ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್​​ ಲವ್​ ಶುರುವಾಗಿದ್ದು ಹೇಗೆ?​


ಬಾಲಿವುಡ್​ ಸೆಲೆಬ್ರಿಟಿ ಜೋಡಿ ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ ಸದ್ಯದಲ್ಲೇ ಸಪ್ತಪದಿ ತುಳಿಯಲ್ಲಿದ್ದಾರೆ. ರಾಜಸ್ಥಾನದ ಸಿಕ್ಸ್​ ಸೆನ್ಸ್​ ಹೋಟೆಲ್​ನಲ್ಲಿ ಕತ್ರಿನಾ ವಿಕ್ಕಿ ಕಲ್ಯಾಣ ನಡೆಯಲ್ಲಿದ್ದು, ಈಗಾಗಲೆ ಭರ್ಜರಿ ತಯಾರಿ ನಡೆಯುತ್ತಿದೆ. ಇಷ್ಟೆಲ್ಲಾ ತಯಾರಿ ನಡೀತಿದ್ರು ಕೂಡ ಈ ಜೋಡಿ ಮಾತ್ರ ತಮ್ಮ ಮದುವೆ ಬಗ್ಗೆ ಆಗಲಿ ಅಥವಾ ತಮ್ಮ ಪ್ರೀತಿ ಬಗ್ಗೆ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಕತ್ರಿನಾ ಮತ್ತು ವಿಕ್ಕಿ ಲವ್​ ಸ್ಟೋರಿ ಎಲ್ಲಿಂದ ಶುರುವಾಯ್ತು ಇಲ್ಲಿದೆ ಮಾಹಿತಿ.

2018ರಲ್ಲಿ ಕಾಫಿ ವಿತ್​ ಕರಣ್​ ಶೋಗೆ ಕತ್ರಿನಾ ಗೆಸ್ಟ್​ ಆಗಿ ಬಂದಿದ್ದರು. ಅಂದು ಕರಣ್​ ಜೋಹರ್​ ಕತ್ರಿನಾಗೆ ನೀವು ಯಾವ ನಟನ ಜೊತೆ ಚೆನ್ನಾಗಿ ಕಾಣಿಸುತ್ತಿರಾ ಅಂತ ನಿಮಗೆ ಅನ್ನಿಸುತ್ತದೆ ಅಂತ ಪ್ರಶ್ನೆ ಕೇಳುತ್ತಾರೆ. ಆಗ ಕತ್ರಿನಾ ವಿಕ್ಕಿ ಕೌಶಲ್​ ಅಂತ ಉತ್ತರಿಸುತ್ತಾರೆ. ಇನ್ನು ವಿಕ್ಕಿ ಕೌಶಲ್​ ಕಾಫಿ ವಿತ್​ ಕರಣ್​ ಶೋಗೆ ಗೆಸ್ಟ್​ ಆಗಿ ಬಂದಾಗ ಕರಣ್​​, ಹಿಂದೊಮ್ಮೆ ಕತ್ರಿನಾ ಈ ಶೋಗೆ ಬಂದಾಗ ವಿಕ್ಕಿ ಬಗ್ಗೆ ಆಡಿದ ಮಾತುಗಳನ್ನು ಹೇಳುತ್ತಾರೆ. ಕರಣ್​ ಮಾತುಗಳನ್ನು ಕೇಳಿದ ವಿಕ್ಕಿ ನಾಚಿ ನೀರಾಗುತ್ತಾರೆ.

2019ರ IIFA ಅರ್ವಾಡ್​ ಫಂಕ್ಷನ್​ನಲ್ಲಿ ಮೊದಲ ಬಾರಿಗೆ ಇಬ್ಬರು ಒಟ್ಟಗೆ ಕಾಣಿಸಿಕಳ್ಳುತ್ತಾರೆ. ಇದಾದ ನಂತರ ಮತ್ತೊಂದು ಅರ್ವಾಡ್​ ಫಂಕ್ಷನ್​ನಲ್ಲಿ ಎಲ್ಲರ ಮುಂದೆ ವೇದಿಕೆ ಮೇಲೆ ವಿಕ್ಕಿ ಕತ್ರಿನಾಗೆ ಪ್ರಪೋಸ್​ ಮಾಡುತ್ತಾರೆ. ಈ ವಿಷಯ ಬಾಲಿವುಡ್​ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತದೆ.

2020ರ ಹೋಲಿ ಹಬ್ಬದಂದು ಇಶಾ ಅಂಬಾನಿ ಆಯೋಜಿಸಿದ್ದ ಹೋಲಿ ಪಾರ್ಟಿಗೆ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿತ್ತು. ಅದರಂತೇ ವಿಕ್ಕಿ ಮತ್ತು ಕತ್ರಿನಾ ಕೂಡ ಭಾಗಿಯಾಗಿದ್ದು , ಈ ವೇಳೆ ವಿಕ್ಕಿ , ಕತ್ರಿನಾ ಹಣೆಗೆ ಹೋಲಿ ಹಚ್ಚುವ ಪೋಟೋ ಸಖತ್​ ವೈರಲ್​ ಆಗಿತ್ತು.

News First Live Kannada


Leave a Reply

Your email address will not be published. Required fields are marked *