ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಚಿತ್ರರಂಗಕ್ಕೆ ಇಂದು ಬರ್ತಾರೆ, ನಾಳೆ ವಾಪಾಸು ಬರ್ತಾರೆ, ಸಿನಿಮಾ ಮಾಡ್ತಾರೆ ಅಂತ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ನಟಿ ರಮ್ಯಾ ಶಾಕ್​ ನೀಡಿದ್ದಾರೆ. 2000ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನ ಆಳಿ ಸ್ಯಾಂಡಲ್​ವುಡ್​ ಕ್ವೀನ್​ ಅಂತ ಬಿರುದು ಪಡೆದಿದ್ದ  ಮೋಹಕ ತಾರೆ ರಮ್ಯಾ ಇದೀಗ ಚಿತ್ರರಂಗ ಹಾಗೂ ರಾಜಕೀಯಕ್ಕೆ ಗುಡ್​ಬೈ ಹೇಳಿದ್ದಾರೆ.

ಹೌದು.. ಭಾನುವಾರದ ದಿನವಾದ ಕಾರಣ ಒಂದಷ್ಟು ಹೊತ್ತು ಸೋಶಿಯಲ್​ ಮೀಡಿಯಾದಲ್ಲಿ ಕಳೆಯಲು ಇಷ್ಟಪಟ್ಟ ರಮ್ಯಾ, ಇನ್​ಸ್ಟಾಗ್ರಾಮ್​ನಲ್ಲಿ ಪ್ರಶ್ನೋತ್ತರದ ಆಟ ಆಡಿದ್ದಾರೆ. ಇದೇ ಸಂದರ್ಭ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಇಷ್ಟು ವರ್ಷ ಆದ್ರೂ ರಮ್ಯಾ ಯಾಕೆ ಸಿನಿಮಾ ಮಾಡ್ತಿಲ್ಲ, ಇನ್ಮುಂದೆ ಸಿನಿಮಾ ಮಾಡಲ್ವೇನೋ ಅಂತ ಬರೀ ಊಹೆ ಮಾಡ್ತಿದ್ದವರಿಗೆಲ್ಲಾ ಇದೀಗ ಅಧಿಕೃತವಾಗಿ ಉತ್ತರ ಸಿಕ್ಕಿದೆ. ಸಿನಿಮಾ ಮಾತ್ರವಲ್ಲದೇ ರಾಜಕೀಯದಲ್ಲೂ ತಮ್ಮ ಸಮಯ ಮುಗಿದಿದೆ ಅಂತ ರಮ್ಯಾ ಸ್ಪಷ್ಟ ಪಡಿಸಿದ್ದಾರೆ.

ರಮ್ಯಾಗೆ ಅಭಿಮಾನಿಗಳು ಇನ್​ಸ್ಟಾಗ್ರಾಮ್​ನಲ್ಲಿ ಕೇಳಿದ ಪ್ರಶ್ನೆಗಳು ಹಾಗೂ ಅದಕ್ಕೆ ರಮ್ಯಾ ಉತ್ತರ ಹೀಗಿತ್ತು:

1. ಅಭಿಮಾನಿ ಪ್ರಶ್ನೆ  – ಮತ್ತೆ ಸಿನಿಮಾ ಮಾಡ್ತೀರಾ ?

ರಮ್ಯಾ – ನಟನೆ ಅನ್ನೋ ನನ್ನ ಹಡಗು ಮುಳುಗಿ ಬಹಳ ವರ್ಷಗಳೇ ಆಗಿದೆ.

2. ಅಭಿಮಾನಿ ಪ್ರಶ್ನೆ -ನೀವು ನಟನೆ ಯಾಕೆ ನಿಲ್ಲಿಸಿದ್ರಿ..?

ರಮ್ಯಾ – ನಿಮ್ಮ ಆಸೆಗೆ ನನ್ನ ನಿರಾಶೆಯ ಉತ್ತರವಿದು.. ನಾನು ಸಿನಿಮಾ ನಟನೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದೇನೆ.

3. ಅಭಿಮಾನಿ ಪ್ರಶ್ನೆ – ನೀವು ಮತ್ತೆ ರಾಜಕೀಯಕ್ಕೆ ಬರ್ತಿರಾ..?

ರಮ್ಯಾ –  ಇಲ್ಲಾ.. ನನ್ನ ರಾಜಕೀಯದ ಸಮಯ ಮುಗಿದಿದೆ.

ವಿಶೇಷ ಅಂದ್ರೆ, ಇಂದಿಗೆ ರಮ್ಯಾ ಚಿತ್ರರಂಗಕ್ಕೆ ಬಂದು ಬರೋಬ್ಬರಿ 18 ವರ್ಷಗಳು ಸಂದಿವೆ. 2003ರ ಏಪ್ರಿಲ್​ 25ರಂದು ರಮ್ಯಾ ನಟನೆಯ ಮೊದಲ ಸಿನಿಮಾ ‘ಅಭಿ’ ತೆರೆ ಕಂಡಿತ್ತು. ಆದ್ರೆ ಈ ವಿಚಾರದ ಬಗ್ಗೆಯೂ ರಮ್ಯಾಗೆ ಅರಿವೇ ಇರಲಿಲ್ಲ. ಅಭಿಮಾನಿಯೊಬ್ಬರು ಚಿತ್ರರಂಗದಲ್ಲಿ 18 ವರ್ಷಗಳನ್ನ ಪೂರೈಸಿರೋದಕ್ಕೆ ಅಭಿನಂದನೆಗಳು ಅಂದಾಗಲೇ ರಮ್ಯಾಗೆ ಈ ಬಗ್ಗೆ ತಿಳಿದಿದೆ. ಸೋ.. ಇದರಿಂದಲೇ ತಿಳಿಯುತ್ತೆ, ರಮ್ಯಾ ಚಿತ್ರರಂಗದಿಂದ ಬಹಳ ದೂರ ಸರಿದು ಬಿಟ್ಟಿದ್ದಾರೆ ಅನ್ನೋದು. ಆದರೂ ತಮ್ಮ ಸಿನಿ ಜರ್ನಿಯ ಬಗ್ಗೆ ಗಾಢವಾದ ಗೌರವ ಹೊಂದಿದ್ದಾರೆ ನಟಿ ರಮ್ಯಾ. ಇದನ್ನೂ ತಮ್ಮ ಉತ್ತರಗಳಲ್ಲಿ ತಿಳಿಸಿದ್ದಾರೆ.

ಅಂತೂ ರಮ್ಯಾ ಚಿತ್ರರಂಗಕ್ಕೆ ವಾಪಾಸು ಬರ್ತಾರೆ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ನಿರಾಸೆಯಾಗಿದೆ. ಚಿತ್ರರಂಗದ ತಮ್ಮ ಹಡಗು ಅದ್ಯಾವತ್ತೋ ಮುಳುಗಿ ಹೋಗಿದೆ ಅಂದ ರಮ್ಯಾ ಅದೆಷ್ಟೋ ಅಭಿಮಾನಿಗಳ ಮನಸ್ಸನ್ನ ಇಂದು ನೋಯಿಸಿರೋದಂತೂ ನಿಜ.

The post ‘ನಟನೆ ಮುಳುಗಿದ ಹಡಗು.. ರಾಜಕೀಯದಲ್ಲಿ ಟೈಂ ಮುಗಿತು’ ವಿರಾಗಿಯಾದ ರಮ್ಯಾ appeared first on News First Kannada.

Source: News First Kannada
Read More