ದಾವಣಗೆರೆ: ನಕಲಿ ವೈದ್ಯನ ಆಸ್ಪತ್ರೆ ಮೇಲೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ದಿಢೀರ್ ದಾಳಿ ಮಾಡಿದ್ದಾರೆ. ಅವಿನಾಶ್ ಎನ್.ಹೆಚ್ ಎಂಬಾತ ನಕಲಿ ವೈದ್ಯ ಅಂತಾ ಹೇಳಲಾಗಿದೆ.

ಅವಿನಾಶ್ ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದ. ಶೈಕ್ಷಣಿಕ ಅರ್ಹತೆ, ತಾಂತ್ರಿಕ ತರಬೇತಿ ಇಲ್ಲದೆ ಕ್ಲಿನಿಕ್ ನಡೆಸುತ್ತಿದ್ದಾನೆ ಅನ್ನೋ ಆರೋಪ ಇದೆ. ಅದರಂತೆ ಕೊರೊನಾ ರೋಗಿಗಳಿಗೂ ಚಿಕಿತ್ಸೆ ನೀಡುತ್ತಿರುವ ಆರೋಪ ಅವಿನಾಶ್ ವಿರುದ್ಧ ಕೇಳಿಬಂದಿತ್ತು.

ಈ ಆರೋಪ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ದಾಳಿ ಮಾಡಿದೆ. ದಾಳಿ ವೇಳೆ ಕೆಲವು ಸರ್ಟಿಫಿಕೇಟ್, ಮಾಸ್ಕ್ ಸ್ಯಾನಿಟೈಸರ್​ಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಮನೆಯಲ್ಲೇ ಔಷಧಿ ಇಟ್ಟು ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಎನ್ನಲಾಗಿದೆ.

The post ನಕಲಿ ವೈದ್ಯನ ಆಸ್ಪತ್ರೆ ಮೇಲೆ ದಿಢೀರ್ ದಾಳಿ ಮಾಡಿದ ಡಿಸಿ ಮಹಾಂತೇಶ್ ಬೀಳಗಿ appeared first on News First Kannada.

Source: newsfirstlive.com

Source link