ನಗರಾಭಿವೃದ್ಧಿ ಇಲಾಖೆಯ ಸಿಬ್ಬಂದಿಗಳಿಂದ ಗುತ್ತಿಗೆದಾರರಿಗೆ ಶೋಷಣೆಯಾಗುತ್ತಿದೆ: ರಾಜ್ಯ ಗುತ್ತಿಗೆದಾರರ ಸಂಘದಿಂದ ನಗರಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ | State Contractors Association wrote a letter to Urban Development Authority Chief Secretary


ನಗರಾಭಿವೃದ್ಧಿ ಇಲಾಖೆ ಸಿಬ್ಬಂದಿ ಗುತ್ತಿಗೆದಾರರಿಗೆ ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆಂದು  ಗುತ್ತಿಗೆದಾರರ ಸಂಘ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.

ನಗರಾಭಿವೃದ್ಧಿ ಇಲಾಖೆಯ ಸಿಬ್ಬಂದಿಗಳಿಂದ ಗುತ್ತಿಗೆದಾರರಿಗೆ ಶೋಷಣೆಯಾಗುತ್ತಿದೆ: ರಾಜ್ಯ ಗುತ್ತಿಗೆದಾರರ ಸಂಘದಿಂದ ನಗರಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ

ರಾಜ್ಯ ಗುತ್ತಿಗೆದಾರರ ಸಂಘ

ಬೆಂಗಳೂರು: ನಗರಾಭಿವೃದ್ಧಿ ಇಲಾಖೆ (Urban Development Authority) ಸಿಬ್ಬಂದಿ ಗುತ್ತಿಗೆದಾರರಿಗೆ ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆಂದು ರಾಜ್ಯ ಗುತ್ತಿಗೆದಾರರ ಸಂಘ (Karnataka State Contractors Association) ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ರಾಜ್ಯದಲ್ಲಿ 40% ಪರ್ಸೇಂಟೇಜ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಗುತ್ತಿಗೆದಾರರ ಸಂಘವೇ ಇದೀಗ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ನಗರಾಭಿವೃದ್ಧಿ ಇಲಾಖೆಯ ಸಿಬ್ಬಂದಿಗಳಿಂದ ಗುತ್ತಿಗೆದಾರರಿಗೆ ಶೋಷಣೆಯಾಗುತ್ತಿದೆ. ಟೆಂಡರ್ ಅಪ್ರ್ಯೂವಲ್​ಗೆ ಹೋಗುವ ಪ್ರತಿ ಕಡತಗಳನ್ನು ಸಿಎಂ ಬೊಮ್ಮೋಯಿ ಕಚೇರಿಗೆ ಕಳುಹಿಸಲು ನಗರಾಭಿವೃದ್ಧಿ ಇಲಾಖೆಯ ಕೇಸ್ ವರ್ಕರ್ಸ್​ಗಳಿಂದ ಪರ್ಸೇಂಟೇಜ್ ವಸೂಲಿ ಮಾಡಲಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೆಲಸ ಮಾಡಲು ಗುತ್ತಿಗೆದಾರರಿಗೆ ಆಮಿಷ ಒಡ್ಡುತ್ತಿದ್ದು, ಕೆಲ ಪ್ರಕರಣಗಳಲ್ಲಿ ನಗರಾಭಿವೃದ್ಧಿ ಇಲಾಖೆ ಸಿಬ್ಬಂದಿ ಗುತ್ತಿಗೆದಾರರಿಗೆ ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆಂದು. ಲಂಚ ನೀಡದೆ ಹೋದರೆ ಕಡತಗಳನ್ನು ಸಿಬ್ಬಂದಿಗಳು ರವಾನೆ ಮಾಡುವುದಿಲ್ಲವೆಂದು ಪತ್ರ ಬರೆದಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.