ಬೆಂಗಳೂರು: ನಗರದಲ್ಲಿ ರೆಮ್ಡಿಸಿವಿರ್ ಮತ್ತು ಆಕ್ಸಿಜನ್ ಕೊರತೆ ಇದೆ. 100 ರೆಮ್ಡಿಸಿವಿರ್ ಕೇಳಿದರೆ 25 ಮಾತ್ರ ಪೂರೈಸುತ್ತಿದ್ದಾರೆ. ಬೇಡಿಕೆಯ ಶೇ.50 ರಷ್ಟು ಮಾತ್ರ ಆಕ್ಸಿಜನ್ ಲಭ್ಯವಿದೆ ಎಂದು ಫನಾ(Private Hospitals and Nursing Homes association) ಹೈಕೋರ್ಟ್ ಮುಂದೆ ಸ್ಫೋಟಕ ಮಾಹಿತಿಯನ್ನ ಬಿಚ್ಚಿಟ್ಟಿದೆ.

ಫನಾ ಅಧ್ಯಕ್ಷ ಡಾ. ಹೆಚ್.ಎಂ. ಪ್ರಸನ್ನ ಹೈಕೋರ್ಟ್​ ಮುಂದೆ ಈ ಕುರಿತು ಹೇಳಿಕೆ ನೀಡಿದ್ದು.. ಖಾಸಗಿ ಪೂರೈಕೆದಾರರಿಂದ ಆಕ್ಸಿಜನ್ ಖರೀದಿಸಲಾಗುತ್ತಿದೆ. ಮೂರ್ನಾಲ್ಕು ಪಟ್ಟು ಬೆಲೆಯೂ ಹೆಚ್ಚಳವಾಗಿದೆ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್​ ಮುಖ್ಯನ್ಯಾಯಮೂರ್ತಿ ಎ.ಎಸ್.ಒಕಾ.. ಈ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಅಭಿಪ್ರಾಯಪಟ್ಟರು. ಆಕ್ಸಿಜನ್, ರೆಮ್ಡಿಸಿವಿರ್ ಲಭ್ಯತೆ ಬಗ್ಗೆ ನಿತ್ಯ ಮಾಹಿತಿ ಪ್ರಕಟಿಸಬೇಕು. ಕೇಂದ್ರ ಸರ್ಕಾರದಿಂದ ಹಂಚಿಕೆಯಾದ 802 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸಬೇಕು. ರಾಜ್ಯ ಸರ್ಕಾರ ರೆಮ್ಡಿಸಿವಿರ್ ಪೂರೈಕೆ ಹೆಚ್ಚಿಸಬೇಕು ಎಂದು ‌ಸಿಜೆ‌ ಎ.ಎಸ್.ಒಕಾ ಹಾಗೂ ನ್ಯಾ. ಅರವಿಂದ್ ಕುಮಾರ್​ರವರ ಪೀಠ ಸೂಚನೆ ನೀಡಿತು.

The post ‘ನಗರದಲ್ಲಿ ರೆಮ್ಡಿಸಿವಿರ್, ಆಕ್ಸಿಜನ್ ಕೊರತೆ ಇದೆ’.. ಸ್ಫೋಟಕ ಮಾಹಿತಿ ಬಿಚ್ಚಿಟ್ಟ PHANA appeared first on News First Kannada.

Source: newsfirstlive.com

Source link