ಕುತೂಹಲ ಮೂಡಿಸಿದ ಸಿಎಂ ತಡರಾತ್ರಿ ಸಭೆ
ಸಿಎಂ ಯಡಿಯೂರಪ್ಪ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ವೇಳೆ ಕರ್ನಾಟಕ ಭವನದಲ್ಲಿ ಸಿಎಂ ಬಿಎಸ್​ವೈ ಮತ್ತು ವಿಜಯೇಂದ್ರ ಮಹತ್ವದ ಮಾತುಕತೆ ನಡೆಸಿದ್ದಾರೆ. ಮೋದಿ ಜೊತೆಗಿನ ಮಾತುಕತೆ ಕುರಿತು ಚರ್ಚಿಸಲಾಗಿದೆ ಎನ್ನಲಾಗಿದ್ದು, ಸಭೆಯಲ್ಲಿ ಸಿಎಂ ಬಿಎಸ್​ವೈ ಆಪ್ತರಾದ ಲೆಹರ್ ಸಿಂಗ್, ಶಂಕರ್ ಗೌಡ ಪಾಟೀಲ್, ಯಡಿಯೂರಪ್ಪ ಮೊಮ್ಮಗ ಶಶಿಧರ್ ಮರಡಿ ಕೂಡ ಭಾಗಿಯಾಗಿದ್ದಾರೆ. ಇನ್ನು ಕರ್ನಾಟಕ ಭವನದ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ನಡೆದ ಈ ತಡರಾತ್ರಿಯ ಸಭೆ ತೀವ್ರ ಕುತೂಹಲ ಮೂಡಿಸಿದೆ.

ಉನ್ನತ ಹುದ್ದೆಗಾಗಿ ಶ್ರೀರಾಮುಲು ಕಸರತ್ತು?
ರಾಜ್ಯದಲ್ಲಿ ಎಲೆಕ್ಷನ್ ಕ್ಯಾಬಿನೆಟ್ ರಚನೆಯಾಗುವ ಬಗ್ಗೆ ಚರ್ಚೆಯಾಗ್ತಿದ್ದು, ಈ ವೇಳೆ ಉನ್ನತ ಹುದ್ದೆಗಾಗಿ ಸಚಿವ ಬಿ.ಶ್ರೀರಾಮುಲು ಕಸರತ್ತು ನಡೆಸಿದ್ದಾರೆ ಅಂತ ಹೇಳಲಾಗುತ್ತಿದೆ. ಸಿಎಂ ಬಿಎಸ್​ವೈ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಂತೆ, ಇತ್ತ ಸಚಿವ ಶ್ರೀರಾಮುಲು‌ ಟೆಂಪಲ್ ರನ್ ಆರಂಭಿಸಿದ್ದಾರೆ. ನಿನ್ನೆ ಕೇರಳದ ಶಬರಿ‌ಮಲೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಎಲೆಕ್ಷನ್ ಕ್ಯಾಬಿನೆಟ್‌ ರಚನೆಯಾದ್ರೆ, ಡಿಸಿಎಂ ಹುದ್ದೆಗಾಗಿ ಚಿತ್ತ ಹರಿಸಿರುವ ರಾಮುಲು, ತಮ್ಮ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆಯಿಂದ ಶಬರಿಮಲೆಗೆ ಭೇಟಿ ನೀಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

‘ಬಡತನದ ಕಾರಣಕ್ಕೆ ಶಿಕ್ಷಣ ವಂಚಿತರಾಗಬಾರದು’
ರಾಜ್ಯದ ಅನೇಕ ಮಕ್ಕಳಿಗೆ ಅನ್​ಲೈನ್​ ಕ್ಲಾಸ್ ಸಿಗುತ್ತಿಲ್ಲ ಎಂಬುದನ್ನ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನ ಹೈಕೋರ್ಟ್ ವಿಭಾಗೀಯ ಪೀಠ ನಡೆಸಿದೆ. ಬಡಮಕ್ಕಳಿಗೆ ಆನ್​ಲೈನ್​ ಕ್ಲಾಸ್​, ಉಚಿತ ನೆಟ್, ಟ್ಯಾಬ್ & ಲ್ಯಾಪ್ ಟಾಪ್ ಕೋರಿ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಸಲಾಗಿತ್ತು. ಈ ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್ ಬಡತನದ ಕಾರಣಕ್ಕೆ ಮಕ್ಕಳು ಆನ್​ಲೈನ್​ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಮುಂದುವರಿಕೆ ನಿಲ್ಲಿಸಲು ಬಡತನ ಕಾರಣವಾಗಬಾರದು. ಶಾಲೆಗಳನ್ನು ಪುನಾರಂಭಿಸುವ ನಿರ್ಧಾರ ಮಾತ್ರ ಲೆಕ್ಕಿಸದೆ, ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸುವ ತುರ್ತು ಅವಶ್ಯಕತೆಯಿದೆ ಅಂತಾ ಸೂಚಿಸಿದೆ.

ನಾಳೆ ಸರ್ವಪಕ್ಷಗಳ ಸಭೆ ಕರೆದ ಓಂ ಬಿರ್ಲಾ
ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಮುನ್ನ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ನಾಳೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಎನ್‌ಡಿಎ ಒಕ್ಕೂಟದ ನಾಯಕರ ಸಭೆಯೂ ನಾಳೆಯೇ ನಿಗದಿಯಾಗಿದೆ. ಜುಲೈ 19 ರಿಂದ ಆರಂಭವಾಗಲಿರುವ ಲೋಕಸಭೆ ಅಧಿವೇಶನ ಆಗಸ್ಟ್‌ 13ರವರೆಗೆ ನಡೆಯಲಿದೆ

ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಈ ಭಾರತೀಯ
ಭಾರತದ ಮೊದಲ ವ್ಯಕ್ತಿ ಬಾಹ್ಯಾಕಾಶಕ್ಕೆ ಹೋಗಲು ಸಜ್ಜಾಗಿದ್ದು, ಸಂತೋಷ್ ಜಾರ್ಜ್ ಕುಲಂಗರ ಎಂಬ ಕೇರಳದ ಪ್ರವಾಸಿಗ ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ. ಇವರು ರಿಚರ್ಡ್ ಬ್ರಾನ್ಸನ್‌ರ ವರ್ಜಿನ್ ಗ್ಯಾಲಕ್ಟಿಕ್‌ನಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮ ಕಾರ್ಯಕ್ರಮದ ಭಾಗವಾಗಿ ಟಿಕೆಟ್ ಕಾಯ್ದಿರಿಸಿದ್ದಾರೆ. ಬಾಹ್ಯಾಕಾಶಯಾನಕ್ಕಾಗಿ ಟಿಕೆಟ್ ಕಾಯ್ದಿರಿಸಿದ ಏಕೈಕ ಭಾರತದ ವ್ಯಕ್ತಿ ಸಂತೋಷ್ ಜಾರ್ಜ್. ಸಂತೋಷ್ 2007ರಿಂದ ಬಾಹ್ಯಾಕಾಶ ಪ್ರಯಾಣಕ್ಕೆ ಪ್ರಯತ್ನಪಟ್ಟಿದ್ದು, ಈಗ ಅವಕಾಶ ಸಿಕ್ಕಿದೆ. ಜೊತೆಗೆ ಭಾರತದಿಂದ ಹಾರುವ ಮೊದಲ ಬಾಹ್ಯಾಕಾಶ ಪ್ರವಾಸಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.

ಯುವತಿಯರ ಪಟ್ಟಿ ಕೇಳಿದ ತಾಲಿಬಾನಿಗಳು
ಅಫ್ಘಾನಿಸ್ತಾನದಲ್ಲಿ ತಾಲಿಬಾನಿ​ಗಳ ಉಪಟಳ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಇದೀಗ 15 ವರ್ಷಕ್ಕಿಂತ ಮೇಲ್ಪಟ್ಟ ಬಾಲಕಿಯರು ಹಾಗೂ 45 ವರ್ಷದೊಳಗಿನ ವಿಧವೆಯರ ಪಟ್ಟಿಯನ್ನ ಕೊಡುವಂತೆ ಸ್ಥಳೀಯ ಧಾರ್ಮಿಕ ಮುಖಂಡರಿಗೆ ತಾಲಿಬಾನ್ ನಾಯಕರು ಸೂಚಿಸಿದ್ದಾರೆ ಎನ್ನಲಾಗ್ತಿದೆ. ತಾಲಿಬಾನಿಗಳನ್ನ ಮದುವೆಯಾಗೋದಕ್ಕೆ ಈ ಯುವತಿಯರ ಪಟ್ಟಿ ನೀಡುವಂತೆ ತಾಕೀತು ಮಾಡಲಾಗಿದೆ. ಮದುವೆಯಾಗಿ ಪಾಕಿಸ್ತಾನದ ವಾಜಿರಿಸ್ತಾನಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದು, ಅಲ್ಲಿ ಅವರನ್ನು ಇಸ್ಲಾಂಗೆ ಮತಾಂತರಗೊಳಿಸುತ್ತೇವೆ ಎಂದಿದ್ದಾರೆ ಎನ್ನಲಾಗಿದೆ.

ಚಿನ್ನ ಬಳಸಿ ಫ್ರೆಂಚ್ ಫ್ರೈಸ್ ತಯಾರಿ
ರಾಷ್ಟ್ರೀಯ ಫ್ರೆಂಚ್ ಫ್ರೈಡೇ ಹಿನ್ನಲೆ ನ್ಯೂಯಾರ್ಕ್​ನ ಶೆಫ್​ಗಳು, ಚಿನ್ನದ ಧೂಳಿನ ಫ್ರೆಂಚ್ ಫ್ರೈಸ್ ತಯಾರಿಸಿ ಹೊಸ ಗಿನ್ನಿಸ್ ದಾಖಲೆಯನ್ನ ಬರೆದಿದ್ದಾರೆ. ಶೆಫ್ ಜೋ ಹಾಗೂ ಶೆಫ್ ಫ್ರೆಡ್ಡಿ ಈ ಹೊಸ ರೀತಿಯ ಫ್ರೆಂಚ್ ಫ್ರೈಸ್ ತಯಾರಿಸಿದ್ದು, ಇದಕ್ಕೆ ಕ್ರೀಮ್ ಡೆಲಾ ಕ್ರೀಮ್ ಪೊಮ್ಮೆ ಫ್ರೈಟ್ಸ್ ಎಂದು ಹೆಸರಿಡಲಾಗಿದೆ. ಈ ಫ್ರೆಂಚ್ ಫ್ರೈಸ್ ನಲ್ಲಿ ತಿನ್ನಬಹುದಾದ ಗೋಲ್ಡ್ ಬಳಸಲಾಗಿದ್ದು, ಇದರ ಬಲೆ 15 ಸಾವಿರ ಅಂತ ಹೇಳಲಾಗಿದೆ.

ಫೇಸ್​ಬುಕ್​ನ​ 52 ಉದ್ಯೋಗಿಗಳ ವಜಾ
ಬಳಕೆದಾರರ ಡೇಟಾವನ್ನು ದುರುಪಯೋಗ ಪಡೆದುಕೊಂಡಿದ್ದಕ್ಕಾಗಿ ಫೇಸ್​ಬುಕ್​ನ​ 52 ಉದ್ಯೋಗಿಗಳನ್ನು ವಜಾಗೊಳಿಸಿದೆ. ಬಳಕೆದಾರರ ಚಲನವಲನದ ಮೇಲೆ ಕಣ್ಣಿಟ್ಟು, ಖಾಸಗಿ ಮೇಸೇಜ್​ಗಳನ್ನ ಓದಿದ ಆರೋಪದ ಮೇಲೆ ಸುಮಾರು 52 ಉದ್ಯೋಗಿಗಳನ್ನ ವಜಾ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರೋ ಫೇಸ್​ಬುಕ್​ ಸಂಸ್ಥೆ ಸ್ಪಷ್ಟನೆ ಕೊಟ್ಟಿದ್ದು, ನಾವು ಬಳಕೆದಾರರ ಮಾಹಿತಿ ಕಾಪಾಡೋದಕ್ಕೆ ಬದ್ಧ ಎಂದಿದೆ.

ಮೂವರು ವೃದ್ಧೆ ಸ್ನೇಹಿತೆಯರಿಗೆ 100 ವರ್ಷದ ಸಂಭ್ರಮ
ಅಮೆರಿಕಾದಲ್ಲಿ ಮೂವರು ವೃದ್ಧೆಯರು ಕೊರೊನಾ ಲಸಿಕೆ ಪಡೆದ ನಂತರ ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಗರದ ರುತ್ ಶ್ವಾರ್ಟ್ಜ್, ಎಡಿತ್ ಮಾಸ್ಕೋ ಮತ್ತು ಲೋರೆನ್ ಪಿರೆಲ್ಲೊ ಎಂಬ ಮೂವರು ವೃದ್ಧೆಯರು 100ರ ಬರ್ತ್​ಡೇ ಸೆಲೆಬ್ರೇಟ್​ ಮಾಡಿದ್ದಾರೆ. ಹುಟ್ಟಹಬ್ಬದ ಸಂಭ್ರಮಾಚರಣೆಗೆ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳು ಸಾಕ್ಷಿಯಾಗಿದ್ದಾರೆ. ಈ ಮೂವರು ಚಿಕ್ಕ ವಯಸ್ಸಿನಿಂದಲೂ ಸ್ನೇಹಿತೆಯರು ಅನ್ನೋದು ವಿಶೇಷ.

ಧವನ್​ ಕೊಳಲು ವಾದನ, ಪ್ರುಥ್ವಿ ಶಾ ಗಾಯನ
ಶಿಖರ್ ಧವನ್ ನಾಯಕತ್ವದಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಭಾರತ ಏಕದಿನ ಮತ್ತು ಟಿ 20 ಪಂದ್ಯಗಳನ್ನು ಆಡಬೇಕಾಗಿದೆ. ಇದಕ್ಕೂ ಮೊದಲು ನಾಯಕ ಶಿಖರ್ ಧವನ್ ವಿಶ್ರಾಂತಿ ಮೂಡ್​ನಲ್ಲಿದ್ದಾರೆ. ಪೃಥ್ವಿ ಶಾ ಜೊತೆಗೆ ಧವನ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿರುವ ವಿಡಿಯೋವೊಂದು ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಧವನ್ ‘ಚೈನ್ ಕಿ ಬನ್ಸಿ’ ನುಡಿಸುತ್ತಿದ್ದರೆ, ಪೃಥ್ವಿ ಶಾ ತಮ್ಮ ಗಾಯನ ಕೌಶಲ್ಯವನ್ನು ತೋರಿಸುತ್ತಿದ್ದಾರೆ. ಶಿಖರ್ ಧವನ್ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ನಾವು ರಾಗದಲ್ಲಿ ಒಟ್ಟಿಗೆ ಸೇರಿದ್ದೇವೆ, ನಮ್ಮ ಸೂಪರ್ ಸ್ಟಾರ್ ಗಾಯಕ ಪೃಥ್ವಿ ಶಾ ಅಂತಾ ಧವನ್ ಶೀರ್ಷಿಕೆ ನೀಡಿದ್ದಾರೆ.

The post ನಗುತಾ ನಗುತಾ.. ಇವರ ಸ್ನೇಹಕ್ಕೆ ನೂರು ವರುಷದ ಸನಿಹ..! ಟಾಪ್ 10 ಸುದ್ದಿಗಳ ಕ್ವಿಕ್​​ರೌಂಡಪ್​ appeared first on News First Kannada.

Source: newsfirstlive.com

Source link