ನಟನ ಚಿಕಿತ್ಸೆಗಾಗಿ ಅಂಗಲಾಚಿದ ಕುಟುಂಬ; ಚಿಂತೆ ಬೇಡ ಚಿಕಿತ್ಸೆ ಖರ್ಚು ನಂದು ಎಂದ ರಿಯಲ್ ಹೀರೋ


ಮಾರಕ ಕೊರೋನಾದಿಂದ ಬಳಲುತ್ತಿರುವ ಟಾಲಿವುಡ್​​ ಖ್ಯಾತ ಕೊರಿಯೋಗ್ರಾಫರ್​ ಮತ್ತು ನಟ ಶಿವಶಂಕರ್​ ಮಾಸ್ಟರ್​ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರೊಂದಿಗೆ ಧರ್ಮಪತ್ನಿ ಮತ್ತು ಅವರ ದೊಡ್ಡ ಮಗನಿಗೂ ಕೋವಿಡ್​ ಪಾಸಿಟಿವ್​ ಆಗಿ ಹೋಮ್​ ಕ್ವಾರೈಂಟೀನ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಶಿವಶಂಕರ್​ ಮಾಸ್ಟರ್ ಸ್ಥತಿ ಚಿಂತಾಜನಕಾವಾಗಿದ್ದು, ಚಿಕಿತ್ಸೆಗಾಗಿ ಪ್ರತಿದಿನ ಒಂದು ಲಕ್ಷ ಹಣಬೇಕಾಗಿದೆ. ಹಾಗಾಗಿ ತೆಲುಗು ಚಿತ್ರರಂಗ ಅಥವಾ ಯಾರಾದರೂ ಹಣ ಸಹಾಯ ಮಾಡಿ ಎಂದು ಶಿವಶಂಕರ್​ ಮಾಸ್ಟರ್​ ಕೊನೆ ಮಗ ಕೇಳಿಕೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ರಿಯಲ್​​ ಹೀರೋ ಸೋನು ಸೂದ್​​​​ ಶಿವಶಂಕರ್​​ ಮಾಸ್ಟರ್​​ ನೆರವಿಗೆ ಬಂದಿದ್ದಾರೆ. ತನ್ನ ಸೋಷಿಯಲ್​​ ಮೀಡಿಯಾದಲ್ಲಿ ಶಿವಶಂಕರ್​​ ಮಾಸ್ಟರ್​​​ ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ನನ್ನದು ಎಂದು ಘೋಷಿಸಿದ್ದಾರೆ.

ಅವರು ಹಸಿದ ಹೊಟ್ಟೆಗಳಿಗೆ ಅನ್ನ ನೀಡಿದವರು. ಅನಾರೋಗ್ಯದಿಂದ ಬಳಲಿದ್ದ ಅನೇಕರ ಪಾಲಿಗೆ ಆಶಾಕಿರಣವಾಗಿದ್ದವರು ಸೋನು ಸೂದ್​. ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಜನರ ಸಹಾಯ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಹೀರೋ ಆಗಿ ಗುರುತಿಸಿಕೊಂಡವರು. ದಟ್ ಇಸ್ ಸೋನು ಸೂದ್.​ ಸೋನು ಸಿನಿಮಾಗಳಿಗಿಂತಲೂ ಸಮಾಜ ಸೇವೆಯ ಮೂಲಕವೇ ಅಭಿಮಾನಿ ಜಗತ್ತನ್ನ ಸಂಪಾದಿಸಿದ್ದಾರೆ. ಕೆಲವೊಂದು ಸೆಲೆಬ್ರಿಟಿಗಳು ಅಂದ್ರೆ ಹಾಗೆ.. ಪರದೆಯ ಮೇಲೆ ಮಾಡುವ ನಟನೆಗೂ ನಿಜ ಜೀವನದಲ್ಲಿ ಮಾಡುವ ಕಾರ್ಯಕ್ಕೂ ಸಂಬಂಧವೇ ಇರಲ್ಲ. ಇಂತವರ ಲಿಸ್ಟ್​ ನಲ್ಲಿ ಕೋವಿಡ್​​ ಪ್ಯಾಂಡಮಿಕ್​ನಲ್ಲಿ ಮುನ್ನೆಲೆಗೆ ಬಂದಿರುವ ಹೆಸರೇ ಸೋನು ಸೂದ್​ರದ್ದು​​.

ಇದನ್ನೂ ಓದಿ: ತೆಲುಗು ನಟನ ಆರೋಗ್ಯ ಗಂಭೀರ; ದಿನಕ್ಕೆ 1 ಲಕ್ಷ ಖರ್ಚು..ಸಹಾಯ ಮಾಡಿ ಎಂದ ಕುಟುಂಬ

News First Live Kannada


Leave a Reply

Your email address will not be published. Required fields are marked *