post ನಕಲಿ ಮದ್ಯ ಸೇವಿಸಿ 8 ಮಂದಿ ದುರ್ಮರಣ; ಐವರು ಗಂಭೀರ appeared first on News First Kannada.

Source: newsfirstlive.com

Source link