ಬೆಂಗಳೂರು: ಕಿಡ್ನಿ ದಂಧೆಯಲ್ಲಿ ತೊಡಗಿದ್ದ ಮೋಸ್ಟ್​​ ವಾಂಟೆಂಡ್ ಕ್ರಿಮಿನಲ್​ವೊಬ್ಬ​​ನನ್ನು ಬೇಗೂರು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಇವನನ್ನ ಬಂಧಿಸದೇ ಇದ್ದಿದ್ರೆ ದೇಶಕ್ಕೆ ಮಾರಕವಾಗ್ತಿದ್ದ ಎನ್ನಲಾಗಿದೆ.

ರಾಜ್ಯ ರಾಜಧಾನಿಯಲ್ಲಿ ಪೊಲೀಸರು ಕಿಡ್ನಿ ದಂಧೆ ಜಾಲವನ್ನ ಭೇದಿಸಿದ್ದಾರೆ. ಡ್ರಗ್ಸ್ ಜೊತೆಗೆ ಕಿಡ್ನಿ ಖರೀದಿ ಹಾಗೂ ಮಾರಾಟದ ಜಾಹಿರಾತು ನೀಡಿ ಚೀಟಿಂಗ್ ಮಾಡ್ತಿದ್ದ ನೈಜೀರಿಯಾ ಮೂಲದ ಆರೋಪಿಯನ್ನ ಅರೆಸ್ಟ್​ ಮಾಡಿದ್ದಾರೆ. ಡ್ನೂಡಿಮ್ ಓಬಿನ್ನಾ ಕಿಂಗ್ ಲೈ ಬಂಧಿತ ಆರೋಪಿ. ಈತನಿಗಾಗಿ ಗುಜರಾತ್ ಪೊಲೀಸರು ಒಂದು ವರ್ಷದಿಂದ  ಹುಡುಕಾಟ ನಡೆಸಿದ್ದರು. ಕಿಡ್ನಿ ಹೆಸ್ರಲ್ಲಿ ಮೋಸ ಮಾಡುವ ಈ ಐನಾತಿ ಗ್ಯಾಂಗ್, ಒಂದು ವರ್ಷದಿಂದ ವಂಚನೆ ಜಾಲ ಆಪರೇಟ್ ಮಾಡ್ತಿತ್ತು. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯದಲ್ಲೂ ಆ್ಯಡ್ ತೋರಿಸಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಗುಜರಾತ್ ಪೊಲೀಸರು ಇದೀಗ ಖದೀಮನನ್ನು ಸೆರೆಹಿಡಿದ ಕರ್ನಾಟಕ ಪೊಲೀಸರಿಗೆ ಶಹಬ್ಬಾಸ್​​ಗಿರಿ ಕೊಟ್ಟಿದ್ದಾರೆ.

ಏನಿದು ದಂಧೆ? 
ಈ ಖತರ್ನಾಕ್ ಗ್ಯಾಂಗ್ ಕಿಡ್ನಿ ಮಾರಾಟ ಹಾಗು ಖರೀದಿ ಮಾಡುವ ನೆಪದಲ್ಲಿ ಜನರನ್ನ ಯಾಮಾರಿಸುತ್ತಿತ್ತು.  ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಮಾರಾಟ ಮತ್ತು ಖರೀದಿ ಮಾಡುವ ಬಗ್ಗೆ ಜಾಹಿರಾತು‌ ನೀಡುತ್ತಿದ್ದರು. ಜಾಹಿರಾತು ನೋಡಿ ಹಣ ಬೇಕಾದವರು ಕಿಡ್ನಿ ಮಾರಾಟ ಮಾಡಲು ಸಂಪರ್ಕ ಮಾಡುತ್ತಿದ್ದರು. ಹಾಗೇ ಕಿಡ್ನಿ ಬೇಕಾದವರೂ ಕೂಡ ಜಾಹಿರಾತು ನೋಡಿ ಸಂಪರ್ಕಿಸುತ್ತಿದ್ರು. ಈ ವೇಳೆ ಖದೀಮರು ವೈದ್ಯಕೀಯ ಪರೀಕ್ಷೆಯ ನೆಪದಲ್ಲಿ ಮುಂಗಡ ಹಣ ಪಡೆದು ವಂಚನೆ ಎಸಗುತ್ತಿದ್ರು ಎನ್ನಲಾಗಿದೆ. ಸದ್ಯ ಈ ದಂಧೆಯ ಕಿಂಗ್​ಪಿನ್​ನ ಸಹಚರ ಡ್ನೂಡಿಮ್ ಓಬಿನ್ನಾ ಕಿಂಗ್ ಲೈ ಬೇಗೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿಯಿಂದ ಮೂರು ಲ್ಯಾಪ್ ಟಾಪ್, ಹತ್ತು ಮೊಬೈಲ್ ಹಾಗೂ ಹಾರ್ಡ್ ಡಿಸ್ಕ್ ವಶಪಡಿಸಿಕೊಳ್ಳಲಾಗಿದೆ. ಈ ಗ್ಯಾಂಗ್ ಬ್ಯುಸಿನಸ್ ವೀಸಾದಡಿ ಭಾರತಕ್ಕೆ ಬಂದು ಕಿಡ್ನಿ ದಂಧೆ ನಡೆಸ್ತಿತ್ತು ಎನ್ನಲಾಗಿದೆ.

ಇನ್ನು ಆರೋಪಿಗಳ ಲ್ಯಾಪ್ ಟಾಪ್ ಚೆಕ್ ಮಾಡಿದಾಗ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಈ ತಂಡ ಇಡೀ ದೇಶಾದ್ಯಂತ ಜಾಹಿರಾತು ಕೊಟ್ಟು ಕೋಟ್ಯಾಂತರ ರೂಪಾಯಿ ಹಣ ವಂಚನೆ ಮಾಡಿರೋದು ಗೊತ್ತಾಗಿದೆ. ಲ್ಯಾಪ್​ಟಾಪ್ ನಲ್ಲಿ ಒಂದು ಸಾವಿರ ಮೇಲ್​​ಗಳು ಬಂದಿರೋದು ಪತ್ತೆಯಾಗಿದೆ. ಆರೋಪಿಗಳು ಒಬ್ಬೊಬ್ಬರಿಗೆ ಒಂದೊಂದು ನಂಬರ್ ಕೊಟ್ಟು ಪೋನ್ ಪೇ, ಗೂಗಲ್ ಪೇ ನಿಂದ ಹಣ ಪಡೆದಿದ್ದಾರೆ ಎನ್ನಲಾಗಿದೆ.

ಗುಜರಾತ್ ನಲ್ಲಿ ಒಬ್ಬರಿಗೆ ಕಿಡ್ನಿ ಸೇಲ್ ಮಾಡೋದಾಗಿ ಹೇಳಿ 12 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಾರೆಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಗುಜರಾತ್ ಪೊಲೀಸರು ಬೇಗೂರು ಪೊಲೀಸರನ್ನ ಸಂಪರ್ಕ ಮಾಡಿದ್ದಾರೆ. ಪೊಲೀಸರು ಆರೋಪಿಗಳ ಮೇಲ್ ಪರಿಶೀಲಿಸಿ ಪ್ರತಿಯೊಬ್ಬರನ್ನ ಸಂಪರ್ಕ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಕಿಡ್ನಿ ಖರೀದಿ ಹಾಗೂ ಮಾರಾಟ ನೆಪದಲ್ಲಿ ಫೇಕ್ ಇಮೇಲ್ ಐಡಿ ಕ್ರಿಯೇಟ್ ಮಾಡಿ, ನಂಬರ್ ಕೊಟ್ಟು ವಂಚನೆ ಎಸಗಿದ್ದಾರೆ. ದಂಧೆಯ ಪ್ರಮುಖ ಕಿಂಗ್​ಪಿನ್ ಆಂಧ್ರದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗ್ತಿದೆ.
ಸದ್ಯ ಇನ್ನಿತರ‌ ಸಹಚರಿಗಾಗಿ ಗುಜರಾತ್ ಹಾಗೂ ಕರ್ನಾಟಕ ಪೊಲೀಸರಿಂದ‌ ಹುಡುಕಾಟ ಮುಂದುವರೆದಿದೆ.

The post ನಗರದಲ್ಲಿ ಕಿಡ್ನಿ ಮಹಾಜಾಲ ಬಯಲು.. ಮೋಸ್ಟ್​ ವಾಂಟೆಂಡ್ ಕ್ರಿಮಿನಲ್​​ನ ಬಂಧಿಸಿದ ಬೇಗೂರು ಪೊಲೀಸ್​ appeared first on News First Kannada.

Source: newsfirstlive.com

Source link