ನಟಿಯ ಜೊತೆ ರವಿ ತೇಜ ಲಿಪ್​ ಲಾಕ್​; ವೈರಲ್​ ಫೋಟೋದಲ್ಲಿರುವ ಸುಂದರಿ ಯಾರು? ಅರೆರೆ ‘ಕಿಲಾಡಿ’ | Ravi Teja Dimple Hayathi Meenakshi Chaudhary lip lock photo from Khiladi movie goes viral


ನಟಿಯ ಜೊತೆ ರವಿ ತೇಜ ಲಿಪ್​ ಲಾಕ್​; ವೈರಲ್​ ಫೋಟೋದಲ್ಲಿರುವ ಸುಂದರಿ ಯಾರು? ಅರೆರೆ ‘ಕಿಲಾಡಿ’

ರವಿ ತೇಜ ಲಿಪ್​ ಲಾಕ್​ ಫೋಟೋ ವೈರಲ್​

ಸಿನಿಮಾಗಳಲ್ಲಿ ನಟ-ನಟಿಯರು ಲಿಪ್​ ಲಾಕ್​ ಮಾಡುವುದು ಈಗ ಸಾಮಾನ್ಯವಾಗಿದೆ. ಆದರೂ ಕೂಡ ಕೆಲವು ಕಲಾವಿದರು ಈ ವಿಚಾರದಲ್ಲಿ ಮಡಿವಂತಿಕೆ ಕಾಯ್ದುಕೊಂಡು ಬಂದಿದ್ದಾರೆ. ಟಾಲಿವುಡ್​ ನಟ ರವಿ ತೇಜ (Ravi Teja) ಅವರು ಕೂಡ ಇಷ್ಟು ವರ್ಷಗಳ ಕಾಲ ಕಿಸ್ಸಿಂಗ್​ ದೃಶ್ಯಗಳಿಂದ ದೂರ ಉಳಿದುಕೊಂಡಿದ್ದರು. ಆದರೆ ಈಗ ಅವರು ಆ ನಿಯಮವನ್ನು ಮುರಿದಿದ್ದಾರೆ! ತಮ್ಮ ಜೊತೆ ‘ಕಿಲಾಡಿ’ ಸಿನಿಮಾದಲ್ಲಿ ನಟಿಸಿರುವ ಸುಂದರಿಗೆ ಅವರು ಲಿಪ್​ ಲಾಕ್​ (Lip Lock) ಮಾಡಿದ್ದಾರೆ. ಅವರು ತುಂಬ ಇಂಟಿಮೇಟ್​ ಆಗಿ ಕಿಸ್​ ಮಾಡುತ್ತಿರುವ ಫೋಟೋ ಲೀಕ್​ ಆಗಿದೆ. ರಾತ್ರೋರಾತ್ರಿ ವೈರಲ್​ ಆಗಿರುವ ಈ ಫೋಟೋದ ಹಿಂದೆ ಕೆಲವು ಮರ್ಮ ಕೂಡ ಇದೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇದ್ದಾರೆ. ಡಿಂಪಲ್​ ಹಯಾತಿ (Dimple Hayathi) ಮತ್ತು ಮೀನಾಕ್ಷಿ ಚೌಧರಿ ಅವರು ರವಿ ತೇಜ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಇಬ್ಬರಲ್ಲಿ ರವಿ ತೇಜ ಲಿಪ್​ ಲಾಕ್​ ಮಾಡಿದ್ದು ಯಾರ ಜೊತೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆ ವಿಚಾರವನ್ನು ಚಿತ್ರತಂಡ ಬೇಕಂತಲೇ ಮರೆಮಾಚಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ತೆಲುಗಿನಲ್ಲಿ ತಯಾರಾಗಿರುವ ‘ಕಿಲಾಡಿ’ ಸಿನಿಮಾ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ಬಿಡುಗಡೆ ಆಗಲಿದೆ. ಫೆ.11ರಂದು ಈ ಸಿನಿಮಾವನ್ನು ರಿಲೀಸ್​ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಜನಮೆಚ್ಚುಗೆ ಗಳಿಸಿವೆ. ಭರ್ಜರಿಯಾಗಿ ಪ್ರಚಾರ ಮಾಡುತ್ತಿರುವ ಚಿತ್ರತಂಡಕ್ಕೆ ಈಗ ಈ ಲಿಪ್​ ಲಾಕ್​ ಫೋಟೋ ವರದಾನವಾಗಿದೆ.

ಈ ಫೋಟೋದಲ್ಲಿ ಇರುವ ನಟಿ ಯಾರು ಎಂಬುದು ಬಹಿರಂಗ ಆಗಿಲ್ಲ. ಆ ಪ್ರಶ್ನೆಗೆ ಉತ್ತರ ತಿಳಿಯಬೇಕು ಎಂದರೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಬೇಕಾಗುವುದು ಅನಿವಾರ್ಯ. ‘ಕಿಲಾಡಿ’ ಎಂದು ಶೀರ್ಷಿಕೆಗೆ ತಕ್ಕಂತೆಯೇ ಚಿತ್ರತಂಡ ಪ್ರಚಾರ ಪಡೆಯುತ್ತಿದೆ. ಅಂದಹಾಗೆ, ಈ ಸಿನಿಮಾ ಬಿಡುಗಡೆಗೂ ಮುನ್ನವೇ ಭರ್ಜರಿ ಬಿಸ್ನೆಸ್​ ಮಾಡಿದೆ. ಅದರಿಂದ ನಿರ್ಮಾಪಕರು ತುಂಬ ಖುಷಿ ಆಗಿದ್ದಾರೆ.

‘ಕಿಲಾಡಿ’ ಚಿತ್ರದ ವಿತರಣೆ ಹಕ್ಕುಗಳು ಭಾರಿ ಮೊತ್ತಕ್ಕೆ ಸೇಲ್​ ಆಗಿವೆ. ಒಟಿಟಿ, ಕಿರುತೆರೆ ಪ್ರಸಾರದ ಹಕ್ಕುಗಳ ವಿಚಾರದಲ್ಲಿಯೂ ದೊಡ್ಡ ಆಫರ್​ ಬಂದಿದೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾದ ರಿಲೀಸ್​ಗೂ ಮುನ್ನವೇ ನಿರ್ಮಾಪಕರು ಲಾಭದಲ್ಲಿದ್ದಾರೆ. ಇದಕ್ಕೆ ಕಾರಣವಾದ ನಿರ್ದೇಶಕರಿಗೆ ಅವರು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಉಡುಗೊರೆಯನ್ನು ನೀಡಿದ್ದಾರೆ. 1.5 ಕೋಟಿ ರೂಪಾಯಿ ಬೆಲೆಯ ರೇಂಜ್​ ರೋವರ್​ ಕಾರನ್ನು ನಿರ್ದೇಶಕ ರಮೇಶ್​ ವರ್ಮಾಗೆ ನಿರ್ಮಾಪಕರು ಕೊಟ್ಟಿದ್ದಾರೆ.

ನಿರ್ದೇಶಕರು ಕಾರನ್ನು ಉಡುಗೊರೆಯಾಗಿ ಪಡೆಯುತ್ತಿರುವ ಫೋಟೋ ಕೂಡ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಎಲ್ಲರೂ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ‘ಪುಷ್ಪ’ ಸಿನಿಮಾಗೆ ಸೂಪರ್​ ಹಿಟ್​ ಹಾಡುಗಳನ್ನು ನೀಡಿದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್​ ಅವರೇ ‘ಕಿಲಾಡಿ’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆ ಕಾರಣದಿಂದಲೂ ಈ ಸಿನಿಮಾ ಮೇಲೆ ಹೈಪ್​ ಸೃಷ್ಟಿ ಆಗಿದೆ.

TV9 Kannada


Leave a Reply

Your email address will not be published.