ಬೆಂಗಳೂರು: ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟಿ ಬಿ.ಜಯಾ ನಿನ್ನೆ ಮೃತಪಟ್ಟಿದ್ದರು. ಇಂದು ಅಂತಿಮ ವಿಧಿವಿಧಾನದಂತೆ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ ಅಂತಾ ನಂಬಲಾಗಿತ್ತು. ಇದೀಗ ಬಂದ ಮಾಹಿತಿ ಪ್ರಕಾರ, ಜಯಾ ಅವರ ಮೃತದೇಹವನ್ನ ಸಂಬಂಧಿಕರು ಅನಾಥವಾಗಿ ಬಿಟ್ಟಿದ್ದಾರೆ. ಹೀಗಾಗಿ ಸ್ಥಳೀಯರೇ ಅವರ ಅಂತ್ಯಸಂಸ್ಕಾರ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್​ ಆಗಿದೆ.

ಹಿರಿಯ ನಟಿ ಬಿ ಜಯಮ್ಮ ಮಾಡಿದ ತಪ್ಪಾದ್ರೂ ಏನು?
ಇಂದು ಬೆಳಗ್ಗೆ ಆ್ಯಂಬುಲೆನ್ಸ್​ ಡ್ರೈವರ್​,  ಬಿ ಜಯಾ ಅವರ ಮೃತದೇಹವನ್ನ ಚಾಮರಾಜನಗರದ ಟಿಆರ್​​ಮಿಲ್ ಬಳಿಯಿರುವ ಚಿತಾಗಾರಕ್ಕೆ ತೆಗೆದುಕೊಂಡು ಬಂದಿದ್ದರು. ಸುಮಾರು 1 ಗಂಟೆ ಕಾದರೂ ಕುಟುಂಬದ ಯಾವ ಸದಸ್ಯರೂ ಅಲ್ಲಿಗೆ ಬಂದಿರಲಿಲ್ಲ. ಕಾದೂ ಕಾದೂ ಹೈರಾಣಾಗಿದ್ದ ಆ್ಯಂಬುಲೆನ್ಸ್ ಡ್ರೈವರ್ ಮೃತದೇಹವನ್ನು ಅಲ್ಲಿಯ ಇಳಿಸಿ ಹೋಗಿದ್ದ.

ರಸ್ತೆ ಬದಿ ಅನಾಥವಾಗಿದ್ದ ಮೃತದೇಹವನ್ನು ಕಂಡ ಸ್ಥಳೀಯರು ಒಂದು ಸಲ ದಂಗಾಗಿದ್ದಾರೆ. ನಂತರ ಯಾರಿರಬಹುದು ಅಂತಾ ತನಿಖೆ ಮಾಡಿದಾಗ ಬಿ.ಜಯಾ ಅನ್ನೋದು ಗೊತ್ತಾಗಿದೆ. ನಂತರ ಅಲ್ಲಿದ್ದ ಸ್ಥಳೀಯರೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.

ಸಂಬಂಧಿಕರು ಮಾಡಬೇಕಾದ ಎಲ್ಲ ಕಾರ್ಯಗಳನ್ನು ಸ್ಥಳೀಯರೇ ಮಾಡಿ ಮುಗಿಸಿದ್ದಾರೆ ಎನ್ನಲಾಗಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಚಿತ್ರರಂಗದವರಾಗಲಿ, ಕುಟುಂಬದವರಾಗಲಿ, ಸಂಬಂಧಿಕರಾಗಲಿ ಯಾರೂ ಬಾರದಿರೋದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂರಾರು ಚಿತ್ರಗಳಲ್ಲಿ ತಾಯಿ ಪಾತ್ರ ಮಾಡಿದವರ ಶೋಚನೀಯ ಕಥೆ ಇದು. ಜಯಾ ಮಾಡಿದ ತಪ್ಪಾದ್ರು ಏನು ಅನ್ನೋ ಪ್ರಶ್ನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಜನ ಕೇಳುತ್ತಿದ್ದಾರೆ.

ಈ ವಿಚಾರ ಎಲ್ಲೆಡೆ ಗೊತ್ತಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಬಿ.ಜಯಾ ಅವರ ಸಂಬಂಧಿಯೊಬ್ಬರು, ಹಾಗೆಲ್ಲಾ ಏನೂ ನಡೆದಿಲ್ಲ. ಅಂತ್ಯಕ್ರಿಯೆ ವೇಳೆ ಜಯಾ ಕುಟುಂಬದ 10 ಸದಸ್ಯರು ಭಾಗಿಯಾಗಿದ್ದರು. ನಮ್ಮ ಸಂಪ್ರದಾಯಂತೆ ಮಾಡಲಾಗಿದೆ. ಯಾರೋ ಕಿಡಿಗೇಡಿಗಳು ಪ್ರಚಾರಕ್ಕಾಗಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟಿ ಬಿ.ಜಯಾ ಇನ್ನಿಲ್ಲ

The post ನಟಿ ಬಿ.ಜಯಾಗೆ ಇದೆಂಥ ಅವಮಾನ? ಸ್ಥಳೀಯರಿಂದ ಅಂತ್ಯಕ್ರಿಯೆ appeared first on News First Kannada.

Source: newsfirstlive.com

Source link