ನಟಿ ಕಾವ್ಯಾ ಶಾಸ್ತ್ರಿ ಗೋವಾ ಜಾಲಿ ಟ್ರಿಪ್​​; ಸಖತ್​​ ಎಂಜಾಯ್​​


ನಟಿ ಹಾಗೂ ನಿರೂಪಕಿ ಕಾವ್ಯಾ ಶಾಸ್ತ್ರಿ ಅವರು ತುಂಬಾನೇ ಜಾಯ್​ಫುಲ್ ಹುಡುಗಿ. ಸದ್ಯ ಬೆಳ್ಳಿತೆರೆಯಮೇಲೆ ಮಿಂಚಲು ಸಜ್ಜಾಗಿರುವ ಕಾವ್ಯ ತಮ್ಮ ಬ್ಯುಸಿ ಶಡ್ಯೂಲ್​ನಲ್ಲಿ ಕೊಂಚ ಗ್ಯಾಪ್​ ಸಿಕ್ಕರು ಸಾಕು ಪ್ರವಾಸದ ಪ್ರಯಾಣಕ್ಕೆ ಅನಿಯಾಗುತ್ತಾರೆ.

ದೇಶ ಸುತ್ತಿ ನೋಡು ಕೋಶ ಓದಿ ನೋಡು ಅಂತಾ ದೊಡ್ಡವರು ಹೇಳಿದ ಮಾತನ್ನ ಕಾವ್ಯ ತುಂಬಾನೇ ಸೀರಿಯಸ್​ ಆಗಿ ಪಾಲಿಸ್ತಾರೆ. ಕೋಶ ಓದ್ತಾರೋ ಬಿಡ್ತಾರೋ ದೇಶ ಮಾತ್ರ ಸುತ್ತೊದನ್ನ ಮಿಸ್​ ಮಾಡೊದೇ ಇಲ್ಲ. ಅರ್ಥಾತ್ ಪ್ರವಾಸ ಮಾಡೊದು ಅಂದ್ರೇ ಕಾವ್ಯಗೆ ಸಖತ್​ ಇಷ್ಟ.

ಬಿಡುವಿಲ್ಲದ ಕೆಲಸದ ನಡುವೆ ಬ್ರೇಕ್​ ತಗೊಂಡು ಟೂರ್​ ಮಾಡ್ತಾನೆ ಇರ್ತಾರೆ ಕಾವ್ಯ. ಈ ಬಗ್ಗೆ ಈ ಹಿಂದೆ ನ್ಯೂಸ್​ ಫರ್ಸ್ಟ್​ ಜೊತೆ ಮಾತ್ನಾಡಿದ್ದ ನಟಿ…ನನಗೆ ಟೂರ್​ ಮಾಡೊದು ಅಂದ್ರೇ ಒಂತಾರಾ ಹುಟ್ಟು ಅಂತಾ ಹೇಳಿದ್ರು. ಈ ಮಾತು ಅಕ್ಷರ ಸಹ ಸತ್ಯ ನೋಡಿ. ಮೊನ್ನೆ ಮೊನ್ನೆಯಷ್ಟೆ ಮೈಸೂರು, ಎಚ್​.ಡಿ ಕೋಟೆಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನ ಎಂಜಾಯ್ ಮಾಡಿದ್ರು ಕಾವ್ಯ.

ಸದ್ಯ ಮತ್ತೊಂದು ಪ್ರವಾಸದಲ್ಲಿರುವ ಕಾವ್ಯ, ಗೋವಾದಲ್ಲಿ ಬಿಡುಬಿಟ್ಟಿದ್ದಾರೆ. ಅಲ್ಲಿನ ಬೀಚ್ಗಳಲ್ಲಿ ಎಂಜಾಯ್ ಮಾಡುತ್ತಿರುವ ಬೆಂಗಳೂರಿನ ಬೆಡಗಿ, ಸ್ಟ್ರೀಟ್​ ಶಾಪಿಂಗ್ ಮಾಡಿದ್ದಾರೆ. ಅಷ್ಟೇಯಲ್ಲ ಗೋವಾ​ದಲ್ಲಿರುವ ವಿಶೇಷ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ಒಟ್ನಲ್ಲಿ ಆಗಾಗ ಪ್ರವಾಸ ಅಂತಾ ಹೊರಡುವ ಕಾವ್ಯ, ತಮ್ಮ ಪ್ರಯಾಣದ ಅನುಭಗಳನ್ನ ಎಂಜಾಯ್​ ಮಾಡುತ್ತಿರುತ್ತಾರೆ. ನಟಿ ಒಂದಕ್ಕಿಂತ ಒಂದು ವಿಭಿನ್ನವಾದ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರು, ಸಂಸ್ಕೃತಿಯನ್ನ ತಿಳಿಯಲು ಸದಾ ತುಡಿಯುತ್ತಿರುತ್ತಾರೆ.

News First Live Kannada


Leave a Reply

Your email address will not be published. Required fields are marked *