ನಟಿ ಶಿಲ್ಪಾ ಶೆಟ್ಟಿಗೆ ಮತ್ತೆ ಶಾಕ್​​.. ನೋಟಿಸ್​​ ಕೊಟ್ಟ ಕೋರ್ಟ್


ಅಶ್ಲೀಲ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಪತಿ ರಾಜ್​​ ಕುಂದ್ರಾರನ್ನು ಬಿಡಿಸಲು ಬಾಲಿವುಡ್​​​ ನಟಿ ಶಿಲ್ಪಾ ಶೆಟ್ಟಿ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಕೊನೆಗೂ ರಾಜ್​​ ಕುಂದ್ರಾಗೆ ಬೇಲ್​ ಸಿಕ್ಕ ಬಳಿಕ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತನ್ನ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ನಾರ್ಮಲ್​​ ಆಗಿ ತಮ್ಮ ಕೆಲಸ ಕಾರ್ಯಗಳತ್ತ ಮುಖ ಮಾಡಿದ್ದರು.

ಕಳೆದ ತಿಂಗಳು ತನ್ನ ಪತಿಯೊಂದಿಗೆ ಸೇರಿ ನ್ಯೂ ಇಯರ್​ ಕೂಡ ಸೆಲೆಬ್ರೇಟ್​ ಮಾಡಿದ್ದರು. ಎಲ್ಲವೂ ಸರಿಹೋಯ್ತು ಎನ್ನುವ ಹೊತ್ತಿಗೆ ಈಗ ಮತ್ತೆ ಶಿಲ್ಪಾ ಶೆಟ್ಟಿಗೆ ಕೋರ್ಟ್​ ಶಾಕ್​​ ನೀಡಿದ್ದಾರೆ.

ಹೌದು, ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿಗೆ ಮುಂಬೈನ ಅಂಧೇರಿ ನ್ಯಾಯಾಲಯವು ಸಮನ್ಸ್​ ಜಾರಿ ಮಾಡಿದೆ. ಉದ್ಯಮಿ ಒಬ್ಬರು ನೀಡಿದ ದೂರಿನ ಅನ್ವಯ ನ್ಯಾಯಾಲಯವು ನಟಿ ಶಿಲ್ಪಾ ಶೆಟ್ಟಿ ರಾಜ್​​ ಕುಂದ್ರಾ, ಸಹೋದರಿ ಶಮಿತಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿಗೆ ಸಮನ್ಸ್​ ನೀಡಿದೆ.

21 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿ ಮಾಡಿಲ್ಲ ಅಂತ ಆರೋಪಿಸಿ ಉದ್ಯಮಿ ದೂರು ನೀಡಿದ್ರು. ಈ ಹಿನ್ನೆಲೆ ಅಂಧೇರಿ ನ್ಯಾಯಾಲಯವು ಫೆಬ್ರವರಿ 28 ರಂದು ಮೂವರಿಗೂ ಕೋರ್ಟ್​​ಗೆ ಹಾಜರಾಗುವಂತೆ ತಿಳಿಸಿದೆ.

The post ನಟಿ ಶಿಲ್ಪಾ ಶೆಟ್ಟಿಗೆ ಮತ್ತೆ ಶಾಕ್​​.. ನೋಟಿಸ್​​ ಕೊಟ್ಟ ಕೋರ್ಟ್ appeared first on News First Kannada.

News First Live Kannada


Leave a Reply

Your email address will not be published.